ಗರ್ಭಗುಡಿಯಲ್ಲಿರುವ ದೇವರನ್ನು ಎಲ್ಲೆಡೆಯೂ ಕಾಣುವ ಮಟ್ಟಕ್ಕೆ ಬೆಳೆದಾಗಲೇ ಸತ್ಯದ ಸಾಕ್ಷಾತ್ಕಾರ: ಉದಯ ಭಾಸ್ಕರ್ ಸುಳ್ಯ

September 4, 2019
9:05 AM

ಸಂಪಾಜೆ: “ದೇವರೆಲ್ಲಿದ್ದಾನೆ ಅನ್ನುವ ಪ್ರಶ್ನೆ ಬಂದಾಗ ನಾವೆಲ್ಲ ಸುಲಭದಲ್ಲಿ ದೇವಸ್ಥಾನದ ಗರ್ಭಗುಡಿಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತೇವೆ. ಆದರೆ ದೇವರು ಕೇವಲ ಗರ್ಭಗುಡಿಯಲ್ಲಿ‌ ಕುಳಿತಿಲ್ಲ, ಆತ ನಮ್ಮೊಳಗೆ ಶಕ್ತಿ ರೂಪದಲ್ಲಿ ತುಂಬಿಕೊಂಡಿದ್ದಾನೆ. ಗರ್ಭಗುಡಿಯ ಭಗವಂತನನ್ನು ನಮ್ಮೆದೆಯಲ್ಲೂ ಕಂಡುಕೊಳ್ಳಬೇಕು, ನಮ್ಮೆದೆಯಲ್ಲಿರುವ ಭಗವಂತನನ್ನು ಸಕಲ ಜೀವರಾಶಿಗಳಲ್ಲಿ, ಚರಾಚರ ವಸ್ತುಗಳಲ್ಲೂ ಕಾಣುವಂತಹ ಮಟ್ಟಕ್ಕೆ ನಾವು ಬೆಳೆಯಬೇಕು. ಆಗ ಮಾತ್ರವೇ ಸತ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಆಗಲೇ ಭಗವಂತನ ಸಾಕ್ಷಾತ್ಕಾರ ಸಾಧ್ಯ” ಎಂದು ಸಿರಿಗನ್ನಡ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷರಾದ ಉದಯಭಾಸ್ಕರ್ ಸುಳ್ಯ ಅಭಿಪ್ರಾಯಪಟ್ಟರು.

 

ಸಾರ್ವಜನಿಕ ಶ್ರೀದೇವತಾರಾಧನಾ ಸಮಿತಿ ಸಂಪಾಜೆ ಇದರ ವತಿಯಿಂದ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ 25 ನೇ ವರ್ಷದ ಗೌರೀ ಗಣೇಶೋತ್ಸವದ ವೇದಿಕೆಯಲ್ಲಿ ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟ ಅವರು, “ಗಣೇಶನನ್ನು ಪ್ರತಿಷ್ಠಾಪಿಸಲ್ಪಟ್ಟ‌ ವೇದಿಕೆಯಲ್ಲಿ ಸಾತ್ವಿಕ ಚಿಂತನೆಗಳು ನಡೆಯಬೇಕು, ಭಗವಂತನ ನಾಮಸ್ಮರಣೆ ನಡೆಯಬೇಕು, ಅದಿಲ್ಲದೇ ಅನ್ಯ ಚಿಂತನೆಯಲ್ಲಿ ಮುಳುಗಿದರೆ ಗಣೇಶನ ಕೃಪೆಯ ಬದಲಿಗೆ ಅವಕೃಪೆಯಾಗುವ ಸಾಧ್ಯತೆಗಳೇ ಹೆಚ್ಚು. ಊರಿನಲ್ಲೊಂದು ಹೊಸದಾದ ಭಜನಾ ತಂಡ ತಲೆಯೆತ್ತಲ್ಪಟ್ಟಿದೆ ಅಂದರೆ ಆ ಊರಿನ ಸಂಸ್ಕಾರ ಕೇಂದ್ರಗಳು ಜಾಗೃತಗೊಳ್ಳುತ್ತಿವೆ ಎಂದರ್ಥ” ಎಂದು ಹೇಳಿದರು‌.

 

ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಎನ್.ಎಸ್, ದೇವತಾರಾಧನಾ ಸಮಿತಿಯ ಗೌರವಾಧ್ಯಕ್ಷರಾದ ಬಿ.ಆರ್.ಶಿವರಾಮ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ ಚಿದ್ಕಾರು, ಮಡಿಕೇರಿ ಎ.ಪಿ.ಎಂ.ಸಿ ಸದಸ್ಯರಾದ ದೇವಪ್ಪ ಕೆ.ಕೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಇದರ ಒಕ್ಕೂಟ ಅಧ್ಯಕ್ಷೆಯಾದ ಶ್ರೀಮತಿ ವಾಣಿ ಜಗದೀಶ್ ಕೆದಂಬಾಡಿ, ಓ.ಆರ್. ಮಾಯಿಲಪ್ಪ, ಬಿ.ಆರ್.ಸುಂದರ ಮತ್ತಿತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ
October 12, 2026
12:17 PM
by: ದ ರೂರಲ್ ಮಿರರ್.ಕಾಂ
ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!
October 12, 2026
7:30 AM
by: ಮಹೇಶ್ ಪುಚ್ಚಪ್ಪಾಡಿ
ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror