ಸಂಪಾಜೆ: ಕಳೆದ ವರ್ಷದ ಭೀಕರ ಮಳೆ ಹಾಗೂ ಜಲಪ್ರಳಯದಲ್ಲಿ ಸಂಪಾಜೆ ಭಾಗದ ಮೊಣ್ಣಂಗೇರಿ ಪ್ರದೇಶ ನುಚ್ಚುನೂರಾಯಿತು. ಅಲ್ಲಿದ್ದ ಜನರ ಕೃಷಿ ಸಹಿತ ಬದುಕು ಸರ್ವನಾಶವಾಯಿತು. ಸರಕಾರಗಳು ಪರಿಹಾರದ ಭರವಸೆ ನೀಡಿದವು. ಆದರೆ ಇದುವರೆಗೂ ಈ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಮಳೆಗಾಲ ಶುರುವಾಗಿದೆ.
ಪ್ರಳಯಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದರೂ ತಮಗೆ ಏನೂ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಜೋಡುಪಾಲ ಹಾಗೂ ಮೊಣ್ಣಂಗೇರಿಯ ಸಂತ್ರಸ್ತರು. ಬಹುತೇಕ ಮಂದಿಗೆ ನಿರಾಶ್ರಿತರ ಕೇಂದ್ರದಲ್ಲಿರುವ ಸಂದರ್ಭದಲ್ಲಿ ಸಿಕ್ಕಿದ 3800 ರೂ ರೂ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಜೋಡುಪಾಲದ ಭಾಷಾ. ಮನೆ ನಾಶವಾದವರಿಗೆ ಮನೆ ನಿರ್ಮಿಸುವುದಾಗಿ ಘೋಷಿಸಿ ಕೊಡಗಿನಲ್ಲಿ ಮನೆ ನಿರ್ಮಾಣ ಆರಂಭಿಸಲಾಗಿದ್ದರೂ ಅದು ಪೂರ್ತಿಯಾಗಿಲ್ಲ. ಎಲ್ಲರಿಗೂ ಮನೆ ಯಾವಾಗ ಸಿಗುತ್ತದೆ ಎಂದು ಕಾದು ಜನರ ನಿರೀಕ್ಷೆ ಹುಸಿಯಾಗುತಿದೆ. ನಿರಾಶ್ರಿತರು ಬಾಡಿಗೆ ಮನೆಗೆ 10 ಸಾವಿರ ರೂ ನೀಡುವುದಾಗಿ ಸರಕಾರ ಹೇಳಿತ್ತು. ಕೆಲವರಿಗೆ ಒಂದೆರಡು ತಿಂಗಳಿದ್ದು ಮಾತ್ರ ಸಿಕ್ಕಿದ್ದು ಬಿಟ್ಟರೆ ಬಹುತೇಕರಿಗೆ ಸಿಕ್ಕಿಲ್ಲ ಎನ್ನುತ್ತಾರೆ.
ಮನೆ ಕಳೆದುಕೊಂಡ ಬಳಿಕ ಒಂದು ತಿಂಗಳ 5000 ರೂಪಾಯಿ ಅಂತ ಮನೆ ಬಾಡಿಗೆ ಬಂದಿದೆ, ನಂತರ ಅದೂ ಬಂದಿಲ್ಲ ಎನ್ನುತ್ತಾರೆ ಜೋಡುಪಾಲದ ಲಕ್ಷ್ಮಣ.
ಇಡೀ ಕೃಷಿ ನಾಶವಾದ ಬಳಿಕ ಕೆಲಸವೂ ಇಲ್ಲವಾಗಿದೆ. ಕೂಲಿ ಕೆಲಸ ಮಾಡಿ ಬದುಕು ಸಾಗಿಸಲೂ ಕಷ್ಟವಾಗಿದೆ. ತೋಟದ ಕೆಲಸ ಮಾಡುವ ಎಂದರೆ ತೋಟವೂ ಇಲ್ಲವಾಗಿದೆ . ಜಲಪ್ರಳಯದ ಬಳಿಕ ಹೊಳೆ ಮೇಲೆ ಬಂದಿದೆ, ಮನೆ ಕೆಳಗೆ ಆಗಿದೆ. ಹೀಗಾಗಿ ಉಳಿದ ಕೃಷಿಗೆ ಈಗ ನೀರೂ ಇಲ್ಲ ಎಂದು ಅಳಲು ತೋಡುತ್ತಾರೆ ಜೋಡುಪಾಲದ ಭಾಷಾ.
ಹಿಂದೆ 1 ಲಕ್ಷ ಆದಾಯ ಇತ್ತು ಕೃಷಿಯಲ್ಲಿ ಈಗ 8 ಸಾವಿರವೂ ಇಲ್ಲ. ಈ ಹಣದಲ್ಲಿ ಬಾಡಿಗೆ ಮನೆ ಮಾಡುವುದು ಹೇಗೆ . ಕೃಷಿ ಮಾಡಲಾಗುತ್ತಿಲ್ಲ, ಕೂಲಿ ಕೆಲಸ ಇಲ್ಲ, ಭಿಕ್ಷೆ ಬೇಡಲೂ ಆಗುತ್ತಿಲ್ಲ ಎಂದು ಪ್ರಶ್ನೆ ಹೇಳುತ್ತಾರೆ ಜೋಡುಪಾಲದ ಸುಂದರ ಪೂಜಾರಿ.
ಮನೆ ನಾಶ, ಕೃಷಿ ನಾಶವಾದ ಕೆಲವರು ಸಂಪಾಜೆ ಘಾಟಿ ರಸ್ತೆಯ ಪಕ್ಕದಲ್ಲಿ ಟೀ ಸ್ಟಾಲ್, ಸಣ್ಣ ಅಂಗಡಿ, ಜ್ಯೂಸ್ ಅಂಗಡಿ ಇತ್ಯಾದಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸರಕಾರದ ಪರಿಹಾರ, ಮನೆ ನಂಬಿ ಕೂತರೆ ಆಗದು ಎನ್ನುತ್ತಾರೆ.
ಆನೇಕಲ್ ತಾಲೂಕಿನ ಜಿಗಣಿಯ ಕುಂಟ್ಲರೆಡ್ಡಿ ಬಡಾವಣೆಯ ವೇಂಕಟೇಶ್ ಎಂಬುವರ ಮನೆಗೆ ನಿನ್ನೆ ನುಗ್ಗಿದ್ದ…
ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…
ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…
ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490