ಆಗಸದಲ್ಲಿ ಬುಧವಾರ (ಮೇ13) ಬೆಳಗಿನ ಜಾವ ಅಚ್ಚರಿಯ ವಿದ್ಯಮಾನವೊಂದು ಘಟಿಸಲಿದೆ. ಭೂಮಿಯ ಸಮೀಪ ಅಂದರೆ 8.33 ಕೋಟಿ ಕಿ.ಮೀ.ದೂರದಲ್ಲಿ ಸ್ವಾನ್ ಧೂಮಕೇತು ಹಾದು ಹೋಗಲಿದೆ. ಇದು ಈ ಧೂಮಕೇತು 5.7 ರಷ್ಟು ಪ್ರಕಾಶಮಾನ (Magnitude) ಹೊಂದಿದೆ. ಕನಿಷ್ಟ 6.0 ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಗೋಚರಿಸುತ್ತದೆ.
ಸಮಭಾಜಕ ವೃತ್ತದಿಂದ ದಕ್ಷಿಣ ಭಾಗದಲ್ಲಿ ವಾಸಿಸುವ ಮಂದಿ ಈ ಧೂಮಕೇತುವನ್ನು ಬರಿ ಕಣ್ಣಿನಿಂದ ವೀಕ್ಷಿಸಬಹುದಾಗಿದೆ.ನಾವು ಉತ್ತರ ಭಾಗದಲ್ಲಿರುವ ಕಾರಣ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ. ಆದಾಗ್ಯೂ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ. ಬೆಳಗ್ಗೆ ಸುಮಾರು 4.30 ರ ನಂತರ ಈಶಾನ್ಯ ಉತ್ತರ ಭಾಗದಲ್ಲಿ ಮೀನ ರಾಶಿಯಲ್ಲಿ ಕಾಣಿಸಿಕೊಳ್ಳಲಿದೆ.
ಮೇ.27 ಕ್ಕೆ ಈ ಧೂಮಕೇತು ಸೂರ್ಯನನ್ನು ಸಮೀಪಿಸಲಿದೆ. CometSWAN ಎಂಬ ಟ್ವಿಟರ್ ಖಾತೆಯಲ್ಲಿ ಈ ಧೂಮಕೇತುವಿನ ಚಲನೆಯನ್ನು ಅನುಸರಿಸಬಹುದು.
ಏನಿದು ಧೂಮಕೇತು: ಅಸಂಖ್ಯಾತ ಕ್ಷುದ್ರ ಕಾಯಗಳು ಸೂರ್ಯನಿಗೆ ಪರಿಭ್ರಮಣೆ ಹಾಕುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಹೆಚ್ಚಿನ ಧೂಳಿನ ಅಂಶ ಹೊಂದಿರುತ್ತವೆ.ಅವು ಸೂರ್ಯನ ಸಮೀಪ ಬರುತ್ತಿದ್ದಂತೆ ಸೂರ್ಯನ ವಿಪರೀತ ಶಾಖಕ್ಕೆ ಧೂಳಿನ ಹೊಗೆಯನ್ನು ಬಾಲದ ರೂಪದಲ್ಲಿ ಹೊರಸೂಸುತ್ತವೆ. ಅದುವೇ ಧೂಮಕೇತು.
76 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬರುವ ಹ್ಯಾಲಿ ಧೂಮಕೇತುವಿನಂತೆ ನಿಗದಿತ ಕಕ್ಷೆಯಲ್ಲಿ ಚಲಿಸುವ ಧೂಮಕೇತುಗಳೂ ಇವೆ.ಇನ್ನೂ ಒಂದು ಧೂಮಕೇತು ATLAS ಇದೇ ಮೇ 23 ರಂದು ಭೂಮಿಯ ಸಮೀಪ ಹಾದು ಹೋಗಲಿದೆ. ಇದು ಮೇ 31 ರಂದು ಸೂರ್ಯನ ಸಮೀಪ ದಾಟಿಹೋಗಲಿದೆ.ಇದು ಕೂಡಾ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ.
ಮಾಹಿತಿ :
ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.
ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…
ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…
ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…