ಗ್ರಾಮ್‌ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ ವೈಫೈ ಸಂಪರ್ಕ

August 28, 2019
12:00 PM

ನವದೆಹಲಿ: ಗ್ರಾಮ್‌ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ 10 Mbpsನಿಂದ 100 Mbps ವೇಗದ ಸಂಪರ್ಕವನ್ನು ಹೊಂದಿರುವ ವೈ-ಫೈ ಅನ್ನು ಒದಗಿಸುವ ಬದ್ಧತೆಯನ್ನು ಕೇಂದ್ರ ಸರಕಾರ ಹೇಳಿದೆ. ಅಲ್ಲದೇ ಭಾರತ್‌ನೆಟ್ ಕೂಡ 1 GBPS ಸಂಪರ್ಕವನ್ನು ನೀಡಲು ಯೋಜಿಸಿದೆ. ಇದನ್ನು 10 GBPS ಮತ್ತು ಸಿ-ಡಾಟ್‌ನ XGS-PONವರೆಗೆ ವಿಸ್ತರಿಸಬಹುದಾಗಿದೆ.

Advertisement
Advertisement

ಸಿ-ಡಾಟ್‌ನ 36 ನೇ ಪ್ರತಿಷ್ಠಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರದ ರಾಜ್ಯ ಖಾತೆ ಸಂವಹನ ಸಚಿವ ಸಂಜಯ್ ಶಮರಾವ್ ಧೋತ್ರೆ ಅವರು ಈ ಮಾಹಿತಿಯನ್ನು ನೀಡಿದ್ದಾರೆ. “ಭಾರತವು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಇದು ಸ್ವಾವಲಂಬಿ ಭಾರತೀಯ ಗ್ರಾಮದ ಕನಸನ್ನು ಕಂಡಿದ್ದ ಬಾಪುಗೆ ನೀಡುತ್ತಿರುವ ನಿಜವಾದ ಗೌರವವಾಗಿದೆ. ಸಿ-ಡಾಟ್‌ನ ಸಿ-ಸ್ಯಾಟ್-ಫೈ ತಂತ್ರಜ್ಞಾನವು ಭಾರತೀಯ ಜನರಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಿಗೆ ಪ್ರಯೋಜನಕಾರಿಯಾಗಿದೆ. ಟೆಲಿಫೋನ್ ಮತ್ತು ವೈ-ಫೈ ಸೌಲಭ್ಯಗಳು ದೇಶದ ಎಲ್ಲಾ ಮೂಲೆಗಳಲ್ಲಿನ ಯಾವುದೇ ಮೊಬೈಲ್ ಫೋನ್‌ನಲ್ಲಿ ಲಭ್ಯವಾಗುವುದರಿಂದ ಇದು ಜನರ ಸಬಲೀಕರಣಕ್ಕೆ ನಾಂದಿ ಹಾಡುತ್ತದೆ” ಎಂದು ಧೋತ್ರೆ ಹೇಳಿದರು.

Advertisement

ಫೈಬರ್ ಕಷ್ಟ ಮತ್ತು ಇಂಟರ್ನೆಟ್ ಲಭ್ಯವಿಲ್ಲದ ದೂರದ ಪ್ರದೇಶಗಳಲ್ಲಿನ ಜನರನ್ನು ಈ ಹೊಸ ತಂತ್ರಜ್ಞಾನವು ಉಪಗ್ರಹಗಳ ಮೂಲಕ ಸಂಪರ್ಕಿಸುವುದರಿಂದ ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡುತ್ತದೆ ಎಂದರು.ಸಿ-ಡಾಟ್‌ನ ಇತ್ತೀಚಿನ ಆವಿಷ್ಕಾರಗಳಾದ “ಸಿ-ಸ್ಯಾಟ್-ಫೈ ಮತ್ತು “ಸಿ-ಡಾಟ್‌ನ ಇಂಟರೊಪರೇಬಲ್ ಸೆಟ್ ಟಾಪ್ ಬಾಕ್ಸ್ (ಸಿಐಎಸ್‌ಟಿಬಿ)ಗಳಿಗೆ ಸಚಿವರು ಚಾಲನೆಯನ್ನು ನೀಡಿದರು. ದೂರದ ದ್ವೀಪಗಳು ಮತ್ತು ಕಷ್ಟಕರವಾದ ಭೂಪ್ರದೇಶಗಳು ಸೇರಿದಂತೆ ಅಸುರಕ್ಷಿತ ಪ್ರದೇಶಗಳಿಗೆ ಸಂಪರ್ಕವನ್ನು ವಿಸ್ತರಿಸಲು ಸಿ-ಸ್ಯಾಟ್-ಫೈ (ಸಿ-ಡಾಟ್ ಸ್ಯಾಟಲೈಟ್ ವೈಫೈ) ವೈರ್‌ಲೆಸ್ ಮತ್ತು ಉಪಗ್ರಹ ಸಂವಹನದ ಅತ್ಯುತ್ತಮ ಬಳಕೆಯನ್ನು ಆಧರಿಸಿದೆ.

ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲೂ ಇದು ಅತ್ಯುತ್ತಮ ರೀತಿಯಲ್ಲಿ ಜನರ ನೆರವಿಗೆ ಧಾವಿಸಲು ಸಹಾಯವನ್ನು ಮಾಡಬಲ್ಲವು.

Advertisement

(ಕೃಪೆ- ನ್ಯೂಸ್13)

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |
May 18, 2024
1:02 PM
by: ಸಾಯಿಶೇಖರ್ ಕರಿಕಳ
ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್
May 18, 2024
1:01 PM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು
May 18, 2024
12:45 PM
by: The Rural Mirror ಸುದ್ದಿಜಾಲ
ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?
May 18, 2024
12:28 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror