ನವದೆಹಲಿ: ಗ್ರಾಮ್‌ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ 10 Mbpsನಿಂದ 100 Mbps ವೇಗದ ಸಂಪರ್ಕವನ್ನು ಹೊಂದಿರುವ ವೈ-ಫೈ ಅನ್ನು ಒದಗಿಸುವ ಬದ್ಧತೆಯನ್ನು ಕೇಂದ್ರ ಸರಕಾರ ಹೇಳಿದೆ. ಅಲ್ಲದೇ ಭಾರತ್‌ನೆಟ್ ಕೂಡ 1 GBPS ಸಂಪರ್ಕವನ್ನು ನೀಡಲು ಯೋಜಿಸಿದೆ. ಇದನ್ನು 10 GBPS ಮತ್ತು ಸಿ-ಡಾಟ್‌ನ XGS-PONವರೆಗೆ ವಿಸ್ತರಿಸಬಹುದಾಗಿದೆ.
ಸಿ-ಡಾಟ್‌ನ 36 ನೇ ಪ್ರತಿಷ್ಠಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರದ ರಾಜ್ಯ ಖಾತೆ ಸಂವಹನ ಸಚಿವ ಸಂಜಯ್ ಶಮರಾವ್ ಧೋತ್ರೆ ಅವರು ಈ ಮಾಹಿತಿಯನ್ನು ನೀಡಿದ್ದಾರೆ. “ಭಾರತವು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಇದು ಸ್ವಾವಲಂಬಿ ಭಾರತೀಯ ಗ್ರಾಮದ ಕನಸನ್ನು ಕಂಡಿದ್ದ ಬಾಪುಗೆ ನೀಡುತ್ತಿರುವ ನಿಜವಾದ ಗೌರವವಾಗಿದೆ. ಸಿ-ಡಾಟ್‌ನ ಸಿ-ಸ್ಯಾಟ್-ಫೈ ತಂತ್ರಜ್ಞಾನವು ಭಾರತೀಯ ಜನರಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಿಗೆ ಪ್ರಯೋಜನಕಾರಿಯಾಗಿದೆ. ಟೆಲಿಫೋನ್ ಮತ್ತು ವೈ-ಫೈ ಸೌಲಭ್ಯಗಳು ದೇಶದ ಎಲ್ಲಾ ಮೂಲೆಗಳಲ್ಲಿನ ಯಾವುದೇ ಮೊಬೈಲ್ ಫೋನ್‌ನಲ್ಲಿ ಲಭ್ಯವಾಗುವುದರಿಂದ ಇದು ಜನರ ಸಬಲೀಕರಣಕ್ಕೆ ನಾಂದಿ ಹಾಡುತ್ತದೆ” ಎಂದು ಧೋತ್ರೆ ಹೇಳಿದರು.
ಫೈಬರ್ ಕಷ್ಟ ಮತ್ತು ಇಂಟರ್ನೆಟ್ ಲಭ್ಯವಿಲ್ಲದ ದೂರದ ಪ್ರದೇಶಗಳಲ್ಲಿನ ಜನರನ್ನು ಈ ಹೊಸ ತಂತ್ರಜ್ಞಾನವು ಉಪಗ್ರಹಗಳ ಮೂಲಕ ಸಂಪರ್ಕಿಸುವುದರಿಂದ ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡುತ್ತದೆ ಎಂದರು.ಸಿ-ಡಾಟ್‌ನ ಇತ್ತೀಚಿನ ಆವಿಷ್ಕಾರಗಳಾದ “ಸಿ-ಸ್ಯಾಟ್-ಫೈ ಮತ್ತು “ಸಿ-ಡಾಟ್‌ನ ಇಂಟರೊಪರೇಬಲ್ ಸೆಟ್ ಟಾಪ್ ಬಾಕ್ಸ್ (ಸಿಐಎಸ್‌ಟಿಬಿ)ಗಳಿಗೆ ಸಚಿವರು ಚಾಲನೆಯನ್ನು ನೀಡಿದರು. ದೂರದ ದ್ವೀಪಗಳು ಮತ್ತು ಕಷ್ಟಕರವಾದ ಭೂಪ್ರದೇಶಗಳು ಸೇರಿದಂತೆ ಅಸುರಕ್ಷಿತ ಪ್ರದೇಶಗಳಿಗೆ ಸಂಪರ್ಕವನ್ನು ವಿಸ್ತರಿಸಲು ಸಿ-ಸ್ಯಾಟ್-ಫೈ (ಸಿ-ಡಾಟ್ ಸ್ಯಾಟಲೈಟ್ ವೈಫೈ) ವೈರ್‌ಲೆಸ್ ಮತ್ತು ಉಪಗ್ರಹ ಸಂವಹನದ ಅತ್ಯುತ್ತಮ ಬಳಕೆಯನ್ನು ಆಧರಿಸಿದೆ.
ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲೂ ಇದು ಅತ್ಯುತ್ತಮ ರೀತಿಯಲ್ಲಿ ಜನರ ನೆರವಿಗೆ ಧಾವಿಸಲು ಸಹಾಯವನ್ನು ಮಾಡಬಲ್ಲವು.
(ಕೃಪೆ- ನ್ಯೂಸ್13)
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …