ಗ್ರಾಮ ಸಭೆಗೆ ಬನ್ನಿ…. ಸವಣೂರಿನಲ್ಲಿ ಮನೆ ಮನೆ ಬೇಟಿ ಅಭಿಯಾನ…!

August 3, 2019
9:00 AM

ಸವಣೂರು : ವಿವಿಧ ರೀತಿಯ ಅಭಿಯಾನ ನಡೆಯುತ್ತದೆ. ಇದು ವಿಶಿಷ್ಠವಾದ ಅಬಿಯಾನ. ಗ್ರಾಮಸಭೆಗೆ ಬನ್ನಿ ಎಂದು ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಪ್ರಮುಖರು ಮನೆ ಮನೆಗೆ ತೆರಳಿ ಮನವಿ ಮಾಡುತ್ತಿದ್ದಾರೆ.

Advertisement
Advertisement

ಅಧಿಕಾರ ವಿಕೇಂದ್ರಿಕರಣದ ಪ್ರಕ್ರಿಯೆಯಲ್ಲಿ ಸ್ಥಳಿಯಾಡಳಿತವಾದ ಗ್ರಾ.ಪಂ.ಹೆಚ್ಚು ಮಹತ್ವ ಪಡೆದಿದೆ.ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಗ್ರಾಮಾಭಿವೃದ್ದಿಯ ಯೋಜನೆಗಳು ಯಶಸ್ವಿಯಾಗಿ ನಡೆಯಲು ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅತ್ಯಗತ್ಯ.ಆದರೆ ಹೆಚ್ಚಿನ ಕಡೆಗಳಲ್ಲಿ ಗ್ರಾಮಸಭೆಗಳಿಗೆ ಗ್ರಾಮಸ್ಥರ ಹಾಜರಾತಿ ತೀರಾ ಕಡಿಮೆ ಕಂಡುಬರುತ್ತಿದೆ.
ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮಸಭೆಗಳು ನಡೆಯುತ್ತದೆ.ಈ ಸಭೆಯಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿ,ಅಭಿವೃದ್ದಿ ಕಾರ್ಯಗಳ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಲಾಗುತ್ತದೆ.

Advertisement

ಆದರೆ ಈ ಗ್ರಾಮಸಭೆಗಳಿಗೆ ಗ್ರಾಮಸ್ಥರ ಭಾಗವಹಿಸುವಿಕೆ ತೀರಾ ಕಡಿಮೆ.ಕಾರಣ ಗ್ರಾಮಸಭೆಗಳಲ್ಲಿ ಪ್ರಸ್ತಾಪಗೊಂಡ ವಿಷಯಗಳ ಕುರಿತು ಕ್ರಿಯಾಯೋಜನೆ ತಯಾರಿಸುವುದು ಅಪರೂಪ ಹಾಗೂ ತಮ್ಮ ಗ್ರಾಮದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳ ಮಾಹಿತಿ ಗ್ರಾಮಸ್ಥರಿಗೂ ಸರಿಯಾಗಿ ತಲುಪುತ್ತಿಲ್ಲ ಹಾಗೂ ಮಾಹಿತಿ ಪಡೆದುಕೊಳ್ಳುವ ಗೋಜಿಗೂ ಗ್ರಾಮಸ್ಥರು ಮುಂದಾಗುತ್ತಿಲ್ಲ. ಇದರಿಂದ ಗ್ರಾಮಸಭೆ ಹೋಗಿ ಏನುಪ್ರಯೋಜನವಿಲ್ಲ ಎಂಬುದು ಹೆಚ್ಚಿನ ಗ್ರಾಮಸ್ಥರ ಅಭಿಪ್ರಾಯ.

ಈ ಕಾರಣದಿಂದ ಗ್ರಾಮಸಭೆಗಳಿಗೆ ಗ್ರಾಮಸ್ಥರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದಕ್ಕಾಗಿ ಹಳ್ಳಿಯ ವಿಧಾನಸಭೆ ಎಂದು ಹೆಸರು ಮಾಡಿರುವ ಗ್ರಾಮಸಭೆಗಳ ಮಹತ್ವದ ಕುರಿತು ಗ್ರಾಮದ ಮೂಲೆಮೂಲೆಗಳಿಗೆ ತಿಳಿಹೇಳುವ ಕಾರ್ಯ ಹಾಗೂ ಗ್ರಾಮ ಸಭೆಯ ಕರಪತ್ರವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಪ್ರಮುಖರು ಮಾಡುತ್ತಿದ್ದಾರೆ.

Advertisement

ಸವಣೂರು ಗ್ರಾ.ಪಂ.ನ ವಾರ್ಡ್ 1ರಲ್ಲಿ ಗ್ರಾ.ಪಂ.ಸದಸ್ಯರಾದ ಸತೀಶ್ ಬಲ್ಯಾಯ,ಗಾಯತ್ರಿ ಬರೆಮೇಲು,ಸತೀಶ್ ಅಂಗಡಿಮೂಲೆ ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಸುಪ್ರಿತ್ ರೈ ಖಂಡಿಗ,ನಿರ್ದೇಶಕ ಪ್ರಜ್ವಲ ಕೆ.ಆರ್,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಸ್ಥಳೀಯ ಪ್ರಮುಖರಾದ ಪ್ರದೀಪ್ ಕೆ.ಆರ್ ಕೋಡಿಬೈಲ್,ಅನಿತಾ ಲಕ್ಷ್ಮಣ್ ಕೆಡೆಂಜಿ,ವೇದಾ ದಯಾನಂದ ಬೇರಿಕೆ,ಜಯಶ್ರೀ ಬಾರಿಕೆ ಅವರನ್ನೊಳಗೊಂಡ ತಂಡ ಈ ಕಾರ್ಯವನ್ನು ಮಾಡುತ್ತಿದೆ.

ಈ ಕಾರ್ಯವನ್ನು 2013ರಲ್ಲಿ ಅಂದು ಗ್ರಾ.ಪಂ.ಸದಸ್ಯರಾಗಿದ್ದ ರಾಕೇಶ್ ರೈ ಕೆಡೆಂಜಿ ಮಾಡಿದ್ದರು.ಬಳಿಕದ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಿತ್ತು.
ವಾರ್ಡ್‍ಸಭೆ ಹಾಗೂ ಗ್ರಾಮ ಸಭೆಗಳ ಕುರಿತು ಆಯಾ ಗ್ರಾ.ಪಂ.ವತಿಯಿಂದ ಪ್ರಕಟಣೆ ನೀಡಲಾಗುತ್ತದೆ.ಆದರೆ ಗ್ರಾಮಸಭೆ ಎಂಬುದು ಗ್ರಾಮಸ್ವರಾಜ್ಯದ ಜೀವಾಳ ಎಂದು ಹಲವರಿಗೆ ತಿಳಿದಿಲ್ಲ.ಗ್ರಾಮ ಸಭೆ ಎಂಬುದು ಆಯಾ ಊರಿನ ಸಹಕಾರಿ ಸಂಘಗಳ ಮಹಾಸಭೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಅಭಿವೃದ್ದಿಯ ಭಾಗ. ವಸತಿಹೀನರಿಗೆ ನಿವೇಶನ ನೀಡಲು,ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆಮಾಡುವ ಸ್ಥಳವೇ ಗ್ರಾಮ ಸಭೆ. ಎಲ್ಲಾ ಗ್ರಾ.ಪಂ.ಗಳಲ್ಲೂ ಅಲ್ಲಿನ ಸದಸ್ಯರು ಮಾಡಿದಲ್ಲಿ ಗ್ರಾ.ಪಂ.ಆಡಳಿತ ಚುರುಕುಗೊಳ್ಳುವುದು ಹಾಗೂ ವಾರ್ಡ್‍ಸಭೆ ಮತ್ತು ಗ್ರಾಮಸಭೆಗಳು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗುತ್ತದೆ.ಒಂದು ಭಾಗದಲ್ಲಿ ನಡೆದ ಪ್ರಯತ್ನ ಅಲ್ಲಿಗೆ ಮಾತ್ರ ಸೀಮೀತವಾಗಬಾರದು.ಈ ಪ್ರಯೋಗ ಎಲ್ಲೆಡೆ ನಡೆಯಬೇಕು.ಹಾಗಾದಾಗ ಮಾತ್ರ ಗ್ರಾಮಸರಕಾರ ಅಂದರೆ ಗ್ರಾ.ಪಂ.ಗಳು ಕೂಡ ಮಾದರಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ.

Advertisement

ನಮ್ಮ ಗ್ರಾ.ಪಂ.ಸದಸ್ಯರು ಗ್ರಾಮ ಸಭೆಯ ಕುರಿತು ಮನೆಮನೆಗೆ ಕರಪತ್ರ ಹಂಚಿ ಗ್ರಾಮಸಭೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆ.ನಮ್ಮ ಗ್ರಾ.ಪಂ.ನಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ಮಂಡಳಿ,ಅ„ಕಾರಿ ವರ್ಗ ಇರುವುದರಿಂದ ಕಾರ್ಯಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. – ಇಂದಿರಾ ಬಿ.ಕೆ ಅಧ್ಯಕ್ಷರು ಸವಣೂರು ಗ್ರಾ.ಪಂ.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror