ಕೊರೋನಾ ನಿಗ್ರಹಿಸುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದ ಸರಕಾರ – ಆರೋಪ

July 6, 2020
2:32 PM
 ಮಂಗಳೂರು: ಕೊರೋನಾ ವೈರಸ್ ನ ಹರಡುವಿಕೆ ದೇಶದಲ್ಲಿ ಅತ್ಯಂತ ಅಪಾಯದಲ್ಲಿದ್ದು,ಸಾಮುದಾಯಿಕವಾಗಿ ವಿಸ್ತರಿಸುತ್ತಿದೆ.ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಕಟ್ಟಿ ಕುಳಿತಿದೆ ಸಿಪಿಐಎಂ  ಮಂಗಳೂರು ನಗರ ಮುಖಂಡರಾದ ಪ್ರದೀಪ್ ಕುಮಾರ್ ರವರು ಕೇಂದ್ರ, ರಾಜ್ಯ ಸರಕಾರಗಳನ್ನು  ಟೀಕಿಸಿದರು.
ಜನರ ಜೀವವನ್ನು ರಕ್ಷಿಸುವ ಬದಲು ವೈದ್ಯಕೀಯ ಉಪಕರಣಗಳನ್ನು ಖರೀದಿಸುವಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಅತ್ತ ಕೇಂದ್ರ ಸರ್ಕಾರವೂ ಇದೇ ಸಂಧರ್ಭವನ್ನು ದುರುಪಯೋಗಪಡಿಸಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಮುಂದಾಗಿದೆ. ಜನರ ಕೈಗೆ ನೇರ ನಗದು ವರ್ಗಾವಣೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಬದಲು,ಈಗಾಗಲೇ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ.ಯ ಪರಿಹಾರದಲ್ಲಿ ಬಹುಪಾಲನ್ನು ದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ನೀಡುವ ಮೂಲಕ ಜನತೆಯ ಬದುಕನ್ನು ಸರ್ವನಾಶ ಮಾಡಲು ಹೊರಟಿದೆ  ಎಂದು  ಸಿಪಿಐಎಂ ಮಂಗಳೂರು ನಗರ ಮುಖಂಡರಾದ ಪ್ರದೀಪ್ ಕುಮಾರ್ ರವರು ಕೇಂದ್ರ, ರಾಜ್ಯ ಸರಕಾರಗಳನ್ನು  ಟೀಕಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಹಿರಿಯ ಸದಸ್ಯರಾದ ಕಿಶೋರ್, ರಘುವೀರ್,ಕಟ್ಟಡ ಕಾರ್ಮಿಕರ ಸಂಘಟನೆಯ ನಾಯಕರಾದ ಮನೋಜ್, ಡಿವೈಎಫ್ ಐ  ನಾಯಕರಾದ ಪ್ರಶಾಂತ್ , ನಾಗೇಂದ್ರ, ಸನತ್, ಮಹಿಳಾ ಮುಖಂಡರಾದ ಸರೋಜಿನಿ, ಹರಿಣಾಕ್ಷಿ ಮುಂತಾದವರು ಹಾಜರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ
ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು
August 10, 2026
6:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ
August 9, 2026
12:36 PM
by: ಸಾಯಿಶೇಖರ್ ಕರಿಕಳ
ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ
August 9, 2026
6:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror