ಸುಬ್ರಹ್ಮಣ್ಯ:ಮಾ. 1ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಬಂದಿದ್ದ ಭಕ್ತಾದಿಯೊಬ್ಬರು ರಕ್ತದೊತ್ತಡ ಕಡಿಮೆಯಾಗಿ ನಿತ್ರಾಣಗೊಂಡು ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ತಕ್ಷಣವೇ ಜೊತೆಯಲ್ಲಿದ್ದವರು ಕುಕ್ಕೆಯ ಆಸ್ಪತ್ರೆಗೆ ಸಾಗಿಸಿದಾಗ ಹೆಚ್ಚಿನ ಚಿಕಿತ್ಸೆಗೆಂದು ಸಕಲ ಸೌಕರ್ಯವಿರುವ ಆಸ್ಪತ್ರೆಗೆ ಹೋಗಬೇಕೆಂದು ವೈದ್ಯರು ನಿರ್ದೇಶಿಸಿದ್ದರು.
ಬೆಂಗಳೂರು ಮೂಲದ ನಾಗೇಶ ಎಂಬ ಆ ವ್ಯಕ್ತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದಾಗ, ಸ್ಥಳೀಯರ ಸಲಹೆಯಂತೆ “ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್’ನ ಆ್ಯಂಬುಲೆನ್ಸ್’ನ ಸೇವೆಯನ್ನು ಬಳಸಿಕೊಂಡರು. ಕುಕ್ಕೆಯ ವೈದ್ಯರು ಕೆಲವೇ ತಾಸುಗಳಲ್ಲಿ ಇನ್ನೊಂದು ಆಸ್ಪತ್ರೆಗೆ ಶಿಪ್ಟ್ ಮಾಡಬೇಕೆಂಬ ಅತಿಮುಖ್ಯ ಸಲಹೆಯಂತೆ “ಜೀರೋ ಟ್ರಾಫಿಕ್ ಅಲ್ಲದೆಯೂ” ಕೇವಲ 4:30 ತಾಸುಗಳ ಅವಧಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ 318 ಕಿಲೋಮೀಟರ್ ಅಂತರವಿರುವ ಬೆಂಗಳೂರಿನ ಬಿಜಿಎಸ್ ಹಾಸ್ಪಿಟಲ್ ಕೆಂಗೇರಿ ಇಲ್ಲಿಗೆ ಅನಾರೋಗ್ಯ ಪೀಡಿತ ವ್ಯಕ್ತಿಯ ಆರೋಗ್ಯ ಹದೆಗೆಡದಂತೆ ಕಾಪಾಡಿಕೊಂಡು ಸುರಕ್ಷಿತವಾಗಿ ತಲುಪಿಸಿ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.
ಈ ಸಂದರ್ಭದಲ್ಲಿ ಪದ್ಮಕುಮಾರ್ ನಾಯರ್‌ಕೆರೆ ಹಾಗೂ ನಿತಿನ್ ಭಟ್ ಕುಕ್ಕೆಸುಬ್ರಹ್ಮಣ್ಯ ಇವರು ವಾಹನವನ್ನು ಚಲಾಯಿಸಿ ರೋಗಿಯನ್ನು ಸುರಕ್ಷಿತವಾಗಿ ಮಗದೊಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗುವಲ್ಲಿ ಅತ್ಯಂತ ಪ್ರಾಮುಖ್ಯವಾದ ಪಾತ್ರ ವಹಿಸಿದ್ದರು. ವಿಶೇಷ ಜನಮನ್ನಣೆಗೆ ಒಳಗಾಗಿರುವ ಪದ್ಮಕುಮಾರ್ ನಾಯರ್ ಕೆರೆಯವರು ತಮ್ಮ ಸ್ವಂತ ವಾಹನ ಹೊಂದಿದ್ದರು, ತುರ್ತು ಸೇವೆಗಳ ಸಂದರ್ಭ ತನ್ನೆಲ್ಲ ಕೆಲಸವನ್ನು ಬದಿಗಿಟ್ಟು ಬಂದು, ಜನಸೇವೆಯೇ ಜನಾರ್ದನ ಸೇವೆ ಎಂದು ಸೇವಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ನಿತಿನ್ ಭಟ್ ಮಗದೊಬ್ಬ ನಿಸ್ವಾರ್ಥ ಸಮಾಜಸೇವಕ, ಯುವ ತೇಜಸ್ಸು ಸೇವಾ ಸಂಸ್ಥೆಯಲ್ಲಿ ಗುರುತಿಸಿಕೊಂಡು ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ತನ್ನಿಂದಾದ ಸಹಾಯವನ್ನು ನೀಡುತ್ತಾ ಬಂದು ಜನರ ಪ್ರೀತಿಗೆ ಪಾತ್ರರಾದವರು.
ಪಂಜ ಆಸುಪಾಸಿನ ಐವತ್ತೋಕ್ಲು, ಕೂತ್ಕುಂಜ, ಬಳ್ಪ, ಪಂಬೆತ್ತಾಡಿ, ಕೇನ್ಯ ಈ ಗ್ರಾಮಗಳಿಗೆಂದು, ಈ ಗ್ರಾಮದಿಂದಲೇ ಧನ ಸಂಗ್ರಹಿಸಿ ಈ ಭಾಗದ ಜನರಿಗಾಗಿ ಆಯೋಜಿಸಿದ್ದ ಸೇವೆಯೂ, ಇವಾಗ ಸುಳ್ಯ ತಾಲೂಕಿನ ಭಾಗವಲ್ಲದೇ ಕಡಬ ತಾಲೂಕಿನ ಜನತೆಗೂ ಲಭ್ಯವಾಗುತ್ತಿದೆ. 108 – ಆಂಬುಲೆನ್ಸ್ ಸೇವೆಯೂ ಪಂಜ ಭಾಗದ ಜನರಿಗೆ ಅಲಭ್ಯವಾದುದರಿಂದ ಈ ಭಾಗದಲ್ಲಿ ಅನಾರೋಗ್ಯಕ್ಕೆ ತುತ್ತಾದವರು ಬಹಳ ಸಂಕಷ್ಟಕ್ಕೆ ಒಳಗಾಗುತ್ತಿದ್ದು ಮತ್ತು ಈ ಹಿಂದೆ ಬಹಳಷ್ಟು ರಸ್ತೆ ಅಪಘಾತಗಳಲ್ಲಿ ನಾನಾ ಭಾಗದ ಜನರು ಗಾಯಗೊಂಡಿದ್ದಾಗ, ಜೀವನ್ಮರಣ ಸ್ಥಿತಿಯಲ್ಲಿ ಹೊರಳಾಡುತ್ತಿದ್ದಾಗ ತುರ್ತಾಗಿ ಆಂಬುಲೆನ್ಸ್ ಸೇವೆ ಲಭ್ಯವಾಗದೆ ಹಲವು ಬಾರಿ ಪರದಾಡಿದುಂಟು. ಇದಕ್ಕೊಂದು ಪರ್ಯಾಯ ಸೇವೆಯನ್ನು ಒದಗಿಸಿಕೊಟ್ಟ ಪಂಚಶ್ರೀ ಪಂಜ ಸ್ಪೋಟ್ಸ್ ಕ್ಲಬ್’ನ ಪ್ರತಿಯೊಬ್ಬ ಸದಸ್ಯರು ಕೂಡ ಪ್ರಶಂಸಿಯನರ್ಹರು.
ಈ ಸೇವೆಯೂ ಜನರಿಗೆ ನಿರಂತರವಾಗಿ ದೊರೆಯಲಿ ಎಂದು ಆಶಿಸುತ್ತೇವೆ.
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…