ಕೊರೋನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗ ಇಲ್ಲಿಗೇ ಮುಗಿಯುತ್ತಿಲ್ಲ. ಇದರ ಭೀಕರತೆ ಇನ್ನು ಬರಬೇಕಿದೆ. ಸರ್ಕಾರಗಳು ಸರಿಯಾದ ಕ್ರಮಗಳನ್ನು ಜಾರಿಗೆ ತರಲು ಈಗಲೂ ಪ್ರಾರಂಭಿಸದಿದ್ದರೆ ವೈರಸ್ ಇನ್ನೂ ಅನೇಕ ಜನರಿಗೆ ತಗಲುತ್ತದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಕೊರೋನಾ ವೈರಸ್ ಹರಡಲು ಪ್ರಾರಂಭವಾದ ಆರು ತಿಂಗಳ ನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಎಚ್ಚರಿಸಿದೆ. ಕೊರೋನಾ ಬಗ್ಗೆ ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಇದುವರೆಗೆ ಕೊರೋನಾ ಟೆಸ್ಟಿಂಗ್, ಟ್ರೇಸಿಂಗ್ ಹಾಗೂ ಐಸೋಲೇಶನ್, ಕ್ವಾರಂಟೈನ್ ನಲ್ಲಿಯೇ ಕೊರೋನಾ ವೈರಸ್ ತಡೆಯ ಹಂತದಲ್ಲೇ ಉಳಿದಿದೆ. ಅದಕ್ಕಿಂತ ದಾಟಿ ಮುಂದೆ ಸಾಗಬೇಕಿದೆ. ಏಕೆಂದರೆ “ಕೊರೋನಾ ವೈರಸ್ ಕೊನೆಗೊಂಡಿಲ್ಲ, ಇನ್ನಷ್ಟೇ ಗಂಭೀರ ಹಂತ ತಲುಪಲಿದೆ ಎಂದು ಹೇಳಲು ನನಗೆ ವಿಷಾದವಿದೆ. ನಾವು ಈಗಾಗಲೇ ಬಹಳಷ್ಟು ಕಳೆದುಕೊಂಡಿದ್ದೇವೆ. ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಮುಂದೆ ಬರಲಿದೆ ಎನ್ನುವುದಕ್ಕೆ ವೇದನೆಯಾಗುತ್ತದೆ ಎಂದರು.
ಈಗಾಗಲೇ ಸಾವನ್ನಪ್ಪಿದ ರೋಗಿಗಳ ಸಂಖ್ಯೆ ಈಗ 5,00,000 ಕ್ಕಿಂತ ಹೆಚ್ಚಾಗಿದೆ. ವಿಶ್ವದ ಅರ್ಧದಷ್ಟು ಪ್ರಕರಣಗಳು ಯುಎಸ್ ಮತ್ತು ಯುರೋಪಿನಲ್ಲಿವೆ ಆದರೆ ಕೋವಿಡ್ -19 ಅಮೆರಿಕದಲ್ಲಿ ಈಗ ವೇಗವಾಗಿ ಬೆಳೆಯುತ್ತಿದೆ. ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಮೇಲೂ ಪರಿಣಾಮ ಬೀರುತ್ತಿದೆ, ಅಲ್ಲಿ ಜುಲೈ ಅಂತ್ಯದವರೆಗೆ ಇದು ಕಡಿಮೆಯಾಗುವ ನಿರೀಕ್ಷೆ ಇಲ್ಲ ಎಂದ ಅಧಾನೊಮ್ ಘೆಬ್ರೆಯೆಸಸ್ ನಾವೆಲ್ಲರೂ ಇದು ಮುಗಿಯಬೇಕೆಂದು ಬಯಸುತ್ತೇವೆ, ನಾವೆಲ್ಲರೂ ನಮ್ಮ ಸುಂದರ ಜೀವನವನ್ನು ಮುಂದುವರಿಸಲು ಬಯಸುತ್ತೇವೆ. ಆದರೆ ಕಠಿಣ ವಾಸ್ತವವೆಂದರೆ ಇದು ಮುಗಿಯುವುದು ದೂರದಲ್ಲಿದೆ ಎಂದರು.ಅನೇಕ ದೇಶಗಳು ಸ್ವಲ್ಪ ಪ್ರಗತಿ ಸಾಧಿಸಿದ್ದರೂ, ಜಾಗತಿಕವಾಗಿ ಸಾಂಕ್ರಾಮಿಕ ರೋಗವು ವೇಗವನ್ನು ಹೆಚ್ಚಿಸುತ್ತಿದೆ ಎನ್ನುವುದನ್ನು ಗಮನಿಸಬೇಕು ಎಂದರು. ಇಲ್ಲಿ ರಾಷ್ಟ್ರೀಯ ಏಕತೆಯ ಕೊರತೆ ಮತ್ತು ಜಾಗತಿಕ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ ಎಂದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಉದಾಹರಣೆಗಳನ್ನು ಅನುಸರಿಸಲು ಎಲ್ಲರೂ ಗಮನಹರಿಸಬೇಕು ಎಂದರು.
( Source:REUTERS )
ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಭಾರತ ದೇಶವು…
ಜಲಜೀವನ್ ಯೋಜನೆ, ಯಲಬುರ್ಗಾ ತಾಲೂಕಿನ ತಿಪ್ಪನಹಾಳದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಗ್ರಾಮದ ಜನರ ಸಂತಸಕ್ಕೆ…
ರೈತರು ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ…
ಪ್ರೀತಿ ಎಂದರೆ ಹುಡುಗ-ಹುಡುಗಿಯ ನಡುವಿನ ಪ್ರೇಮವೊಂದೇ ಅಲ್ಲ.ವ್ಯಕ್ತಿಯ ಒಳಗಿನ ಭಾವ ಅದು. ಹೀಗಾಗಿ…
ಸಾಕಷ್ಟು ಜನ ಅಡಿಕೆ ರೈತರು ಕೇವಲ ಹವ್ಯಾಸೀ ಕೃಷಿಕರು ಹೊರತು ವೃತ್ತಿಪರ ಅಲ್ಲವೇ…
ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್ ಆದ್ಮಿಪಕ್ಷ ಕೇವಲ 13…