ಮಳೆ ಕೈಕೊಟ್ಟರೂ ಬಗ್ಗದ ಛಲ – ಸೂರ್ಯಕಾಂತಿ ಬೆಳೆದು ಮಾದರಿಯಾದ ದಿವ್ಯಾಂಗ ರೈತ ಮಹಿಳೆ

November 2, 2026
6:43 AM
ಕೊಪ್ಪಳ ಜಿಲ್ಲೆಯ ದ್ಯಾಂಪುರ ಗ್ರಾಮದ ದಿವ್ಯಾಂಗ ರೈತ ಮಹಿಳೆ ಅನ್ನಪೂರ್ಣೇಶ್ವರಿ, ಮುಂಗಾರು ಮಳೆಯಿಂದ ಹೆಸರು ಬೆಳೆ ನಷ್ಟವಾದರೂ ಎದೆಗುಂದದೆ ಹಿಂಗಾರಿನಲ್ಲಿ ಸೂರ್ಯಕಾಂತಿ ಬೆಳೆದು ಮಾದರಿಯಾಗಿದ್ದಾರೆ. ಸಹೋದರ ಬಸವರಾಜ್ ಅವರ ಬೆಂಬಲದೊಂದಿಗೆ ಕೃಷಿಯಲ್ಲಿ ತೊಡಗಿರುವ ಅವರು, ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಳೆ ಕೈಕೊಟ್ಟಿತು, ಬೆಳೆ ನಷ್ಟವಾಯಿತು. ಆದರೂ ಕೃಷಿಯಿಂದ ಹಿಂದೆ ಸರಿಯದೆ ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆದು ಯಶಸ್ಸು ಕಂಡ ದಿವ್ಯಾಂಗ ರೈತ ಮಹಿಳೆಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಅನ್ನಪೂರ್ಣೇಶ್ವರಿ ಅವರು ತಮ್ಮ ಪರಿಶ್ರಮ ಮತ್ತು ಛಲದ ಮೂಲಕ ಕೃಷಿಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ದಿವ್ಯಾಂಗರಾಗಿರುವ ಅನ್ನಪೂರ್ಣೇಶ್ವರಿ ಅವರಿಗೆ ಸಹೋದರ ಬಸವರಾಜ್ ಬೆನ್ನೆಲುಬಾಗಿ ನಿಂತಿದ್ದಾರೆ. ಆರಂಭದಲ್ಲಿ ಮುಂಗಾರು ಮಳೆಯನ್ನೇ ನಂಬಿ ಹೆಸರು ಬೆಳೆ ಬೆಳೆದಿದ್ದರು. ಆದರೆ ಮಳೆ ಕೊರತೆಯಿಂದಾಗಿ ಬೆಳೆ ಸಂಪೂರ್ಣ ನಷ್ಟವಾಗಿತ್ತು. ಇದರಿಂದ ಎದೆಗುಂದದೆ ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆಯಲು ಮುಂದಾದರು. ಅವರ ಪರಿಶ್ರಮಕ್ಕೆ ತಕ್ಕಂತೆ ಸೂರ್ಯಕಾಂತಿ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಕೃಷಿಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ತನ್ನ ಕೃಷಿ ಬಗ್ಗೆ ಮಾತನಾಡಿದ ಅನ್ನಪೂರ್ಣೇಶ್ವರಿ, ರೈತರು ಮಳೆ ಕೊರತೆ ಮಾತ್ರವಲ್ಲದೆ ವಿದ್ಯುತ್ ಅಭಾವ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸರ್ಕಾರ ವಿದ್ಯುತ್ ಸಂಪರ್ಕ ವಿಸ್ತರಣೆ ಮಾಡಬೇಕು ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಹೋದರನ ಬೆಂಬಲದಿಂದ ಕೃಷಿಯತ್ತ ಹೆಜ್ಜೆ :  ಅನ್ನಪೂರ್ಣೇಶ್ವರಿ ಅವರ ಕೃಷಿ ಬದುಕಿನ ಬಗ್ಗೆ ಮಾತನಾಡಿದ ಸಹೋದರ ಬಸವರಾಜ್, ಸಹೋದರಿ ದಿವ್ಯಾಂಗರಾಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ತ್ರಿಚಕ್ರ ವಾಹನ ಪಡೆದುಕೊಂಡು ತರಕಾರಿ ಮಾರಾಟ ಆರಂಭಿಸಿದ್ದರು. ಆದರೆ ಅದರಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಲಿಲ್ಲ. ಬಳಿಕ ತಮ್ಮದೇ ಜಮೀನಿನಲ್ಲಿ ಬೋರ್‌ವೆಲ್ ಮತ್ತು ಮನೆ ಇರುವುದರಿಂದ ಕೃಷಿಯತ್ತ ಗಮನ ಹರಿಸಲು ನಿರ್ಧರಿಸಿದೆವು ಎಂದು ತಿಳಿಸಿದರು.

ಅನ್ನಪೂರ್ಣೇಶ್ವರಿ ಅವರ ಪರಿಶ್ರಮ, ಆಸಕ್ತಿ ಹಾಗೂ ನಿರಂತರ ಪ್ರಯತ್ನದಿಂದ ಸೂರ್ಯಕಾಂತಿ ಬೆಳೆ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗಿದೆ. ಕೃಷಿಯಲ್ಲಿ ಅವರಿಗೆ ಅಗತ್ಯವಾದ ಸಹಕಾರ ನೀಡುತ್ತಿದ್ದೇವೆ ಎಂದರು.

ಮುಂಗಾರು ಮಳೆ ಕೈಕೊಟ್ಟಾಗಲೂ ಕೃಷಿಯನ್ನು ಕೈಬಿಡದೆ ಹಿಂಗಾರು ಹಂಗಾಮಿನಲ್ಲಿ ಹೊಸ ಬೆಳೆ ಪ್ರಯತ್ನಿಸಿ ಯಶಸ್ಸಿನತ್ತ ಸಾಗಿರುವ ಅನ್ನಪೂರ್ಣೇಶ್ವರಿ ಅವರ ಬದುಕು, ಕೃಷಿಯಲ್ಲಿ ಆಸಕ್ತಿ ಮತ್ತು ಆತ್ಮವಿಶ್ವಾಸ ಹೊಂದಿರುವವರಿಗೆ ಪ್ರೇರಣೆಯಾಗಿದೆ. ದೈಹಿಕ ಸವಾಲುಗಳ ನಡುವೆಯೂ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಅವರ ಪ್ರಯತ್ನ ಸಾಕ್ಷಿಯಾಗಿದೆ.

Annapoorneshwari, a differently-abled woman farmer from Dyampur village in Kukunoor taluk of Koppal district, has emerged as an inspiring example through agriculture. After her green gram crop failed due to inadequate monsoon rainfall, she did not give up and successfully cultivated sunflower during the post-monsoon season. Supported by her brother Basavaraj, she has continued farming despite several challenges. She has also appealed to the government to improve electricity infrastructure and ensure an uninterrupted power supply for agricultural activities.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಬೈಲ್ ಟವರ್‌ಗಳ ನಡುವೆ ಹಕ್ಕಿಗಳ ಕಲರವ – ಬಸ್‌ ನಿಲ್ದಾಣದ ಬೇವಿನ ಮರದಲ್ಲಿ ನೂರಾರು ಹಕ್ಕಿಗಳ ವಾಸ
November 2, 2026
6:56 AM
by: ದ ರೂರಲ್ ಮಿರರ್.ಕಾಂ
ನವೆಂಬರ್‌ 5ರಿಂದ ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಏರಿಕೆ
November 2, 2026
6:33 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಕೃಷಿ ಯಂತ್ರೋಪಕರಣ ಸೌಲಭ್ಯ ಕಲ್ಪಿಸಲು ’ನೇಗಿಲಯೋಗಿ’ ಯೋಜನೆ ಜಾರಿ ಸಿದ್ಧತೆ
November 2, 2026
6:31 AM
by: ದ ರೂರಲ್ ಮಿರರ್.ಕಾಂ
ಭಾರತದ ರಬ್ಬರ್‌ ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ – 300 ರೂಪಾಯಿ ಸನಿಹಕ್ಕೆ ರಬ್ಬರ್‌ ಮಾರುಕಟ್ಟೆ
November 2, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror