ರಾಂಚಿ : ಚುನಾವಣೋತ್ತರ ಸಮೀಕ್ಷೆಗಳು ಹೊರ ಬರುತ್ತಿದ್ದಂತೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಡಿ.23ರಂದು 81 ಕ್ಷೇತ್ರಗಳ ಚುನಾವಣೆ ಫಲಿತಾಂಶದ ಆರಂಭಿಕ ಟ್ರೆಂಡ್ ನಲ್ಲಿ ಜೆಎಂಎಂಗೆ ಮುನ್ನಡೆ ಸಿಗುತ್ತಿದ್ದಂತೆ ಈ ಸಂತಸ ದ್ವಿಗುಣವಾಗಿದೆ. ಜೊತೆಗೆ ಜೆಎಂಎಂನ ಸಿಎಂ ಅಭ್ಯರ್ಥಿ ಹೇಮಂತ್ ಸೊರೆನ್ ಮುನ್ನಡೆ ಕಾಯ್ದುಕೊಂಡಿರುವುದು ಖುಷಿ ಹೆಚ್ಚಿಸಿದೆ.
ಜಾರ್ಖಂಡ್ ನಲ್ಲಿ ನ. 30ರಿಂದ ಡಿ. 20 ರ ತನಕ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆದು, ಡಿ. 23ರಂದು ಮತ ಎಣಿಕೆ ಕಾರ್ಯ ನಡೆಸಲಾಗುತ್ತಿದೆ.
ಫಲಿತಾಂಶ ಟ್ರೆಂಡ್: ಬರ್ಹಾಯಿತ್ ಕ್ಷೇತ್ರದಿಂದ ಸ್ಪರ್ಧಿಸಿರುವ ಹೇಮಂತ್ ಸೊರೆನ್ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಿಮೋ ಮಾಲ್ಟೋ ವಿರುದ್ಧ ಆರಂಭಿಕ ಮುನ್ನಡೆ(ಶೇ 9ರಷ್ಟು ಮತಗಳ ಅಂತರ) ಕಾಯ್ಡುಕೊಂಡಿದ್ದಾರೆ. ಆದರೆ, ಡುಮ್ಕಾ ಕ್ಷೇತದಲ್ಲಿ ಸಚಿವ ಲೂಯಿಸ್ ಮರಾಂಡಿ ವಿರುದ್ಧ ಸೊರೆನ್ ಹಿನ್ನಡೆ ಅನುಭವಿಸಿದ್ದಾರೆ. ಒಟ್ಟಾರೆ, 81 ಕ್ಷೇತ್ರಗಳಲ್ಲಿ ಜೆಎಂಎಂ-ಕಾಂಗ್ರೆಸ್- ಆರ್ ಜೆ ಡಿ : 40, ಬಿಜೆಪಿ 29, ಜೆವಿಎಂ 4, ಎಜೆಎಸ್ ಯು 2, ಇತರೆ 5 ಕ್ಷೇತ್ರಗಳಲ್ಲಿ ಮುನ್ನಡೆ ಪಡೆಸುಕೊಂಡಿವೆ.
ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…
ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…
ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…
ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಬೆಳವಣಿಗೆಯಲ್ಲಿ ಯು.ಜಿ. ರಾಧ ಭಟ್ ಅವರು ಸುಮಾರು 18…
ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…
ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…