ಗರ್ಭಪಾತದ ಕಾಲಮಿತಿ ಏರಿಕೆ : ಮಹಿಳಾ ಆರೋಗ್ಯದ ಕಡೆಗೆ ಗಮನ

January 30, 2020
7:32 AM

ಗರ್ಭಪಾತಕ್ಕೆ ನೀಡಲಾಗಿದ್ದ ಗರಿಷ್ಠ ಅವಧಿಯ ಮಿತಿಯನ್ನು 20 ರಿಂದ 24 ವಾರಗಳಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ.

Advertisement
Advertisement

ಈ ಮೂಲಕ  ತಾಯ್ತನದ ಮರಣ ಪ್ರಮಾಣ ಕಡಿಮೆ ಮಾಡುವುದು, ಮಹಿಳೆಯರ ಹಕ್ಕು, ಗರ್ಭಪಾತಕ್ಕೆ ಅವಕಾಶ ನೀಡುವ ಗರಿಷ್ಠ ಅವಧಿಯ ಮಿತಿಯನ್ನು ಹೆಚ್ಚಿಸುವುದು ಗರ್ಭದ ಸುರಕ್ಷಿತ ನಿರ್ಮೂಲನೆಯನ್ನು ಖಾತರಿಪಡಿಸಲಿದೆ ಮತ್ತು ಮಹಿಳೆಯರಿಗೆ ತಮ್ಮ ದೇಹದಲ್ಲಿ ಸಂತಾನೋತ್ಪತ್ತಿಯ ಹಕ್ಕನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Advertisement

ವೈದ್ಯಕೀಯ ಗರ್ಭಪಾತ ಕಾಯ್ದೆ, 1971ಕ್ಕೆ ತಿದ್ದುಪಡಿ ತರುವ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ, 2020ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.

ಗರ್ಭಪಾತಕ್ಕೆ 20 ವಾರಗಳ ಸಮಯ ಮಿತಿಯನ್ನು ನಿಗದಿಗೊಳಿಸಿರುವ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಕಳೆದ ಸಲ್ಲಿಸಲಾಗಿದ್ದ ಅರ್ಜಿಗೆ ಸೆಪ್ಟೆಂಬರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸರ್ಕಾರ, ಗರ್ಭದಲ್ಲಿರುವ ಭ್ರೂಣದ ಜೀವ ರಕ್ಷಣೆ ನಾಗರಿಕರ ಪೋಷಕನಾದ ತನ್ನ ಕರ್ತವ್ಯ ಎಂದು ಹೇಳಿತ್ತು. ಅರ್ಜಿದಾರರು ಗರ್ಭಪಾತದ ಗರಿಷ್ಠ ಮಿತಿಯನ್ನು 26 ವಾರಕ್ಕೆ ಏರಿಸಲು ಕೋರಿದ್ದರು.

Advertisement

ಈ ತಿದ್ದುಪಡಿ ಮಸೂದೆಯು ದೀರ್ಘಕಾಲದವರೆಗೂ ತಾವು ಗರ್ಭ ಧರಿಸಿರುವುದು ಅರಿಯದೆ ಬಳಿಕ ಅನಿವಾರ್ಯವಾಗಿ ಮಗುವಿಗೆ ಜನ್ಮನೀಡುವ ಸ್ಥಿತಿಗೆ ಒಳಗಾಗುವ ಅತ್ಯಾಚಾರ ಸಂತ್ರಸ್ತೆಯರು, ಅಂಕವೈಕಲ್ಯವುಳ್ಳ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಈ ಮಿತಿ ವಿಸ್ತರಣೆ ನೆರವಾಗಲಿದೆ ಎಂದು ಜಾವಡೇಕರ್ ಹೇಳಿದರು.

( ಕೃಪೆ – ANI)

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್
May 18, 2024
1:01 PM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು
May 18, 2024
12:45 PM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |
May 18, 2024
12:18 PM
by: The Rural Mirror ಸುದ್ದಿಜಾಲ
ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!
May 17, 2024
2:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror