ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನಿಂದ “ಕ್ಯಾಶ್ಯೂ ಇಂಡಿಯಾ” (Cashew India) ಆಪ್ ನ್ನು ಗೇರು ಕೃಷಿಕರು ಹಾಗೂ ಗೇರಿಗೆ ಸಂಬಂಧಿಸಿದ ಎಲ್ಲರಿಗಾಗಿ ಅಭಿವೃದ್ಧಿಗೊಳಿಸಲಾಗಿದೆ.
ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯವಿರುವ ಇದು ಕೃಷಿ ಆಸಕ್ತರೆಲ್ಲರೂ ನೋಡಲೇಬೇಕಾದ ಆಪ್. ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ಇದೊಂದು ಮಾದರಿಯಾಗಬಲ್ಲ ವಿನೂತನ ಹೆಜ್ಜೆ. ‘ಕೃಷಿಕಸ್ನೇಹಿ’, ‘ಸಮಗ್ರ ಮಾಹಿತಿ’, ‘ಸುಲಭ ಬಳಕೆ’ ‘ದೇಶವ್ಯಾಪಿ‘ ಮಾನದಂಡಗಳನ್ನಿಟ್ಟುಕೊಂಡು ರೂಪಿಸಿದ ಈ ‘ಕ್ಯಾಶ್ಯೂ ಇಂಡಿಯಾ’ ಆಪ್ ವೈಶಿಷ್ಟ್ಯಗಳಿಲ್ಲಿವೆ.
ಏನಿದೆ ವಿಶೇಷತೆಗಳು ?:
ಈ ಆಪ್ ನ ಪರಿಕಲ್ಪನೆ, ವಿನ್ಯಾಸ, ಅಭಿವೃದ್ಧಿಯನ್ನು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನ ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತು ಅವರ ತಂಡ ಮಾಡಿದೆ. ಇದಕ್ಕೆ ತಾಂತ್ರಿಕ ಮಾಹಿತಿಯನ್ನು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಹಾಗೂ ಅಖಿಲ ಭಾರತ ಸಮನ್ವಿತ ಗೇರು ಸಂಶೋಧನಾ ಪ್ರಾಯೋಜನೆಯ ಕೇಂದ್ರಗಳು ಒದಗಿಸಿವೆ. ಇದಕ್ಕೆ ಆರ್ಥಿಕ ನೆರವನ್ನು ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ನವದೆಹಲಿ ಮತ್ತು ಗೇರು ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್ ನೀಡಿವೆ.
ಸಂಪರ್ಕ: ಡಾ. ಮೋಹನ್ ತಲಕಾಲುಕೊಪ್ಪ , 9902273468 , mohangs2007@gmail.com
ಆಪಿನ ಲಿಂಕ್ ಇಲ್ಲಿದೆ: https://play.google.com/store/apps/details?id=com.cashew.icar&hl=en_IN
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…