ಪುತ್ತೂರು: ಪುತ್ತೂರಿನ ನವಚೇತನ ಸ್ನೇಹಸಂಗಮ ಹಾಗೂ ಜೆಸಿಐ ಪುತ್ತೂರು ಆಯೋಜನೆಯಲ್ಲಿ ಪ್ರಥಮ ಬಾರಿಗೆ ‘ಸಾವಯವ ಹಬ್ಬ’ ಸಂಪನ್ನವಾಗಲಿದೆ. ಜನವರಿ 4 ಮತ್ತು 5 ರಂದು ದಿನಪೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಬ್ಬ ನಡೆಯಲಿದೆ.
Advertisement
ಸಿರಿಧಾನ್ಯ, ದಿನಸಿ, ತರಕಾರಿ ಮತ್ತು ಅಡುಗೆಗಳು ಊಟದ ಬಟ್ಟಲನ್ನು ಸೇರಬೇಕೆನ್ನುವ ಆಶಯದೊಂದಿಗೆ ನಮ್ಮ ಆಹಾರಗಳು ರಾಸಾಯನಿಕಮುಕ್ತವಾಗಿ, ಆರೋಗ್ಯ ಭಾಗ್ಯವಾಗಬೇಕೆನ್ನುವ ದೂರದೃಷ್ಟಿಯಿಂದ ಈ ಹಬ್ಬ ಆಚರಿಸಲಾಗುತ್ತಿದೆ.
ಪೂರ್ವಾಹ್ನ ಗಂಟೆ 10 ಕ್ಕೆ ಸಾವಯವ ಹಬ್ಬ ಕ್ರಿಯಾಸಮಿತಿಯ ಗೌರವಾಧ್ಯಕ್ಷರು ಹಾಗೂ ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ.ವಿಜಯ ಹಾರ್ವಿನ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾವಯವ ಕೃಷಿ ಮಿಶನ್ನಿನ ಅಧ್ಯಕ್ಷ ಸಾಗರದ ಆ.ಶ್ರೀ.ಆನಂದ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಶುಭಾಶಂಸನೆ ಮಾಡಲಿದ್ದಾರೆ. ಜೇಸಿಐ ಭಾರತ ವಲಯ ಘಿಗಿ – ಆರೋಗ್ಯ ಮತ್ತು ಕ್ಷೇಮ – ಇದರ ವಲಯ ಸಂಯೋಜಕ ಜೇಸಿ ಬಾದ್‍ಶಾ ಸಂಬಾರತೋಟ ಇವರ ಉಪಸ್ಥಿತಿ.
ಭತ್ತದ ಕೃಷಿಯ ಪಲ್ಲಟಗಳ ಕಾಲಘಟ್ಟದಲ್ಲಿ ದೀರ್ಘ ಸಮಯದಿಂದ ಸಾವಯವ ವಿಧಾನದಲ್ಲಿ ಭತ್ತದ ಕೃಷಿ ಮಾಡುತ್ತಿರುವ ಶ್ರೀಮತಿ ಉಷಾ ಮೆಹಂದಳೆ ಮತ್ತು ಸೀತಾರಾಮ ಮೆಹಂದಳೆ ದಂಪತಿಯನ್ನು ಗೌರವಿಸಲಾಗುತ್ತದೆ. ಈ ಸಂದರ್ಭದಲ್ಲಿ ‘ನವತೇಜ ಟ್ರಸ್ಟ್’ ಶುಭಾರಂಭಗೊಳ್ಳಲಿದೆ. ಅನ್ನದ ಕೃಷಿಯ ಬಿಸಿಯುಸಿರಿನ ಕುರಿತು ಅಂಕಣಕಾರ, ಲೇಖಕ ನಾ. ಕಾರಂತ ಪೆರಾಜೆಯವರ ‘ಜೀವಧಾನ್ಯ’ ಕೃತಿಯ ಲೋಕಾರ್ಪಣೆ ನಡೆಯಲಿದೆ.
ಅಪರಾಹ್ಣ ಗಂಟೆ 3ಕ್ಕೆ ಪುತ್ತೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಇವರ ಅಧ್ಯಕ್ಷತೆಯಲ್ಲಿ ‘ಸಾವಯವ ಬದುಕು-ಯಶದ ಹೆಜ್ಜೆ’ ಎನ್ನುವ ಆಶಯದ ವಿಚಾರಗೋಷ್ಠಿ ನಡೆಯಲಿದೆ. ಬರಡು ಭೂಮಿಯನ್ನು ಹಸಿರಾಗಿಸಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ವಿಶ್ವೇಶ್ವರ ಸಜ್ಜನ ಇವರ ಅನುಭವ ಕಥನ, ಮಡಿಕೇರಿಯ ಸಿವಿಲ್ ಇಂಜಿನಿಯರ್ ಶಿವಕುಮಾರ್ ಇವರು ‘ಸಾವಯವ ಕೃಷಿ ವೈವಿಧ್ಯ’ಗಳತ್ತ ಬೆಳಕು ಚೆಲ್ಲಲಿದ್ದಾರೆ. ಸಾಂಪ್ರದಾಯಿಕ ಭತ್ತದ ಕೃಷಿಕರಾದ ರಘುಪತಿ ಎರ್ಕಡಿತ್ತಾಯರ ಉಪಸ್ಥಿತಿ.
ಜನವರಿ 5ರಂದು ಪೂರ್ವಾಹ್ನ 10-30ಕ್ಕೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ ‘ಸಾವಯವ ವೈವಿಧ್ಯ’ ಎನ್ನುವ ಗೋಷ್ಠಿ ಸಂಪನ್ನವಾಗಲಿದೆ. ಬೆಂಗಳೂರಿನ ಊಟ ಫ್ರಮ್ ಯುವರ್ ತೋಟ ಇದರ ಸಂಚಾಲಕ ರಾಜೇಂದ್ರ ಹೆಗಡೆಯವರು ‘ತಾರಸಿ ಕೈತೋಟ’ದ ಕುರಿತು ಮತ್ತು ತಿಥಿ, ವಾರ, ನಕ್ಷತ್ರ ಆಧಾರಿತ ತರಕಾರಿ ಕೃಷಿ ತಜ್ಞ ಪೆರ್ಲದ ಶಿವಪ್ರಸಾದ್ ವರ್ಮುಡಿಯವರ ತರಕಾರಿ ಕೃಷಿ ಅನುಭವಗಳ ವಿಶೇಷ ಉಪನ್ಯಾಸಗಳು ನಡೆಯಲಿವೆ. ಪುತ್ತೂರಿನ ಕೋಡಿಬೈಲು ಆಗ್ರೋ ಮ್ಯಾಕ್ ಇದರ ಮುಖ್ಯಸ್ಥ ಕೆ.ಸತ್ಯನಾರಾಯಣ ಉಪಸ್ಥಿತಿ.
ಸಂಜೆ ಗಂಟೆ 4ಕ್ಕೆ ಸಾವಯವ ಹಬ್ಬದ ಸಮಾಪನ. ಪುತ್ತೂರಿನ ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅಧ್ಯಕ್ಷತೆ. ಜೇಸಿಐ ಪುತ್ತೂರು ಇದರ ಕಾರ್ಯದರ್ಶಿ ಪ್ರಮಿತಾ ಸಿ. ಹಾಸ್ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕಹಳೆ ನ್ಯೂಸ್ ಇದರ ಮುಖ್ಯಸ್ಥ ಶ್ಯಾಮ ಸುದರ್ಶನ ಮತ್ತು ಜೆಸಿಐ ಭಾರತ ವಲಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಜೆ.ಎಫ್.ಎಮ್. ಅಶ್ವಿನಿ ಐತಾಳ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉತ್ತರ ಕರ್ನಾಟಕದಿಂದ ತಂತಮ್ಮ ಸಾವಯವ ಉತ್ಪನ್ನಗಳೊಂದಿಗೆ ಕೃಷಿಕರೇ ಸ್ವತಃ ಮಳಿಗೆ ತೆರೆದು ಮಾಹಿತಿಯೊಂದಿಗೆ ಉತ್ಪನ್ನಗಳನ್ನು ಮಾರುತ್ತಿರುವುದು ಹಬ್ಬದ ಹೈಲೈಟ್.
ಜನವರಿ 5ರಂದು ಬೆಳಿಗ್ಗೆ ಗಂಟೆ ಏಳರಿಂದ ಸಾವಯವ ತರಕಾರಿ ಸಂತೆ ನಡೆಯಲಿದೆ. ಸುಮಾರು ಇಪ್ಪತ್ತೈದಕ್ಕೂ ಮಿಕ್ಕಿದ ಮಳಿಗೆಗಳಲ್ಲಿ ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.ಸಾವಯವ ಪದ್ಧತಿಯಲ್ಲಿ ತರಕಾರಿಯನ್ನು ಬೆಳೆಯುವ ಕೃಷಿಕರು ತಾವು ಬೆಳೆದ ತರಕಾರಿಗಳೊಂದಿಗೆ ಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿರಿಧಾನ್ಯದ ರೆಡಿ ಟು ಈಟ್ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಸಿಗಲಿವೆ. ಸ್ಥಳದಲ್ಲೇ ಬಿಸಿಬಿಸಿ ತಿಂಡಿಗಳು. ಕೃಷಿ ಯಂತ್ರಗಳು… ಮೇಳದ ಹೈಲೈಟ್. ಪುತ್ತೂರಿನ ಅನ್ಯಾನ್ಯ ಸುಮನಸ ಮನಸಿಗರು ಹಬ್ಬಕ್ಕೆ ಕೈಜೋಡಿಸಿದ್ದಾರೆ.
4ರಂದು ಸಂಜೆ ಶಂಕರಿ ಶರ್ಮ ಮತ್ತು ಬಳಗ, ಕುಶಲ ಹಾಸ್ಯ ಸಂಘ ಪುತ್ತೂರು ಇವರಿಂದ ‘ಹಾಸ್ಯ ಲಾಸ್ಯ’ ನಡೆಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…