ಪುತ್ತೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದರ ಹತ್ತನೇ ವರ್ಷಾಚರಣೆ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಏರಿಯಾ ವತಿಯಿಂದ ಬೆಳ್ಳಾರೆ ಜಂಕ್ಷನ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಏರಿಯಾ ಅಧ್ಯಕ್ಷರಾದ ನಿಝಾಮ್ ಬೆಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣ ನೆರವೇರಿಸಿದರು. ಕ್ಯಾಂಪಸ್ ಫ್ರಂಟ್ ಘನತೆಯಿಂದ ಫ್ಯಾಸಿಸ್ಟ್ ವರ್ಗದ ಮುಂದೆ ರಾಜಿ ರಹಿತ ಹೋರಾಟದೊಂದಿಗೆ, ಅವರ ಮುಂದೆ ತಲೆ ತಗ್ಗಿಸದೆ ಘನತೆಯೊಂದಿಗೆ ಹತ್ತು ವರ್ಷವನ್ನು ಕ್ಯಾಂಪಸ್ ಫ್ರಂಟ್ ನೆರವೇರಿಸಿದೆ ಎಂದು ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿ ಸದಸ್ಯರಾದ ಅನ್ಸಾರ್ ಬೆಳ್ಳಾರೆ ಸಂದರ್ಭೋಚಿತವಾಗಿ “ಘನತೆಯ ಹತ್ತು ವರ್ಷಗಳ” ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಘಟಕ ಅದ್ಯಕ್ಷ ಹಫೀಝ್, ಕಾರ್ಯದರ್ಶಿ ಸುಹೈಲ್, ಬೆಳ್ಳಾರೆ ಕಾಲೇಜು ಕಾರ್ಯದರ್ಶಿ ರಮೀಝ್ ಅಲೆಕ್ಕಾಡಿ, ಫ್ರೌಢಶಾಲಾ ಘಟಕದ ಅಧ್ಯಕ್ಷ ಸುಹೈಲ್, ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ಡಿವಿಜನ್ ಕಾರ್ಯದರ್ಶಿ ಸಿದ್ದೀಕ್, ಪಾಪ್ಯುಲರ್ ಫ್ರಂಟ್ ಏರಿಯಾ ಅಧ್ಯಕ್ಷರಾದ ಸಹೀದ್ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಏರಿಯಾ ಕಾರ್ಯದರ್ಶಿ ಜಾಬಿರ್ ಬೆಳ್ಳಾರೆ ಸ್ವಾಗತಿಸಿ, ವಂದಿಸಿದರು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…