ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚಿಗೆ ನಿಧನರಾದ ಸುಳ್ಯದ ಸಾಹಿತಿ ದಿ.ಯು.ಸುಬ್ರಾಯಗೌಡರವರಿಗೆ ನುಡಿನಮನ ಕಾರ್ಯಕ್ರಮ ಶಿರ್ಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯಾಲಯದಲ್ಲಿ ನೆರವೇರಿತು.
ಯುಸುಗೌ ಒಂದು ನೆನಪು ಮತ್ತು ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ವಹಿಸಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಸಂಸ್ಥೆಯ ವಲಯ ತರಬೇತುದಾರರಲ್ಲದೆ ಅತ್ಯುತ್ತಮ ಸಾಹಿತಿಯಾಗಿದ್ದ ಯುಸುಗೌ ಪ್ರಬುದ್ಧ ವ್ಯಕ್ತಿಯಾಗಿದ್ದರು . ಸರ್ವರನ್ನು ಆದರದಿಂದ ಕಾಣುವ ಅವರ ಹೃದಯ ವೈಶಾಲ್ಯತೆ ಅನುಕರಣೀಯ ಎಂದರು. ಹಿರಿಯ ಸಾಹಿತಿ ನೀನಾಸು ಮಾತನಾಡಿ ‘ಯುಸುಗೌ ಮರೆಯದ ಮಾಣಿಕ್ಯ. ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಛಾಪನ್ನು ಮೂಡಿಸಿದವರು. ಉತ್ತಮ ಗೆಳೆಯರಾಗಿದ್ದ ಅವರು ಎಂದೂ ಕೋಪತಾಪ ಮಾಡಿದವರಲ್ಲ. ಒಬ್ಬ ಒಳ್ಳೆಯ ಸಾಹಿತಿಯನ್ನು ಕಳೆದುಕೊಂಡೆವು ಎಂದರು.
ಶ್ರೀ ಯೋಗೇಶ್ವರಾನಂದ ಸ್ವಾಮೀಜಿ ಮಾತನಾಡಿ ಒಡನಾಡಿಯಾಗಿದ್ದ ಸುಬ್ರಾಯಗೌಡರು ತುಂಬಿದ ಕೊಡ. ವಿಶೇಷ ಶೈಲಿಯ ಅವರ ಬರಹಗಳು ಜನಮಾನಸ ಮುಟ್ಟಿದ್ದವು. ಅವರ ಅರೆಭಾಷೆ ಲೇಖನಗಳು ಹಲವು ಪತ್ರಿಕೆಗಳಲ್ಲಿ ಓದಿದ್ದೆ ಎಂದು ಸ್ಮರಿಸಿದರು. ಚಂದನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಸುಮಂಗಲಾ ಲಕ್ಷ್ಮಣ ಕೋಳಿವಾಡ, ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ಚಂದ್ರ ಪಂಡಿತ್ ಹಾಗೂ ಗಾಯಕ ಗಣೇಶ್ ಬಿ ಎಸ್ ನುಡಿನಮನ ಸಲ್ಲಿಸಿದರು. ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ಸಂದರ್ಭ ಸ್ವಾಮೀಜಿಯವರ 163 ನೇ ಪುಸ್ತಕವಾದ ಜೀವದ ಪಯಣ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು.
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…
ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…
ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…
ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದಲ್ಲಿ ಸುಮಾರು 30…