Advertisement
ಸುದ್ದಿಗಳು

ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಲ್ಲಿ #ವಿಶ್ವಪರಿಸರದಿನಾಚರಣೆ | 600 ಕ್ಯಾಂಪ್ಕೋ ಉದ್ಯೋಗಿಗಳ ಮನೆಯಲ್ಲಿ ಹಸಿರು ಚಿಂತನೆ |

Share

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಕೆಮ್ಮಿಂಜೆ ಹಾಗೂ ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

Advertisement
Advertisement
Advertisement

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಡಿ.ಜಿ.ಎಂ ಪ್ರಾನ್ಸಿಸ್ ಡಿಸೋಜ ಹಾಗೂ ಎ.ಜಿ.ಎಂ ಅವಿನಾಶ್ ರೈ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಆ ಪ್ರಯುಕ್ತ 600 ಕ್ಯಾಂಪ್ಕೋ ಉದ್ಯೋಗಿಗಳ ಮನೆಯಲ್ಲಿ ಗಿಡಗಳನ್ನು ನೆಡುವ ಸಂಕಲ್ಪ ಕೈಗೊಳ್ಳಲಾಯಿತು.

Advertisement

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಎಚ್, ಕಾರ್ಯದರ್ಶಿ ರಮೇಶ ರೈ ನೆಗಳಗುಳಿ ,ಕೋಶಾಧಿಕಾರಿ ಪ್ರಶಾಂತ್ ಭಟ್, ಜತೆ ಕಾರ್ಯದರ್ಶಿ ಜಗದೀಶ್,ಸದಸ್ಯರಾದ ಪ್ರಶಾಂತ್ ಡಿ.ಎಸ್,ಮಹೇಶ್ ಪ್ರಭು ಎನ್, ಹಾಗೂ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಅಧಿಕಾರಿಗಳು ಮತ್ತು ನೌಕರ ವೃಂದದವರು ಉಪಸ್ಥಿತರಿದ್ದರು.

Advertisement

 

Advertisement

 

ವಿಶ್ವ ಪರಿಸರ  ದಿನಾಚರಣೆಯ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲು ವಿಶ್ವದಾದ್ಯಂತ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಈ ದಿನವನ್ನು ಈಗ ವಿಶ್ವದಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ ಮತ್ತು ಭೂಮಿ ಮತ್ತು ಪರಿಸರವನ್ನು ನೋಡಿಕೊಳ್ಳುವ ಪ್ರಯತ್ನಕ್ಕಾಗಿ ಇದನ್ನು ಜನಸಾಮಾನ್ಯರ ದಿನವೆಂದೂ ಕರೆಯಲಾಗುತ್ತದೆ. ಹೀಗಾಗಿ ಈಗ  ಪರಿಸರ ಸಂರಕ್ಷಣೆಗಾಗಿ ಕ್ರಮ ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಾಗಿದೆ.

Advertisement

ವಿಶ್ವಸಂಸ್ಥೆಯ ಪ್ರಕಾರ, 2020 ರ ವಿಶ್ವ ಪರಿಸರ ದಿನದ ವಿಷಯವು ಜೀವವೈವಿಧ್ಯತೆಯಾಗಿದೆ- ಇದು ತುರ್ತು ಮತ್ತು ಅಸ್ತಿತ್ವವಾದದ ಕಾಳಜಿ ಎರಡನ್ನೂ ಒಳಗೊಂಡಿದೆ. “ಇತ್ತೀಚಿನ ಘಟನೆಗಳು, ಬ್ರೆಜಿಲ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದಲ್ಲಿನ ಕಾಳ್ಗಿಚ್ಚಿನಿಂದ ಹಿಡಿದು ಪೂರ್ವ ಆಫ್ರಿಕಾದಾದ್ಯಂತ ಮೋಡದಂತೆ ಮಿಡತೆಗಳು ಮುತ್ತಿಕೊಳ್ಳುವಿಕೆಗೆ – ಮತ್ತು ಈಗ, ಜಾಗತಿಕ ಸಾಂಕ್ರಾಮಿಕ ರೋಗ – ಮಾನವರ ಪರಸ್ಪರ ಅವಲಂಬನೆ ಮತ್ತು ಜೀವನದ ಜಾಲಗಳನ್ನು ಅಸ್ತಿತ್ವದಲ್ಲಿದ್ದಂತೆ ತೋರಿಸುತ್ತದೆ” ಎಂದು ವಿಶ್ವಸಂಸ್ಥೆಯ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಈ ವರ್ಷದ ಪರಿಸರ ದಿನಾಚರಣೆ ಒಂದಿಷ್ಟು ಮಹತ್ವವನ್ನು ಪಡೆದುಕೊಂಡಿದೆ. ವಿಶ್ವದ ಬಹುತೇಕ ರಾಷ್ಟ್ರಗಳ ಜನರನ್ನು ಕೋವಿಡ್‌ ಹೆಮ್ಮಾರಿಯಂತೆ ಕಾಡುತ್ತಿರುವುದರಿಂದ ಜನರಲ್ಲಿ ಪರಿಸರದ ಬಗೆಗೆ ಒಂದಿಷ್ಟು ಕಾಳಜಿ ಮೂಡುವಂತೆ ಮಾಡಿದೆ. ವಾಯುಮಾಲಿನ್ಯದಿಂದಾಗಿ ಮನುಷ್ಯ ಮಾತ್ರ ವಲ್ಲದೆ ಜೀವಸಂಕುಲ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದೆ.

Advertisement

ಪರಿಸರಕ್ಕೆ ಸಂಬಂಧಿಸಿದ ಅಂಶಗಳಾದ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಕಲುಷಿತ ನೀರು ಮತ್ತು ಹೆಚ್ಚಿರುವ ಶಾಖ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಕಾರ, ಪ್ರತಿ ವರ್ಷ ಮೂರು ದಶಲಕ್ಷ ಮಕ್ಕಳು ಪರಿಸರ ಸಂಬಂಧಿತ ಕಾರಣಗಳಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ | ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹೇಗೆ..?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಭಾರತೀಯ…

3 hours ago

ಭೂಮಿ ಹುಣ್ಣಿಮೆ | ಅನ್ನದಾತರಿಂದ ಹೊಲ ಗದ್ದೆಗಳಲ್ಲಿ ವಿಶೇಷ ಪೂಜೆ |

ಹೊಲದಲ್ಲಿ ಇರುವ ಪೈರನ್ನು ಗರ್ಭವತಿ ಎಂದು ಕಲ್ಪಿಸಿಕೊಂಡು ಈ ವಿಶಿಷ್ಟ ಆಚರಣೆ ಭೂಮಿ…

3 hours ago

ಕೊಪ್ಪಳದಲ್ಲಿ ಮಳೆಯಿಂದ ದ್ರಾಕ್ಷಿ ಬೆಳೆ ನಾಶ | ಸಂಕಷ್ಟಕ್ಕೆ ಸಿಲುಕಿದ ರೈತರು

ಐದು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ಅತಿಯಾದ ಮಳೆಯಿಂದ ಫಸಲು ನಾಶವಾಗಿದೆ ಎನ್ನುತ್ತಾರೆ ರೈತ…

3 hours ago

6 ಜಿ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿರುವ ಭಾರತ | ಹಳ್ಳಿಗಳಿಗೂ ವೇಗ ಇಂಟರ್ನೆಟ್‌ ಏಕೆ ಅಗತ್ಯ..? | ಬಿಎಸ್‌ಎನ್‌ಎಲ್‌ ಒಳಗೆ ಕೆಲಸ ಹೇಗೆ ನಡೆಯುತ್ತಿದೆ…?

ಭಾರತದಲ್ಲಿ ಮೊಬೈಲ್ ಸಂಪರ್ಕಗಳು 904 ಮಿಲಿಯನ್‌ನಿಂದ 1.16 ಬಿಲಿಯನ್‌ಗೆ ಏರಿದೆ, ಬ್ರಾಡ್‌ಬ್ಯಾಂಡ್ ಬಳಕೆದಾರರು…

3 hours ago

ಹೋಬಳಿಗೊಂದು ವಸತಿ ಶಾಲೆ ನಿರ್ಮಿಸಲು ಸರ್ಕಾರದ ನಿರ್ಧಾರ

ಹೋಬಳಿಗೊಂದು ವಸತಿ ಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. …

13 hours ago

ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವ | ಸಹಸ್ರಾರು ಯಾತ್ರಾರ್ಥಿಗಳಿಂದ ಪುಣ್ಯಸ್ನಾನ

ಕೊಡಗು ಜಿಲ್ಲೆಯ ತಲಕಾವೇರಿ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7.40 ಸುಮಾರಿಗೆ ಸರಿಯಾಗಿ ಕಾವೇರಿ…

14 hours ago