ಮಡಿಕೇರಿ: ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಜಲಪ್ರಳಯದಲ್ಲಿ ಸಂಕಷ್ಟಗೊಳಗಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ನಮ್ಮಕೊಡಗು ತಂಡವು , ಪ್ರೇರಣೆ ಎಂಬ ಹೆಸರಿನ ಕಾರ್ಯಕ್ರಮವನ್ನು ಜೂನ್ 2 ರಂದು ಭಾನುವಾರ ಕುಶಾಲನಗರದಲ್ಲಿ ಹಮ್ಮಿಕೊಂಡಿದೆ.
“ನಮ್ಮಕೊಡಗು ತಂಡ” ಕೊಡಗಿನ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿ ವೇತನ” ಹಾಗೂ ಕೊಡಗಿನ ಪ್ರವಾಹದಲ್ಲಿ ನಿರಾಶ್ರಿತರಾಗಿದ್ದು ಈಗಾಗಲೇ ಸಂಸ್ಥೆಗಳಿಂದ ಆಯ್ಕೆ ಮಾಡಲಾಗಿರುವ ಫಲಾನುಭವಿ ಕುಟುಂಬಗಳಿಗೆ “ಧನಸಹಾಯ” ನೀಡುವ ಕಾರ್ಯಕ್ರಮವನ್ನು “ಪ್ರೇರಣೆ” ಎಂಬ ಹೆಸರಿನೊಂದಿಗೆ ಜೂನ್ 2 ರಂದು ಬೆಳಗ್ಗೆ 10.30 ಗಂಟೆಗೆ ಕುಶಾಲನಗರದ “ಮಿನಿಸ್ಟರ್‍ಕೋಟ್” ನಲ್ಲಿ ಹಮ್ಮಿಕೊಂಡಿದ್ದು ಕಾಯ9ಕ್ರಮವನ್ನು ಬೆಂಗಳೂರಿನ ಹೆಸರಾಂತ ವೈದ್ಯೆ, ಸಾಮಾಜಿಕ ಹೋರಾಟಗಾರ್ತಿ ಡಾ.ನಾಗಲಕ್ಷ್ಮಿಚೌಧರಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಮೇರಿಕಾದಕಾಟಿ ಪ್ರೀಮಿಯರ್ ಲೀಗ್ ನ ಅವಿನಾಶ್ ಬಸವರಾಜು, ಎಸ್.ಎಲ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎನ್.ವಿಶ್ವನಾಥ್, ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮಕೊಡಗು ಚಾರಿಟೇಬಲ್ ಸಂಸ್ಥೆ ಸಂಸ್ಥಾಪಕ ನೌಶದ್ ಜನ್ನತ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕುಶಾಲನಗರದ ಕಾವೇರಿ ಟೆಕ್ಟ್‍ಟೈಲ್ಸ್ ಮಾಲಕ ಎಸ್.ಕೆ.ಸತೀಶ್, ಬೈಲುಕುಪ್ಪೆ ಪೊಲೀಸ್‍ಠಾಣಾಧಿಕಾರಿ ಸಿ.ಯು.ಸವಿ, ದೃಷ್ಟಿ ಚಾರಿಟೇಬಲ್ ಟ್ರಸ್ಟ್ ನ ನನಿರ್ದೇಶಕ ಸಂತೋಷ್ ಕೊಡಂಕೇರಿ, ಬೆಂಗಳೂರಿನ ಯುವಶಕ್ತಿ ಸಂಸ್ಥೆಯ ಜಂಟಿನಿರ್ದೇಶಕ ಬಾಬುರೆಡ್ಡಿ ವಿ. ರಾಜ್ಯ ಜಂಟಿ ನಿರ್ದೇಶಕ ವಿಜಯ ಭಾವರೆಡ್ಡಿ ಪಾಲ್ಗೊಳ್ಳಲಿದ್ದಾರೆ.
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…