ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿದ್ದ ಕಾಡಾನೆಗೆ ಶುಕ್ರವಾರ ಚಿಕಿತ್ಸೆ ನೀಡಲಾಗಿದೆ. ನಾಗರಹೊಳೆ ಅಭಯಾರಣ್ಯ ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಘೀಳಿಡುತ್ತಿದ್ದ ಕಾಡಾನೆಯನ್ನು ಕಳೆದ ಎರಡು ದಿನಗಳಿಂದ ಸಮತಟ್ಟಾದ ಜಾಗಕ್ಕೆ ಕರೆತರಲು ಅರಣ್ಯ ಇಲಾಖಾ ಸಿಬಂದಿಗಳು ಪ್ರಯತ್ನ ಪಟ್ಟು ಶುಕ್ರವಾರ ಬೆಳಗ್ಗೆ ಆನೆಗೆ ಚಿಕಿತ್ಸೆ ನೀಡಲು ಇಲಾಖೆಯ ಸಿಬಂದಿಗಳು ಮುಂದಾದರು. ಮಧ್ಯಾಹ್ನದ ಬಳಿಕ ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಚಿಕಿತ್ಸೆ ಆರಂಭ ಮಾಡಲಾಯಿತು. ಗಾಯಗೊಂಡ ಜಾಗಕ್ಕೆ ಔಷಧಿ ಸಿಂಪಡಿಸಿ ಶುಚಿತ್ವಗೊಳಿಸಿ ಚುಚ್ಚುಮದ್ದು ನೀಡಲಾಯಿತು.
ಚಿಕಿತ್ಸೆ ಬಳಿಕ ಸ್ವಲ್ಪ ಹೊತ್ತಿನಲ್ಲೇ ಆನೆ ಎಚ್ಚರಗೊಂಡು ಚಲನವಲನ ಆರಂಭಿಸಿದೆ. ವೈದ್ಯರ ಸೂಕ್ತ ಚಿಕಿತ್ಸೆ ವಿಧಾನ, ಸಿಬಂದಿಗಳ ಹಾಗೂ ವಿಶೇಷವಾಗಿ ಸ್ಥಳಿಯರು ನೀಡಿದ ಸಹಕಾರದಿಂದ ಚಿಕಿತ್ಸೆ ಕಾರ್ಯಾಚರಣೆ ನಡೆಯಿತು. ಇನ್ನು ಒಂದು ವಾರಗಳ ಕಾಲ ಆನೆಯ ಆರೋಗ್ಯದ ಮೇಲೆ ಅರಣ್ಯ ಇಲಾಖೆಯ ಸಿಬಂದಿಗಳು ನಿಗಾ ಇಡಲಿದ್ದಾರೆ ಎಂದು ಕಾರ್ಯಾಚರಣೆ ಬಳಿಕ ಎ.ಸಿಎಪ್ ಆಸ್ಟ್ರಿನ್ ಪಿ ಸೋನ್ಸ್ ಪ್ರತಿಕ್ರಿಯಿಸಿದರು.
ಗುತ್ತಿಗಾರು ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ಅವರು ಚಿಕಿತ್ಸೆಗೆ ಸಹಕರಿಸಿದರು.
ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟ್ರಿನ್ ಪಿ ಸೋನ್ಸ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿ ತ್ಯಾಗರಾಜ್ ಮತ್ತು ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ಸಿಬಂದಿಗಳು ಕಾಡಾನೆ ಚಿಕಿತ್ಸೆಯಲ್ಲಿ ತೊಡಗಿದರು. ಇಲಾಖೆಯ ಸಿಬಂದಿಗಳಾದ ಸಂತೋಷ್, ಸುಬ್ರಹ್ಮಣ್ಯ ಹಾಗೂ ಪಂಜ ವಲಯದ ಸಿಬಂದಿಗಳು ಕಳೆದೆರಡು ದಿನಗಳಿಂದ ಸತತ ಕಾರ್ಯಾಚರಣೆಯಲ್ಲಿ ಸಹಕರಿಸಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…