ಚೊಕ್ಕಾಡಿ: ಇತಿಹಾಸ ಪ್ರಸಿದ್ಧ ಕೋಟೆಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿಮರಕ್ಕೆ ಅಮರಪಡ್ನೂರು ಗ್ರಾಮದ ಚೊಕ್ಕಾಡಿಯಿಂದ ಮರ ಸಾಗಿಸಲಾಗಿದೆ.
ಚೊಕ್ಕಾಡಿಯ ಇಂದಿರಾ ಕೊಯಿಂಗುಳಿಯವರ ಜಮೀನಿನಿಂದ ಕೋಟೆಶ್ವರ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಕೊಡಿಮರವನ್ನು ಗುರುತಿಸಲಾಗಿತ್ತು. ತಂತ್ರಿಗಳಾದ ಪ್ರಸನ್ನಕುಮಾರ್ ಐತಾಳ್ ಮತ್ತು ಪರಮೇಶ್ವರ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮರ ತುಂಬಿದ ಲಾರಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಚೊಕ್ಕಾಡಿಯಿಂದ ಮರ ಸಾಗಿಸಲು ಉದಯ ಕುಕ್ಕೇಲು, ಪವನ್ ಮುಂಡ್ರಾಜೆ, ಪ್ರಮೋದ್ ಮಂಡೇಕೋಲು ನೇತೃತ್ವ ವಹಿಸಿದರು.
ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಒನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ನ ಶೆಟ್ಟಿ ಮಾರ್ಕೋಡು, ಜೀರ್ನೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ದೇವಳದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಶಿಲ್ಪಿ ರಾಜಗೋಪಾಲ ಆಚಾರ್ಯ, ಕಾಪು ದಿನಕರ ಶೆಟಿ, ಹರಿಯಣ್ಣ ಚಾತ್ರಬೆಟ್ಟು, ಮಲ್ಯಾಡಿ ಶಿವರಾಮ ಶೆಟ್ಟಿ, ಹರೀಶ್ ಬಿಜಾಡಿ, ಮಾರ್ಕೋಡು ಸುಬ್ಬಣ್ಣ ಶೆಟ್ಟಿ, ಪ್ರಭಾಕರ್ ಕುಂಭಾಸಿ, ಗಣೇಶ್ ಭಟ್ ಗೋಪಾಡಿ, ಶ್ರೀನಿವಾಸ್ ಕುಂದರ್, ಶಂಕರನಾರಾಯಣ ಉಡುಪ, ಗುರುರಾಜ ಎಂಜಿನಿಯರ್, ಪಾಂಡುರಂಗ ಜೋಗಿ, ಸುಬ್ರಹ್ಮಣ್ಯ ಶೆಟ್ಟಿಗಾರ್, ಕೋಟೆಶ್ವರ ಹಿಂದುಪರ ಸಂಘಟನೆ ಸದಸ್ಯರು, ಚೊಕ್ಕಾಡಿ ಬಜರಂಗ ದಳ ಸದಸ್ಯರು ಉಪಸ್ಥಿತರಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…