ಮಂಗಳೂರು: ಕೊರೋನಾ ವೈರಸ್ ನ ಹರಡುವಿಕೆ ದೇಶದಲ್ಲಿ ಅತ್ಯಂತ ಅಪಾಯದಲ್ಲಿದ್ದು,ಸಾಮುದಾಯಿಕವಾಗಿ ವಿಸ್ತರಿಸುತ್ತಿದೆ.ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಕಟ್ಟಿ ಕುಳಿತಿದೆ ಸಿಪಿಐಎಂ ಮಂಗಳೂರು ನಗರ ಮುಖಂಡರಾದ ಪ್ರದೀಪ್ ಕುಮಾರ್ ರವರು ಕೇಂದ್ರ, ರಾಜ್ಯ ಸರಕಾರಗಳನ್ನು ಟೀಕಿಸಿದರು.
ಜನರ ಜೀವವನ್ನು ರಕ್ಷಿಸುವ ಬದಲು ವೈದ್ಯಕೀಯ ಉಪಕರಣಗಳನ್ನು ಖರೀದಿಸುವಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಅತ್ತ ಕೇಂದ್ರ ಸರ್ಕಾರವೂ ಇದೇ ಸಂಧರ್ಭವನ್ನು ದುರುಪಯೋಗಪಡಿಸಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಮುಂದಾಗಿದೆ. ಜನರ ಕೈಗೆ ನೇರ ನಗದು ವರ್ಗಾವಣೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಬದಲು,ಈಗಾಗಲೇ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ.ಯ ಪರಿಹಾರದಲ್ಲಿ ಬಹುಪಾಲನ್ನು ದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ನೀಡುವ ಮೂಲಕ ಜನತೆಯ ಬದುಕನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಸಿಪಿಐಎಂ ಮಂಗಳೂರು ನಗರ ಮುಖಂಡರಾದ ಪ್ರದೀಪ್ ಕುಮಾರ್ ರವರು ಕೇಂದ್ರ, ರಾಜ್ಯ ಸರಕಾರಗಳನ್ನು ಟೀಕಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಹಿರಿಯ ಸದಸ್ಯರಾದ ಕಿಶೋರ್, ರಘುವೀರ್,ಕಟ್ಟಡ ಕಾರ್ಮಿಕರ ಸಂಘಟನೆಯ ನಾಯಕರಾದ ಮನೋಜ್, ಡಿವೈಎಫ್ ಐ ನಾಯಕರಾದ ಪ್ರಶಾಂತ್ , ನಾಗೇಂದ್ರ, ಸನತ್, ಮಹಿಳಾ ಮುಖಂಡರಾದ ಸರೋಜಿನಿ, ಹರಿಣಾಕ್ಷಿ ಮುಂತಾದವರು ಹಾಜರಿದ್ದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel