ಮಂಗಳೂರು: ‘ಕ್ಯಾಂಪ್ಕೊ ಚಿತ್ತ ಸದಸ್ಯರ ಆರೋಗ್ಯದತ್ತ’ ಧ್ಯೇಯವಾಕ್ಯದಂತೆ ಸಂಸ್ಥೆ ತನ್ನ ಸದಸ್ಯರ ಆರೋಗ್ಯದತ್ತ ಕಾಳಜಿ ವಹಿಸುತ್ತಿದೆ. ಸದ್ಯ ಈ ಯೋಜನೆಯಡಿಯಲ್ಲಿ ವಿಶೇಷವಾಗಿ ಡಯಾಲಿಸಿಸ್, ತೆರೆದ ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿಟ್ರಾನ್ಸ್ ಪ್ಲಾಂಟೇಶನ್ ಮತ್ತು ಸಕ್ರಿಯ ಸದಸ್ಯರ ಹಾಗೂ ಅವರ ಕಾರ್ಯನಿರತ ಕಾರ್ಮಿಕರ ಅಪಘಾತ ಮರಣದಲ್ಲಿ ಆರ್ಥಿಕ ಪರಿಹಾರ ಒಳಗೊಂಡಿರುತ್ತದೆ. ನಿಯಮಾನುಸಾರ ಡಯಾಲಿಸಿಸ್ ಗೆ ರೂ.10,000, ಹೃದಯಚಿಕಿತ್ಸೆಗೆ ರೂ.50,000, ಕಿಡ್ನಿ ಅಳವಡಿಸಲು ರೂ.1 ಲಕ್ಷ ಹಾಗೂ ಆಕಸ್ಮಿಕವಾಗಿ ಮರಣ ಸಂಭವಿಸಿದಲ್ಲಿ ಆರ್ಥಿಕ ಪರಿಹಾರವಾಗಿ ರೂ.50,000ನೀಡಲಾಗುತ್ತದೆ.
ಬದಿಯಡ್ಕ ಶಾಖಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕ್ಯಾಂಪ್ಕೊ ಸದಸ್ಯ ಎ.ಅಬ್ದುಲ್‍ಖಾದರ್ ಅವರು ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು ಇತ್ತೀಚೆಗೆ ಕಿಡ್ನಿ ಅಳವಡಿಸಿಕೊಳ್ಳುವ ಶಸ್ತ್ರಚಿಕಿತ್ಸೆಯನ್ನು ಹೊಂದಿದ್ದರು. ಕ್ಯಾಂಪ್ಕೊ, ಸದಸ್ಯರ ಈ ವೈದ್ಯಕೀಯ ವೆಚ್ಚಕ್ಕಾಗಿ ರೂ.1 ಲಕ್ಷವನ್ನು ನೀಡಿದೆ. ಕ್ಯಾಂಪ್ಕೊ ಬದಿಯಡ್ಕ ಶಾಖೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಫಲಾನುಭವಿಯ ಸಹೋದರ ನಿಜಾಮುದ್ದೀನ್ ಅವರಿಗೆ ಧನಸಹಾಯದ ರೂ.1 ಲಕ್ಷದ ಚೆಕ್ಕನ್ನು ನೀಡಿ ಶೀಘ್ರ ಗುಣಮುಖರಾಗಿ ಆರೋಗ್ಯವಂತರಾಗುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್‍ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಕ್ಯಾಂಪ್ಕೊ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…