Advertisement
ಧಾರ್ಮಿಕ

ಗುರುವು ಮೃತನಾಗಲ್ಲ, ಅಮೃತನಾಗುತ್ತಾನೆ : ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

Share

ಬೆಂಗಳೂರು: ಗುರುವಿನ ಬದುಕು ಸಾಮಾನ್ಯವಾದ್ದಲ್ಲ, ಸಾವಿರಾರು ಜೀವಿಗಳ ಬದುಕಿನ ಉದ್ಧಾರ ಮಾಡುವುದರಿಂದ ಗುರುವು ಯಾವಾಗಲೂ ಮೃತನಾಗುವುದಿಲ್ಲ, ಅಮೃತನಾಗುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.

ಗಿರಿನಗರದ ಪುನರ್ವಸು ಭವನದಲ್ಲಿ ಬುಧವಾರ 35ನೇ ಯತಿವರೇಣ್ಯರಾದ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ಹಾಗೂ ಪಾಂಡಿತ್ಯ ಪುರಸ್ಕಾರದ ಧರ್ಮಸಭೆಯಲ್ಲಿ ಆಶೀರ್ವಾಚನ ನೀಡಿ ಗುರುವು ದೇವರ ಪ್ರತಿನಿಧಿಯಾಗಿ ಜೀವಲೋಕದಲ್ಲಿ ಸಂಚಾರ ಮಾಡಿ ಜೀವಗಳನ್ನು ದೇವತ್ವಕ್ಕೆ ಎತ್ತುವ ಕಾಯಕವನ್ನು ಮಾಡುವ ಅವರ ಜೀವನವು ವಿಶಿಷ್ಟ, ಅವರ ಇಹಲೋಕ ತ್ಯಾಗವೂ ವಿಶಿಷ್ಟವೇ ಆಗಿದೆ. ಗುರುವಿನ ಸಾವು ಘೋರವಲ್ಲ, ಗುರುವಿನ ಸಮಾಧಿಯು ಘೋರಿಯಲ್ಲ ಯಾಕೆಂದರೆ ಸಾವು ಅಮೃತತ್ವ ಗುರುವಿನ ಸಮಾಧಿಯು ನಿತ್ಯ ದರ್ಶನ ಹಾಗೂ ಪೂಜೆಗೆ ಯೋಗ್ಯವಾದ್ದರಿಂದ ಭಕ್ತರ ಉದ್ಧಾರವಾಗುತ್ತದೆ. ಆರಾಧನೆ ಎಂದರೆ ಗುರುಗಳು ಎಲ್ಲೂ ಹೋಗದೆ ಸರ್ವಾಂತರ್ಯಾಮಿಯಾಗಿ, ಸರ್ವವ್ಯಾಪಿಯಾಗಿ ಇದ್ದುಆ ದಿನ ಬಂದಾಗ ನಮಗೆ ಅಭಿವ್ಯಕ್ತರಾಗಿ ವಿಶೇಷ ಅನುಗ್ರಹವನ್ನು ಮಾಡುತ್ತಾರೆ ಎಂದು ಹೇಳಿದರು.

ಸಾಮಾನ್ಯ ವ್ಯಕ್ತಿಗೆ ಶ್ರಾದ್ಧ ಮಾಡುವುದು ಆ ಜೀವಕ್ಕೆ ಒಳ್ಳೆದು ಮಾಡುವಂತದ್ದು, ಆರಾಧನೆ ಎನ್ನುವುದು ಸಮಾಜದ ಹಾಗೂ ನಮ್ಮ ಶ್ರೇಯಸ್ಸಿಗಾಗಿ, ನಮಗೆ ಒಳ್ಳೆಯದಾಗಲಿ ಎಂದು, ಗುರುಗಳ ಶ್ರೇಯಸ್ಸಿಗೋಸ್ಕರ ಅಲ್ಲ ಅವರು ಪರಿಪೂರ್ಣ ಶ್ರೇಯಸ್ಸಿನಲ್ಲಿಯೇ ನೆಲೆಸಿದ್ದಾರೆ. ಶ್ರೀರಾಘವೇಂದ್ರ ಭಾರತೀಗಳು ಮಹಾಪಂಡಿತರಾಗಿದ್ದು, ಅವರು ವಿದ್ಯೆ ಹಾಗೂ ವ್ಯವಹಾರದಲ್ಲಿ ಗಟ್ಟಿತನವನ್ನು ಹೊಂದಿದ್ದರು. ಮಠಕ್ಕೆ ವೈದಿಕರು, ವಿದ್ವಾಂಸರು ಬಂದರೆ ಪರೀಕ್ಷೆಗಳನ್ನು ಮಾಡುವುದರ ಜತೆಗೆ ಪುಸ್ತಕವೇ ಮಸ್ತಕಕ್ಕೆ ಬರಬೇಕು ಎನ್ನುತ್ತಿದ್ದರು. ವ್ಯವಹಾರದಲ್ಲಿಯೂಅಷ್ಟೇ ನಿಷ್ಣಾತರಾಗಿದ್ದರು ಮಠದಲ್ಲಿ ಎಷ್ಟು ಉತ್ಪತ್ತಿ, ಏನು ನಷ್ಟವಿದೆ ಎಂಬುದು ಅವರಿಗೆ ಗೊತ್ತಿತ್ತು. ಅಲ್ಲದೇ ಅನುಷ್ಠಾನ, ತಪಸ್ಸಿನ ಬಲವನ್ನು ಹೊಂದಿದ್ದರಿಂದ ತ್ರಿಪಠಿಯಾಗಿ ತ್ರಿವೇಣಿ ಸಂಗಮವಾಗಿದ್ದರು ಎಂದು ಬಣ್ಣಿಸಿದರು.

ಪಾಂಡಿತ್ಯ ಪುರಸ್ಕಾರ ಉದ್ಘೋಷ: ಬ್ರಹ್ಮೈಕ್ಯ ಶ್ರೀರಾಘವೇಂದ್ರಭಾರತೀ ಸ್ವಾಮೀಜಿಯವರ ಆರಾಧನೆಯ ದಿನದಂದು ನೀಡುವ ಶ್ರೀರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರವನ್ನು ತಮಿಳುನಾಡು ಮೂಲದ ಯಜುರ್ವೇದ ಆಚಾರ್ಯ ವೇದಬ್ರಹ್ಮಶ್ರೀ ಜಂಬೂನಾಥನ್ ಘನಪಾಠಿಗಳಿಗೆ ಉದ್ಘೋಷಿಸಲಾಯಿತು.

ವಿದ್ವಾನ್ ರಾಘವೇಂದ್ರ ಭಟ್ ಕ್ಯಾದಗಿ ಪ್ರಸ್ತಾವನೆಗೈದರೆ, ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪಾಂಡಿತ್ಯ ಪುರಸ್ಕ್ರತರಾದ ಜಂಬೂನಾಥನ್ ಘನಪಾಠಿಗಳ ಪರಿಚಯ ವಿವರಿಸಿದರು. ಬೆಳಗ್ಗೆ ಆರಾಧನೆಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.  ಧರ್ಮಸಭೆಯಲ್ಲಿ ಶ್ರೀಮಠದ ಸಮ್ಮುಖಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್, ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಗಣೇಶ್ ಭಟ್ ಹಾಗೂ ಶ್ರೀಮಠದ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

8 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

10 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

17 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

20 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

22 hours ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

1 day ago