ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಬುಧವಾರ ಕಂಡುಬಂದ ಕಾಡಾನೆಗೆ ಗುರುವಾರ ಸಂಜೆಯವರೆಗೆ ಚಿಕಿತ್ಸೆ ನಡೆಯಲಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು. ಬಳಿಕ ಅರಣ್ಯ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬಂದಿಗಳಿಗೆ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಸಿಬಂದಿಗಳು ಬುಧವಾರ ಬೆಳಗ್ಗೆ ಆನೆಯಿರುವ ಕಾಡಿನತ್ತ ತೆರಳಿ ಪರಿಶೀಲಿಸಿದರು.ಗುರುವಾರ ಮತ್ತೆ ಆಗಮಿಸಿ ಕಾಡಾನೆಗೆ ನೋವಾಗಿರುವ ಭಾಗವನ್ನು ಬೈನಾಕುಲರ್ ಮೂಲಕ ಗಮನಿಸಿದರು. ಈ ಸಂದರ್ಭ ಗಾಯವಾದ ಹಾಗೂ ಕೀವು ತುಂಬಿರುವುದು ಕಂಡುಬಂದಿದೆ. ಪಶುವೈದ್ಯರು ಸ್ಥಳಕ್ಕೆ ಆಗಮಿಸಿದರೂ ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಾಗಿರಲಿಲ್ಲ. ಗುರುವಾರ ಆನೆಯು ಘೀಳಿಡುತ್ತಿತ್ತು ಹಾಗೂ ಅತ್ತಿತ್ತ ಚಲನೆಯಲ್ಲಿದ್ದ ಕಾರಣ ಆನೆಯ ಸಮೀಪಕ್ಕೆ ಹೋಗಲು ಸಾಧ್ಯವಾಗಲಿಲ್ಲ.
ಮಧ್ಯಾಹ್ನದ ಬಳಿಕ ಹಿರಿಯ ಅಧಿಕಾರಿಗಳು ಮಾಹಿತಿ ಪಡೆದರು. ಸಂಜೆಯವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಆನೆಯ ಚಲನವಲ ಗಮನಿಸಿ ತೆರಳಿದರು.
ಶುಕ್ರವಾರ ಮತ್ತೆ ಕಾಡಾನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆಯಲಿದೆ. ಚುಚ್ಚುಮದ್ದು ನೀಡುವ ವ್ಯವಸ್ಥೆಯ ಬಗ್ಗೆ ಕಾರ್ಯಯೋಜನೆ ನಡೆಯುತ್ತಿದೆ ಎಂದು ಅರಣ್ಯ ಇಲಾಖೆಯ ಸಿಬಂದಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಮಂಗಳೂರು ತಾಲೂಕಿನ ಎಲ್ಲಾ ಗ್ರಾಮಗಳು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ…
ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ…
ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಪ್ರಮುಖವಾಗಿ ಕುಮುಟಾ ಮತ್ತು ಅಂಕೋಲಾದಲ್ಲಿ…
ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಡಾ. ಎಂ.ಎಚ್ ಮರೀಗೌಡ ಸಭಾಂಗಣದಲ್ಲಿ ಮೂರು ದಿನಗಳ…
ಜೇನು ಕೃಷಿ ಲಾಭದಾಯಕವಾಗಿದ್ದು, ರೈತರು ಈ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೇಂದ್ರ…