Advertisement

ಚಿರತೆ ದಾಳಿಯಾದರೆ ಮಾಡುವುದೇನು…..?

Share

ಸುಳ್ಯ: ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ  ಮದ ಏರಿದ ಆನೆ ಪೇಟೆಯಲ್ಲಿ  ಓಡಾಡಿ ಹಾನಿ ಮಾಡಿತ್ತು. ಅದೇ ಸಂದರ್ಭ ಪ್ರಶ್ನೆಯೊಂದು ಬಂತು… ಪುತ್ತೂರು, ಸುಳ್ಯ, ಮಂಗಳೂರು ನಗರಕ್ಕೆ ಆನೆ ಬಂದರೆ ತಕ್ಷಣದ ಪರಿಹಾರ ಏನು ? ಈ ಬಗ್ಗೆ ಅರಣ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳ ಬಳಿ ಮಾತನಾಡಿಸಲಾಯಿತು. ತಕ್ಷಣದ ಪರಿಹಾರ ಏನೂ ಇರಲಿಲ್ಲ…!

ಬಳಿಕ ಈ ಸಂಗತಿ ಮರೆತೇ ಹೋಗಿತ್ತು. ಅದಾಗಿ ಕೆಲವೇ ಸಮಯದಲ್ಲಿ  ಪುತ್ತೂರು ನಗರದಲ್ಲಿ  ಲಾರಿಯಲ್ಲಿ  ಆನೆ ಸಾಗಾಟ ಮಾಡುತ್ತಿದ್ದಾಗ ಮದ ಏರಿದ ಆನೆ ಲಾರಿ ಚಾಲಕ ಹಾಗೂ ಮಾವುತ ಮೇಲೆ ಸಿಟ್ಟಾಯಿತು. ಎರಡು ದಿನಗಳ ಕಾಲ ಪುತ್ತೂರು ನಗರದಲ್ಲೇ ಆನೆ ಉಳಿಯಿತು. ವಾಹನ ಓಡಾಟಗಳಿಗೂ ಅಡ್ಡಿಯಾಯಿತು. ಆಗ ಇಲಾಖೆಗಳಿಗೂ ಮನವರಿಕೆಯಾಗಿತ್ತು.

ಈಗಲೂ ಅದೇ ಪ್ರಶ್ನೆ… ಸುಳ್ಯದ ಗ್ರಾಮೀಣ ಭಾಗ ಸೇರಿದಂತೆ ಪೇಟೆಗೆ ಚಿರತೆ ದಾಳಿ ಮಾಡಿದರೆ ತಕ್ಷಣದ ಕ್ರಮ ಏನು ? ಪರಿಹಾರ ಹೇಗೆ ? 

ಇದಕ್ಕೆ ಉತ್ತರ ಗುರುವಾರ ಬಳ್ಪದಲ್ಲಿ  ನಡೆದ ಚಿರತೆ ದಾಳಿ. ಯಾವುದೇ ಉರುಳಿಗೆ ಬಿದ್ದ ಚಿರತೆ ಯದ್ವಾತದ್ವ ಓಡಾಡಿತು, ದಾಳಿ ಮಾಡಿತು. ಸ್ಥಳೀಯರ ಮೇಲೆ ಮಾತ್ರವಲ್ಲ ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗಳ ಮೇಲೂ ದಾಳಿ ಮಾಡಿತು.  ಆಗ ಮತ್ತಷ್ಟು ಅರಿವಾಯ್ತು, ಇಲಾಖೆಯ ಬಳಿ ಚಿರತೆ ಹಿಡಿಯುವ ಬಲೆ, ಜಿಲ್ಲೆಯಲ್ಲಿ ಚಿರತೆ ಹಿಡಿಯುವ ಕೌಶಲ್ಯ ಹೊಂದಿದ ಸಿಬಂದಿಗಳ ಕೊರತೆ, ಡ್ರೋನ್ ಕ್ಯಾಮರಾ ಸೇರಿದಂತೆ ಯಾವುದೇ ವ್ಯವಸ್ಥಿತ ಸಲಕರಣೆಗಳು ಇಲ್ಲ..!. ಈ ಹಿಂದೆ ಬೆಳ್ತಂಗಡಿ ತಾಲೂಕು ಸೇರಿದಂತೆ ವಿವಿದೆಡೆ ಚಿರತೆ ಪ್ರತ್ಯಕ್ಷವಾಗಿದೆ. ಬಳ್ಪ ಪರಿಸರದಲ್ಲೇ ಹಲವು ಬಾರಿ ಕಾಣಿಸಿಕೊಂಡಿದೆ. ಹಾಗಿದ್ದರೂ ಯಾವುದೇ ವ್ಯವಸ್ಥಿತ ಸಲಕರಣೆಗಳು, ಕೌಶಲ್ಯ ಭರಿತ ಸಿಬಂದಿಗಳು ಇಲ್ಲದೇ ಇರುವುದು  ಕಂಡುಬಂದಿದೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಜನರನ್ನು ಭಯದಿಂದ ಮುಕ್ತ ಮಾಡಲು ತಕ್ಷಣದ ಪರಿಹಾರ ಹಾಗೂ ಚಿರತೆ ಹಿಡಿಯುವ ಉಪಾಯ, ಓಡಿಸುವ ಗುಟ್ಟು ಇತ್ಯಾದಿಗಳ ಕಡೆಗೆ ಗಮನಹರಿಸಬೇಕಿದೆ.  ಬಳ್ಪದಲ್ಲಿ  ಹಲವು ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಈಗ ಪೇಟೆ ಸಮೀಪವೇ ಚಿರತೆ ಕಂಡುಬರುತ್ತಿರುವ ಕಾರಣ ತಕ್ಷಣವೇ ಹಿಡಿಯುವ ಹಾಗೂ ಜನರಿಗೂ ಹೇಗೆ ರಕ್ಷಣೆ ಎಂಬುದರ ಬಗ್ಗೆಯೂ ಮಾಹಿತಿ ಅಗತ್ಯವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?

ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…

7 hours ago

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

13 hours ago

ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…

13 hours ago

ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…

13 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ

ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…

13 hours ago

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

1 day ago