Advertisement
ಕಾರ್ಯಕ್ರಮಗಳು

ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ 66 ನೇ ಸಹಕಾರಿ ಸಪ್ತಾಹ ಆಚರಣೆ

Share
ಪುತ್ತೂರು: ಅಂತರ್ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆಯನ್ನು ಕ್ಯಾಂಪ್ಕೋ ಅಧ್ಯಕ್ಷರಾದ ಎಸ್ ಆರ್. ಸತೀಶ್ಚಂದ್ರ ಸಹಕಾರಿ ಧ್ವಜಾರೋಹಣ ನೆರೆವೇರಿಸುವ ಮೂಲಕ ಉದ್ಘಾಟಿಸಿದರು.
ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ  ವಾರಣಾಶಿ ಸುಬ್ರಾಯ ಭಟ್ಟರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಲ್ಲಿ ಆರ್ಥಿಕ ಸಾಮರಸ್ಯ ,ಆತ್ಮವಿಶ್ವಾಸ, ಸ್ವ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿ ಸಂಸ್ಥೆಗಳು ಕೊಡುಗೆ ನೀಡಿವೆ ಎಂದರು. ಸಹಕಾರಿ ರಂಗಕ್ಕೆ ಕೊಡುಗೆ ನೀಡಿದ ಹಿರಿಯರನ್ನು ಸ್ಮರಿಸಿದ ಅವರು ಇಂದು ರಾಜ್ಯವ್ಯಾಪಿ ಸುಮಾರು 40,000 ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಇದ್ದು 2.5 ಕೋಟಿಯಷ್ಟು ಸದಸ್ಯರು ವ್ಯವಹರಿಸುತ್ತಿದ್ದಾರೆ ಎಂದು ತಿಳಿಸಿದರು.
ಕ್ಯಾಂಪ್ಕೋದ  ಸಾಮಾಜಿಕ ಜಾಲತಾಣದ ವಿವಿಧ ಲಿಂಕ್ ಗಳನ್ನು ಪರಿಚಯಿಸುವ ಕ್ಯೂಆರ್ ಕೋಡ್ ಹೊಂದಿರುವ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಅತೀ ಹೆಚ್ಚು ಜನರು ಇದನ್ನು ಅನುಸರಿಸಿ ಕ್ಯಾಂಪ್ಕೋ ಬ್ರಾಂಡ್ ಪ್ರಸಿದ್ಧಿಗೊಳಿಸಲು ಕರೆನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಡಿ.ಜಿ.ಮ್ ಫ್ರಾನ್ಸಿಸ್ ಡಿ .ಸೋಜಾ , ಎ.ಜಿ.ಮ್ ಇಂಜಿನಿಯರಿಂಗ್ ಅವಿನಾಶ್ ರೈ, ಎ.ಜಿ.ಎಂ ಪ್ರೊಡಕ್ಷನ್ ಅನೂಪ್, ಎ.ಜಿ.ಎಮ್ ಟೆಕ್ನಿಕಲ್ ಶ್ಯಾಂಪ್ರಸಾದ್ ಉಪಸ್ಥಿತರಿದ್ದರು. ಭದ್ರತಾ ವಿಭಾಗದ ಮುಖ್ಯಸ್ಥರಾದ ಬಿ .ಜಿ ರಂಗನಾಥ್ ದ್ವಜಾರೋಹಣ ನಿರ್ವಹಿಸಿದರು. ರಾಧೇಶ್ ಕುಂದಲ್ಪಾಡಿ ಪ್ರಸ್ತಾವನೆಗೈದು, ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು .
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…

2 days ago

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ

ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಸ್ತೆ, ಗುಡ್ಡ…

2 days ago

ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ

ಈಶಾನ್ಯ ಭಾರತದಲ್ಲಿ ಡಿಆರ್‌ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…

2 days ago

“ಒಂದು ದಿನ ಅಡಿಕೆ ಮಾರುಕಟ್ಟೆಗೆ ‘ಏಲಿಯನ್ಸ್’ ಬಂದರೆ?” ರೈತನ ಭವಿಷ್ಯದ ಬಗ್ಗೆ ಎಚ್ಚರಿಸುವ ಕಲ್ಪಿತ ಕಥೆ

ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…

3 days ago

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”

“ಕಾಕ್‌ರೋಚ್‌ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌” ಎಂಬ ಹೊಸ…

4 days ago