ಕುಂಬ್ರ:ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕಾವು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಶುಂಠಿ ಕೊಪ್ಪ ನಿವಾಸಿಗಳೆಂದು ಅಶೋಕ್ ಎಂಬವರ ಕುಟುಂಬ ಎಂದು ತಿಳಿದುಬಂದಿದ್ದು, ಓರ್ವ ಪುರುಷ, ಮಹಿಳೆ ಮತ್ತು ಇಬ್ಬರು ಕಾರಿನಲ್ಲಿದ್ದು ಒಂದೇ ಕುಟುಂಬದವರೆಂದು ಸ್ಥಳೀಯರು ತಿಳಿಸಿದ್ದಾರೆ.
ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
ಕೌಡಿಚಾರ್ ಬಳಿ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಪುತ್ತೂರು ತಾಲೂಕು ಕೌಡಿಚಾರ್-ಅರಿಯಡ್ಕ ಮಧ್ಯೆ ಮಡ್ಯಂಗಳ ಎಂಬಲ್ಲಿ ಆಲ್ಟೊ ಕಾರು ರಸ್ತೆಬದಿಯ ಕೆರೆಗೆ ಬಿದ್ದಿತ್ತು.ಕಾರು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿತ್ತು. ರಸ್ತೆಬದಿಯ ಕೆರೆಗೆ ಕಾರು ಬಿದ್ದ ಶಬ್ದ ಕೇಳಿ ಸಮೀಪದ ಮನೆಯವರು ಓಡಿ ಬಂದು ನೋಡುವಾಗ ಕಾರು ನೀರಲ್ಲಿ ಮುಳುಗಿರುವುದು ಗೊತ್ತಾಯಿತು. ಬಳಿಕ ಜನ ಸೇರಿ ಕಾರಿನಲ್ಲಿದ್ದ ನಾಲ್ವರನ್ನೂ ಹೊರತೆಗೆಯಲಾಯಿತು. ಆದರೆ ಆ ವೇಳೆಗಾಗಲೇ ನಾಲ್ಲರೂ ಕೊನೆಯುಸಿರೆಳೆದಿದ್ದರು.ಆಲ್ಟೊ ಕಾರು ಇದಾಗಿದೆ. ಮೃತದೇಹಗಳನ್ನು ಪುತ್ತೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…
ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…
ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…