Advertisement
ಸುದ್ದಿಗಳು

ಗುತ್ತಿಗಾರು : ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಕಬಡ್ದಿ ಪಂದ್ಯಾಟ

Share
ಗುತ್ತಿಗಾರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇದರ ಆತಿಥ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ದ.ಕ . ಇದರ ವತಿಯಿಂದ ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಕಬಡ್ದಿ ಪಂದ್ಯಾಟವು ಜರುಗಿತು.
ದೈಹಿಕ ಶಿಕ್ಷಣ ಪರಿವೀಕ್ಷಕ ಲಕ್ಷ್ಮೀಶ ರೈ .ಕೆ  ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾಪಂ ಅಧ್ಯಕ್ಷ   ಅಚ್ಯುತ ಗುತ್ತಿಗಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್  ಆಗಮಿಸಿದ್ದರು.  ವೇದಿಕೆಯಲ್ಲಿ ಗ್ರಾಪಂ ಸದಸ್ಯೆ ಶ್ರೀದೇವಿ ಕೊಂಬೊಟ್ಟು ,
ವಿರಮಾರುತಿ ಸ್ಫೋಟ್ಸ್ ಕ್ಲಬ್ ವಿಜೇಶ್ ಹಿರಿಯಡ್ಕ ಉಪಸ್ಥಿತರಿದ್ದರು.
    ಸುಳ್ಯ ತಾಲೂಕಿನ ವಿವಿಧ ಶಾಲೆಗಳು ಈ ಕ್ರೀಡಾ ಕೂಟದಲ್ಲಿ ಸ್ಪೂರ್ತಿಯಿಂದ ಭಾಗವಹಿಸಿದ್ದು ಬಾಲಕರ ವಿಭಾಗದಲ್ಲಿ ಜ್ಞಾನದೀಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಎಲಿಮಲೆ ಪ್ರಥಮ ಸ್ಥಾನ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಸರಕಾರಿ  ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಪ್ರಥಮ ಸ್ಥಾನ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಕುಳಿ ದ್ವಿತೀಯ  ಸ್ಥಾನ ಗಳಿಸಿಕೊಂಡಿತು.
     ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಜಯಂತಿ ಅಮೆ ವಹಿಸಿದ್ದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಲಕ್ಷ್ಮೀಶ ರೈ .ಕೆ, ಗುತ್ತಿಗಾರು ಗ್ರಾಪಂ ಅಧ್ಯಕ್ಷ   ಅಚ್ಯುತ ಗುತ್ತಿಗಾರು , ಎಲ್.ಕೆ.ಜಿ&ಯು.ಕೆ.ಜಿ  ಸಮಿತಿ ಅಧ್ಯಕ್ಷ ಕುಲಶ್ರೀ ಬಾಕಿಲ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
    ಕಮಲಾಕ್ಷಿ ಪಿ. ಮುಖ್ಯ ಶಿಕ್ಷಕರು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ಮುತ್ಲಾಜೆ ವಂದಿಸಿದರು. ಶಶಿಧರ ಮಾವಿನಕಟ್ಟೆ  ಕಾರ್ಯಕ್ರಮವನ್ನು ನಿರೂಪಿಸಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…

1 hour ago

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

2 hours ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

9 hours ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

10 hours ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

11 hours ago

ಹವಾಮಾನ ವರದಿ | 28-09-2026 | ಮುಂಗಾರು ಹಿಂದೆ ಸರಿಯುತ್ತಿದ್ದರೂ ಮಳೆ ಇನ್ನೂ ಮುಗಿದಿಲ್ಲ

ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…

12 hours ago