ಮಳೆ ಕೈಕೊಟ್ಟಿತು, ಬೆಳೆ ನಷ್ಟವಾಯಿತು. ಆದರೂ ಕೃಷಿಯಿಂದ ಹಿಂದೆ ಸರಿಯದೆ ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆದು ಯಶಸ್ಸು ಕಂಡ ದಿವ್ಯಾಂಗ ರೈತ ಮಹಿಳೆಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಅನ್ನಪೂರ್ಣೇಶ್ವರಿ ಅವರು ತಮ್ಮ ಪರಿಶ್ರಮ ಮತ್ತು ಛಲದ ಮೂಲಕ ಕೃಷಿಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ದಿವ್ಯಾಂಗರಾಗಿರುವ ಅನ್ನಪೂರ್ಣೇಶ್ವರಿ ಅವರಿಗೆ ಸಹೋದರ ಬಸವರಾಜ್ ಬೆನ್ನೆಲುಬಾಗಿ ನಿಂತಿದ್ದಾರೆ. ಆರಂಭದಲ್ಲಿ ಮುಂಗಾರು ಮಳೆಯನ್ನೇ ನಂಬಿ ಹೆಸರು ಬೆಳೆ ಬೆಳೆದಿದ್ದರು. ಆದರೆ ಮಳೆ ಕೊರತೆಯಿಂದಾಗಿ ಬೆಳೆ ಸಂಪೂರ್ಣ ನಷ್ಟವಾಗಿತ್ತು. ಇದರಿಂದ ಎದೆಗುಂದದೆ ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆಯಲು ಮುಂದಾದರು. ಅವರ ಪರಿಶ್ರಮಕ್ಕೆ ತಕ್ಕಂತೆ ಸೂರ್ಯಕಾಂತಿ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಕೃಷಿಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ತನ್ನ ಕೃಷಿ ಬಗ್ಗೆ ಮಾತನಾಡಿದ ಅನ್ನಪೂರ್ಣೇಶ್ವರಿ, ರೈತರು ಮಳೆ ಕೊರತೆ ಮಾತ್ರವಲ್ಲದೆ ವಿದ್ಯುತ್ ಅಭಾವ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸರ್ಕಾರ ವಿದ್ಯುತ್ ಸಂಪರ್ಕ ವಿಸ್ತರಣೆ ಮಾಡಬೇಕು ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಹೋದರನ ಬೆಂಬಲದಿಂದ ಕೃಷಿಯತ್ತ ಹೆಜ್ಜೆ : ಅನ್ನಪೂರ್ಣೇಶ್ವರಿ ಅವರ ಕೃಷಿ ಬದುಕಿನ ಬಗ್ಗೆ ಮಾತನಾಡಿದ ಸಹೋದರ ಬಸವರಾಜ್, ಸಹೋದರಿ ದಿವ್ಯಾಂಗರಾಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ತ್ರಿಚಕ್ರ ವಾಹನ ಪಡೆದುಕೊಂಡು ತರಕಾರಿ ಮಾರಾಟ ಆರಂಭಿಸಿದ್ದರು. ಆದರೆ ಅದರಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಲಿಲ್ಲ. ಬಳಿಕ ತಮ್ಮದೇ ಜಮೀನಿನಲ್ಲಿ ಬೋರ್ವೆಲ್ ಮತ್ತು ಮನೆ ಇರುವುದರಿಂದ ಕೃಷಿಯತ್ತ ಗಮನ ಹರಿಸಲು ನಿರ್ಧರಿಸಿದೆವು ಎಂದು ತಿಳಿಸಿದರು.
ಅನ್ನಪೂರ್ಣೇಶ್ವರಿ ಅವರ ಪರಿಶ್ರಮ, ಆಸಕ್ತಿ ಹಾಗೂ ನಿರಂತರ ಪ್ರಯತ್ನದಿಂದ ಸೂರ್ಯಕಾಂತಿ ಬೆಳೆ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗಿದೆ. ಕೃಷಿಯಲ್ಲಿ ಅವರಿಗೆ ಅಗತ್ಯವಾದ ಸಹಕಾರ ನೀಡುತ್ತಿದ್ದೇವೆ ಎಂದರು.
ಮುಂಗಾರು ಮಳೆ ಕೈಕೊಟ್ಟಾಗಲೂ ಕೃಷಿಯನ್ನು ಕೈಬಿಡದೆ ಹಿಂಗಾರು ಹಂಗಾಮಿನಲ್ಲಿ ಹೊಸ ಬೆಳೆ ಪ್ರಯತ್ನಿಸಿ ಯಶಸ್ಸಿನತ್ತ ಸಾಗಿರುವ ಅನ್ನಪೂರ್ಣೇಶ್ವರಿ ಅವರ ಬದುಕು, ಕೃಷಿಯಲ್ಲಿ ಆಸಕ್ತಿ ಮತ್ತು ಆತ್ಮವಿಶ್ವಾಸ ಹೊಂದಿರುವವರಿಗೆ ಪ್ರೇರಣೆಯಾಗಿದೆ. ದೈಹಿಕ ಸವಾಲುಗಳ ನಡುವೆಯೂ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಅವರ ಪ್ರಯತ್ನ ಸಾಕ್ಷಿಯಾಗಿದೆ.
Annapoorneshwari, a differently-abled woman farmer from Dyampur village in Kukunoor taluk of Koppal district, has emerged as an inspiring example through agriculture. After her green gram crop failed due to inadequate monsoon rainfall, she did not give up and successfully cultivated sunflower during the post-monsoon season. Supported by her brother Basavaraj, she has continued farming despite several challenges. She has also appealed to the government to improve electricity infrastructure and ensure an uninterrupted power supply for agricultural activities.
ಕೊಪ್ಪಳ ಜಿಲ್ಲೆಯ ತಳಕಲ್ ಸರ್ಕಾರಿ ಬಸ್ ನಿಲ್ದಾಣದ ಎರಡು ಮರಗಳಲ್ಲಿ ನೂರಾರು ಹಕ್ಕಿಗಳು…
ನವೆಂಬರ್ 5ರಿಂದ ಕರ್ನಾಟಕದಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳವಾಗಲಿದೆ…
ಮೂರು ಎಕರೆ ಒಳಗಿನ ಜಮೀನು ಹೊಂದಿರುವ ರೈತರಿಗೆ ಉಳುಮೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ…
ಭಾರತದ ರಬ್ಬರ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಆರ್ಎಸ್ಎಸ್–4 ದರ್ಜೆಯ ರಬ್ಬರ್ ಬೆಲೆ ಕೆ.ಜಿ.ಗೆ…
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಚುರುಕಾಗುವ ಲಕ್ಷಣಗಳು ಕಂಡುಬಂದಿವೆ. ಬಂಗಾಳಕೊಲ್ಲಿಯಲ್ಲಿ…
ಹೈನುಗಾರರ ನಷ್ಟ ತಡೆಯಲು ಮತ್ತು ಉತ್ಪಾದನೆ ಹಾಗೂ ಸಾಗಾಣಿಕೆ ವೆಚ್ಚದ ಏರಿಕೆಯನ್ನು ಸರಿದೂಗಿಸಲು…