ಅರಂತೋಡು: ತೊಡಿಕಾನ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅರಂತೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೂನಡ್ಕ ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಹಿರಿಯ ಹಾಗೂ ಕಿರಿಯರ ವಿಭಾಗದ ಜಾನಪದ ನೃತ್ಯ,ಕವ್ವಾಲಿ,ರಸಪ್ರಶ್ನೆ,ಲಘುಸಂಗೀತ,ಕೋಲಾಟ,ಕ್ಲೇಮಾಡೆಲಿಂಗ್,ಇಂಗ್ಲೀಷ್,ಹಿಂದಿ,ಉರ್ದು,ಕೊಂಕಣಿ,ಕಂಠಪಾಠ ಹೀಗೆ ಹೆಚ್ಚಿನ ಎಲ್ಲಾ ಸ್ಪರ್ಧೆಗಳಲ್ಲಿ ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡು ಅತೀ ಹೆಚ್ಚು ಅಂಕ ಪಡೆದು ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಶಿಫ್ ಪಡೆದುಕೊಂಡಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel