ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ದಿಯಾಗಿರುವ ಶ್ರೀನಿವಾಸ ಗೌಡ ನಾನು ಟ್ರ್ಯಾಕ್ ನಲ್ಲಿ ಓಡುವುದಿಲ್ಲ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದು, ಕೇಂದ್ರ ಕ್ರೀಡಾ ಸಚಿವರ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಶ್ರೀನಿವಾಸ ಗೌಡ ಅವರು ತನಗೆ ಟ್ರ್ಯಾಕ್ ನಲ್ಲಿ ಓಡಲು ಸಾಧ್ಯವಿಲ್ಲ, ನಾನೇನಿದ್ದರೂ ಕಂಬಳ ಗದ್ದೆಯಲ್ಲೇ ಕೋಣಗಳ ಜೊತೆ ಓಡುವವನು. ಹೀಗಾಗಿ ಮುಂದೆಯೂ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದು, ಕೇಂದ್ರ ಕ್ರೀಡಾ ಸಚಿವರ ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್ ಗಳ ಸಾಮರ್ಥ್ಯ ಪರೀಕ್ಷೆ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.
ಇಡೀ ದೇಶವನ್ನೇ ತನ್ನತ್ತ ತಿರುಗುವಂತೆ ಮಾಡಿರುವ ಕಂಬಳದ ಚಿರತೆ ಶ್ರೀನಿವಾಸ ಗೌಡ ಅವರು ಮತ್ತೆ ಇನ್ನೊಂದು ದಾಖಲೆ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಕೇವಲ 15 ದಿನಗಳ ಹಿಂದಿನ ತಮ್ಮ ದಾಖಲೆಯನ್ನು ಪುಡಿಗಟ್ಟಿ ಹೊಸ ದಾಖಲೆ ನಿರ್ಮಿಸಿ, ಕಂಬಳ ಕ್ರೀಡೆಯಲ್ಲಿ ನಾನೇ ಉಸೇನ್ ಬೋಲ್ಟ್ ಎನ್ನುವುದನ್ನು ಮತ್ತೆ ತೋರಿಸಿದ್ದಾರೆ. ಶ್ರೀನಿವಾಸ್ ಗೌಡ ಅವರ ಈ ರೀತಿಯ ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳೂ ಅವರ ಸಾಧನೆಯನ್ನು ಗುರುತಿಸಿದೆ.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿಬಂದಿ ವರ್ಗದವರ ಜಂಟಿ…
ನವೆಂಬರ್ 9 ಅಥವಾ 10 ರಿಂದ ದಕ್ಷಿಣ ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ…
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…