ಈ ಕ್ಷಣದಲ್ಲಿ ನಗು ನಲಿವು..
ಮುಂದಿನ ಹೆಜ್ಜೆಯಿಡಲು ಚುಚ್ಚುವುದು
ಮುಳ್ಳು ಮತ್ತೆ ಅಳು ಸಂಕಟ ನೋವು.
ಅಪೇಕ್ಷೆಯಿಲ್ಲದೆ ಮುಂದಡಿ ಇಡುಹೂವಾದರೂ ಮುಳ್ಳಾದರೂಎಲ್ಲಕ್ಕೂ ಸಿದ್ಧವಾಗಿರು..ಮತ್ತದಕೆ ಬಧ್ಧವಾಗಿರು….
ಸಕಲವನ್ನೂ ಕಳೆದುಕೊಂಡು
ಬರಿಗೈಯಲ್ಲಿ, ಬೆತ್ತಲಾಗಿ ನಿಂತಾಗ
ಧರಿಸಿಕೋ ನಂಬಿಕೆಯೆಂಬ ವಸ್ತ್ರವ..
ನಗುವೆಂಬ ಆಭರಣವ..
ಇಷ್ಟೇ ಸಾಕು ಮತ್ತೆ ಮೇಲೇಳಲು
ಧೈರ್ಯದಿಂದ ಕಷ್ಟಗಳ ಎದುರಿಸಲು..
ಕೊನೆಗೊಂದು ಹಾರೈಕೆಸುಖಕರವಾಗಿರಲಿ ನಿನ್ನ ಪ್ರಯಾಣ..ಮತ್ತೊಂದು ಎಚ್ಚರಿಕೆ..ಪ್ರತಿ ದಿನ ಸುಖವಾಗಿರಲು ಇದುಕಲ್ಪನೆಯ ಇಂದ್ರಲೋಕವಲ್ಲ..ಭೂಮಿ ಮೇಲಿನ ಸಾಮಾನ್ಯ ಜೀವನ…!!
ಬರಹ: ರೇಖಾ ಕೊಡಂಕೆರಿ, ಕರ್ಲಪ್ಪಾಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement