ಟ್ರಾಫಿಕ್ ಜಾಂನಿಂದ ಐಟಿ-ಬಿಟಿ ಕಂಪನಿಗಳಿಗೆ 30 ಸಾವಿರ ಕೋಟಿ ನಷ್ಟ…..! : ಗ್ರಾಮೀಣ ಭಾಗದ ರಸ್ತೆ ಸರಿ ಇಲ್ಲದೇ ಇದ್ದರೆ….?

September 9, 2019
9:00 AM

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದರು. ಇಡೀ ನಗರದ ಸಮಸ್ಯೆ ಆಲಿಸಿದ್ದರು. ಈ ಸಂದರ್ಭ ಐಟಿ-ಬಿಟಿ ಕಂಪನಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದಾಗ  ಟ್ರಾಫಿಕ್ ಜಾಂ ನಿಂದಾಗಿ   ಐಟಿ-ಬಿಟಿ ಕಂಪನಿಗಳು ವಾರ್ಷಿಕ 30 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂದರು. ವಾಸ್ತವವಾಗಿ ಟ್ರಾಫಿಕ್ ಜಾಂ ತೀರಾ ಸಮಸ್ಯೆ ಉಂಟು ಮಾಡುತ್ತವೆ. ಇದೇ ರೀತಿ ಗ್ರಾಮೀಣ ಭಾಗದ ರಸ್ತೆಗಳು ಸೇರಿದಂತೆ ಮೂಲಭೂತ ವ್ಯವಸ್ಥೆ ಸರಿ ಇಲ್ಲದೇ ಇದ್ದರೆ ಕೃಷಿಕರಿಗೆ ಹಾಗೂ ಗ್ರಾಮೀಣ ಭಾಗದ ಸಣ್ಣ ಸಣ್ಣ ಉದ್ದಿಮೆಗಳಿಗೂ ಹೊಡೆತ ಕೊಡುತ್ತವೆ. ನಷ್ಟ ಉಂಟು ಮಾಡುತ್ತವೆ. ಈ ಕಡೆಗೆ ಫೋಕಸ್..

Advertisement
Advertisement

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬೆಂಗಳೂರು ನಗರ ಪ್ರದಕ್ಷಿಣೆಯ ಮೂಲಕ ವಿವಿಧ ಸಮಸ್ಯೆಯನ್ನು ಅರಿತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಹೀಗೇ ನಗರ ಪ್ರದಕ್ಷಿಣೆ ಹಾಕಿದಾಗ ವಿವಿಧ ಸಮಸ್ಯೆಗಳು ಬೆಳಕಿಗೆ ಬಂದವು. ಅದರಲ್ಲಿಜನಸಾಮಾನ್ಯರೂ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳು ಅನುಭವಿಸುವ ಟ್ರಾಫಿಕ್ ಜಾಂ ಸಮಸ್ಯೆಯೂ ಕೇಳಿಬಂತು. ಅದರಲ್ಲಿ  ಐಟಿ-ಬಿಟಿ ಕಂಪನಿಗಳು ವಾರ್ಷಿಕ 30 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂಬ ಮಾಹಿತಿಯನ್ನೂ ಕಂಪನಿ ಒಕ್ಕೂಟ ನೀಡಿತು.

Advertisement

 ಮಾರತ್‌ಹಳ್ಳಿಯ ಬಳಿಯ ಖಾಸಗಿ ಕಂಪನಿಯಲ್ಲಿ ಸಿಎಂ ಅವರು ರಿಂಗ್‌ ರಸ್ತೆಯ ಸುತ್ತಲಿನ ಐಟಿ-ಬಿಟಿ ಕಂಪನಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದಾಗ, ರಿಂಗ್‌ ರಸ್ತೆ ಸುತ್ತ  ಹೆಚ್ಚು  ಉದ್ದಿಮೆಗಳಿವೆ. ಅದರಲ್ಲೂ ಪೂರ್ವ ಭಾಗದಲ್ಲಿ ಐಟಿ-ಬಿಟಿ ಕಾರಿಡಾರ್‌ ವ್ಯಾಪ್ತಿಯಲ್ಲಿ ನೂರಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲೆಲ್ಲಾ ದೊಡ್ಡ ಸಂಖ್ಯೆಯ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಕೆಲಸದ ಸ್ಥಳವನ್ನು ತಲುಪಲು ಪ್ರಯಾಸಪಡಬೇಕಿದೆ. ನಿತ್ಯ 1-2 ಗಂಟೆ ಟ್ರಾಫಿಕ್‌ನಲ್ಲೇ ಸಮಯ ವ್ಯಯವಾಗುತ್ತಿದೆ. ತಡವಾಗಿ ಬರುವ ನೌಕರ ವರ್ಗ ಹಾಗೂ ಮಾನವ ಸಂಪನ್ಮೂಲ ನಷ್ಟದಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದರು. ಬಳಿಕ ಇದಕ್ಕೇನು ಪರಿಹಾರ ಎಂಬುದರ ಬಗ್ಗೆ ಯೋಜನೆ-ಯೋಚನೆ ನಡೆಯಿತು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಡಿರುವ ಈ ನಗರ ಪ್ರದಕ್ಷಿಣೆ ಪ್ರತೀ ಕ್ಷೇತ್ರದ ಶಾಸಕರೂ ಇದೇ ಮಾದರಿ ಅನುಸರಿಸಿ ಅನುದಾನ ತರಿಸಿಕೊಂಡರೆ ಸಮಸ್ಯೆ ನಿವಾರಣೆ ಸಾಧ್ಯವಿದೆ. ಗ್ರಾಮೀಣ ಭಾಗದ ಹಲವಾರು ರಸ್ತೆಗಳು , ಸೇತುವೆಗಳು ಸರಿ ಇಲ್ಲವಾಗಿದೆ. ಕೆಲವು ಮುಖ್ಯರಸ್ತೆಗಳೂ ಸರಿ ಇಲ್ಲವಾಗಿದೆ. ಹೀಗಾಗಿ ಇವುಗಳು ದುರಸ್ತಿಗೆ ಕ್ರಮ ಕೈಗೊಂಡರೆ ಬಹುತೇಕ ಗ್ರಾಮೀಣ ಭಾಗಗಳೂ ಬೆಳಕು ಕಾಣಲು ಸಾದ್ಯವಿದೆ.ಗ್ರಾಮೀಣ ಭಾಗದ ರಸ್ತೆ ಸರಿ ಇಲ್ಲದೇ ಇದ್ದರೆ ಕೃಷಿಕರಿಗೆ ಹಾಗೂ ಸಣ್ಣ ಸಣ್ಣ ಉದ್ದಿಮೆದಾರರಿಗೆ, ನಿತ್ಯ ಸವಾರರಿಗೆ ತೀರಾ ಸಂಕಷ್ಟ. ಕೃಷಿಕ ಬೆಳೆದ ಯಾವುದೇ ವಸ್ತು ಮಾರುಕಟ್ಟೆಗೆ ತಲುಪಬೇಕಾದರೆ ವ್ಯವಸ್ಥೆ ಅಗತ್ಯ. ಸಣ್ಣ ಸಣ್ಣ ಉದ್ದಿಮೆದಾರರಿಗೆ ಹೊಂಡಗುಂಡಿಯ ರಸ್ತೆಯಲ್ಲಿ ಸಾಗಿದರೆ ವಾಹನದ ನಿರ್ವಹಣೆಗೇ ಖರ್ಚುಗಳೆಲ್ಲಾ ಬಳಕೆಯಾದರೆ ಇದೇ  ವೆಚ್ಚ ಗ್ರಾಹಕನ ಮೇಲೆಯೇ ಬೀಳುತ್ತದೆ. ಅಗನತ್ಯವಾಗಿ ಇಂಧನ ವ್ಯಯವಾಗುತ್ತದೆ, ಇಡೀ ದೇಶಕ್ಕೆ ನಷ್ಟವಾಗುತ್ತದೆ. ಇದೆಲ್ಲಾ ಜನಪ್ರತಿನಿಧಿಗಳು ಅರಿತುಕೊಂಡು ಕನಿಷ್ಟ ಅನುದಾನ ತರಿಸಿಕೊಂಡರೆ ಗ್ರಾಮೀಣ ಭಾಗವೂ ಬೆಳಕು ಕಾಣಲು ಸಾಧ್ಯವಿದೆ.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror