ನಾಲ್ಕೂರು ಗ್ರಾಮದ ನಡುಗಲ್ಲು ಚಾರ್ಮತ ಸಂಪರ್ಕಿಸುವ ನೆಲ್ಲಿಪುಣಿ ಎಂಬಲ್ಲಿ ಕಾಲುಸಂಕ ನಿರ್ಮಾಣಕ್ಕೆ ರಸ್ತೆಯಲ್ಲಿ ತಳಪಾಯ ತೆಗೆದು ವಿಳಂಬ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಲಾಮಕ್ಕಳು ವೃದ್ಧರು ಸೇರಿದಂತೆ ಗ್ರಾಮಸ್ಥರು ಹೋಗಲು ರಸ್ತೆ ಹಾಗೂ ದಾರಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Advertisement Advertisement Advertisement
ಗುತ್ತಿಗಾರು: ನಾಲ್ಕೂರು ಗ್ರಾಮದ ನಡುಗಲ್ಲು – ಚಾರ್ಮತ ಸಂಪರ್ಕಿಸುವ ನೆಲ್ಲಿಪುಣಿ ಎಂಬಲ್ಲಿ ಕಾಲುಸಂಕ ನಿರ್ಮಾಣಕ್ಕೆ ಸುಮಾರು 15 ಲಕ್ಷ ರೂಪಾಯಿ ಅನುದಾನವನ್ನು ಶಾಸಕ ಎಸ್ ಅಂಗಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಆರಂಭವಾಗಿತ್ತು. ಆದರೆ ಇದೀಗ ವಿಳಂಬವಾಗುತ್ತಿರುವ ಕಾರಣ ಗ್ರಾಮಸ್ಥರು ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಕಾಮಗಾರಿಯು ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಪಟ್ಟಿದ್ದು, ಟೆಂಡರು ಕೂಡಾ ಆಗಿ ಕೆಲಸ ಪ್ರಾರಂಭಿಸಲಾಗಿತ್ತು. ರಸ್ತೆಯಿಂದ ಆ ಕಡೆಗೆ ಪರಿಶಿಷ್ಟ ಪಂಗಡ ಮತ್ತು ಇತರರು ಸೇರಿ 12 ಕ್ಕಿಂತಲೂ ಅಧಿಕ ಮನೆ ಇದ್ದು, ರಸ್ತೆಯಲ್ಲಿಯೇ ತಳಪಾಯವನ್ನು ಮಾಡಿ ಹೋದ ಗುತ್ತಿಗೆದಾರರು ಮತ್ತು ಪಿಡಬ್ಲ್ಯೂಡಿ ಇಲಾಖೆ ಈ ಭಾಗಕ್ಕೆ ಇನ್ನೂ ಬಾರದೇ ವಿಳಂಬ ಧೋರಣೆ ತಳೆದಿದೆ.
ರಸ್ತೆಯಲ್ಲಿಯೇ ತಳಪಾಯ ಮಾಡಿದ ಕಾರಣ ಆ ಭಾಗದ ಮನೆಯವರಿಗೆ, ಶಾಲಾಮಕ್ಕಳು ಮತ್ತು ವೃದ್ಧರಿಗೆ ಹೋಗಲು ರಸ್ತೆ ಹಾಗೂ ದಾರಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆಗೆ ಮತ್ತು ಗುತ್ತಿಗೆದಾರರಿಗೆ ಆ ಭಾಗದ ಜನಪ್ರತಿನಿಧಿಗಳು ಸಾಕಷ್ಟು ಬಾರಿ ದೂರವಾಣಿ ಕರೆಯ ಮೂಲಕ ತಿಳಿಸಿದ್ದರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರು ಕೇಳಿಬಂದಿದೆ. ಹೀಗಾಗಿ ತಕ್ಷಣವೇ ಕೆಲಸವನ್ನು ಪ್ರಾರಂಭಿಸದಿದ್ದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಮುಂದೆ ಧರಣಿ ನಡೆಸಲು ಸಾರ್ವಜನಿಕರು ನಿರ್ಧರಿಸಿದ್ದಾರೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…