ಸುಡು ಬಿಸಿಲ ಬೇಗೆಯದು
ಬೇಯುತಿಹರು ಜನರು
ಬರಗಾಲದ ಭೀತಿಯದು
ಬೆನ್ನತ್ತಿದೆ ಬೆಂಬಿಡದೆ..
ಶ್ರಮಕೆ ಪ್ರತಿಫಲವ
ಬಯಸುವ ನೇಗಿಲಯೋಗಿಯ
ಅಕ್ಷಿಗಳು ಅರಸುತಲಿಹುದು
ಆಗಸದಿ ಮಳೆ ನಕ್ಷತ್ರವನು.
ಶಪಿಸುತಿಹರು ಜನ
ರಣಬಿಸಿಲ ಕಾವನು
ನಾನಾ ತೆರದಿ ಜರಿಯುತ
ಬೇಡಿಕೆಯೊಂದ ಇಟ್ಟಿಹರು ಭಗವಂತನಲ್ಲಿ
ಸಸ್ಯಶ್ಯಾಮಲೆ ನೊಂದಿಹಳು
ದಿನಪನ ತಾಪಕೆ
ಇಳೆ ಬರಡಾಗಿಹುದು
ವರುಷಧಾರೆಯ ಕಾಣದೇ….
# ನಯನ.ಜಿ.ಎಸ್.
ಕೋಟೆ ಮುಂಡುಗಾರು
ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…
ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…
ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…