ಮಂಗಳೂರು: ಜುಲೈ 11 ರಂದು ಕ್ಯಾಂಪ್ಕೋ ಸಂಸ್ಥೆಯು ಯಶಸ್ವಿ 46 ವರ್ಷಗಳ ಸೇವೆಯನ್ನು ಪೂರೈಸಿ 47 ನೇ ವರ್ಷಕ್ಕೆ ಕಾಲಿಡುತ್ತಿದೆ.
ಅಡಿಕೆ ಕೃಷಿಕರ ಕಣ್ಮಣಿ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೊ ಅಡಿಕೆ ಮಾರುಕಟ್ಟೆಯು ದಾರುಣ ಸ್ಥಿತಿಯಲ್ಲಿದ್ದಾಗ ಕೃಷಿಕರ ಉದ್ಧಾರಕ್ಕಾಗಿ ವಾರಣಾಶಿ ಸುಬ್ರಾಯ ಭಟ್ಟರ ಸಂಘಟನಾ ಚಾತುರ್ಯ ಮತ್ತು ದೂರದರ್ಶಿತ್ವದ ಫಲವಾಗಿ ಕೃಷಿಕ ಸಮುದಾಯದ ಸಹಕಾರದೊಂದಿಗೆ ಆಪದ್ಬಾಂಧವನಾಗಿ ಜನ್ಮ ತಾಳಿದ ಸಂಸ್ಥೆಯು ಕ್ರಮೇಣ ಕೊಕ್ಕೋ, ರಬ್ಬರ್ ಮತ್ತು ಕಾಳುಮೆಣಸುಗಳನ್ನು ವ್ಯಾಪಿಸಿಕೊಂಡು ಇದೀಗ 2018-19ನೇ ಹಣಕಾಸು ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 1880 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿದೆ.
ಸಂಸ್ಥೆಯು ಜುಲೈ 11ನೇ ತಾರೀಕಿನಂದು ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಹಿರಿಯ ಸಹಕಾರಿ ಮತ್ತು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ಸತೀಶ್ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪ್ಕೊದ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಿ.ಕೆ.ಸಂಗಮೇಶ್ವರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ವಿ.ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…