ಬಾಳುಗೋಡು: ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗೆ ಒಳಗಾಗಿದ್ದ ಕಾಡಾನೆಗೆ ಮತ್ತೆ ಸಂಕಟಕ್ಕೆ ಒಳಗಾಗಿದೆ. ಕಾಡಿನಲ್ಲಿದ್ದ ಕಾಡಾನೆಗೆ ಇನ್ನೊಂದು ಆನೆ ತಿವಿದು ಮತ್ತೆ ನೋವಿಗೆ ಒಳಗಾಗಿದೆ. ನೋವಿನಿಂದ ಇದ್ದ ಆನೆಗೆ ಮತ್ತೆ ಸಂಕಟ ಎದುರಾಗಿದೆ.
ಬಾಳುಗೋಡು ಮೀಸಲು ಅರಣ್ಯದಲ್ಲಿ ಮುಂಗಾಲಿಗೆ ಗಾಯಗಳಾಗಿದ್ದ ಸ್ಥಿತಿಯಲ್ಲಿದ್ದ ಆನೆಗೆ ಚಿಕಿತ್ಸೆ ನೀಡಿ ಬಿಡಲಾಗಿತ್ತು. ಅರಣ್ಯ ಇಲಾಖೆಯ ಸಿಬಂದಿಗಳು ನಂತರ ಆನೆಯ ಚಲನವಲನ ಗಮನಿಸುತ್ತಿದ್ದರು. ಇದೀಗ ಭಾನುವಾರ ಮತ್ತೆ ಇನ್ನೊಂದು ಕಾಡಾನೆ ತಿವಿದು ಗಾಯಗೊಂಡಿರುವ ಬಗ್ಗೆ ಅರಣ್ಯ ಇಲಾಖಾ ಸಿಬಂದಿಗಳು ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳೀಯರು ಆನೆಯನ್ನು ಶಬ್ಧ ಮಾಡಿ ಓಡಿಸುವ ಪ್ರಯತ್ನ ನಡೆಸಿ ಗಾಯಗೊಂಡ ಆನೆಯನ್ನು ಧಾಳಿಯಿಂದ ರಕ್ಷಿಸುವ ಪ್ರಯತ್ನಿಸಿದರು. ಈ ವೇಳೆ ಆನೆ ಕಾಡಿನ ಆನೆ ಸ್ಥಳೀ ಯರನ್ನು ಬೆನ್ನಟ್ಟಿದೆ. ಗಾಯಗೊಂಡಿದ್ದ ಆನೆಯ ದೇಹದಿಂದ ರಕ್ತ ಸೋರಿಕೆಯಾಗುತ್ತಿತ್ತು ಮತ್ತು ನೆಲದಲ್ಲಿ ಭಾರಿ ಪ್ರಮಾಣದಲ್ಲಿ ರಕ್ತ ಚೆಲ್ಲಿತ್ತು. ಧಾಳಿಯಿಂದ ಬೆದರಿದ ಆನೆ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಗಾಯಗೊಂಡ ಆನೆ ಮೇಲೆ ಸ್ಥಳೀಯರು ಪ್ರೀತಿ ತೋರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆನೆಗೆ ಆಹಾರದ ಕೊರತೆ ಆಗದಂತೆ ಬೈನೆಮರದ ಮೇವನ್ನು ಸ್ಥಳಿಯರು ಕಾಡಿಗೆ ತೆಗೆದುಕೊಂಡು ಹೋಗಿ ಆನೆಗೆ ಪೂರೈಸುತ್ತಿದ್ದಾರೆ. ಜತೆಗೆ ನೀರು ಇತ್ಯಾದಿ ಆಹಾರವನ್ನು ಒದಗಿಸಿ ಆರೈಕೆ ನಡೆಸುತ್ತಿದ್ದಾರೆ. ಸ್ಥಳಿಯ ನಿವಾಸಿ ಸುಬ್ರಹ್ಮಣ್ಯ ಕೆ.ಎಸ್‍ಎಸ್ ಕಾಲೇಜಿನ ವಿದ್ಯಾರ್ಥಿ ದೀಪಕ್ ಕಳೆದ ಮೂರು ದಿನಗಳಿಂದ ಆನೆಗೆ ಆಹಾರ ಪೂರೈಕೆಯಲ್ಲಿ ನಿರತನಾಗಿದ್ದಾನೆ.
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…
ರೈತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಕಲ ಸಹಕಾರ…