ತಿರುವನಂತಪುರ: ಆತಿಥೇಯ ಭಾರತ ವಿರುದ್ಧ ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ರವಿವಾರ ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದೆ.
ಗೆಲುವಿಗೆ 171 ರನ್‌ಗಳ ಸವಾಲನ್ನು ಪಡೆದ ವಿಂಡೀಸ್ ತಂಡ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ವಿಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ವೆಸ್ಟ್‌ಇಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮೊನ್ಸ್ ಔಟಾಗದೆ 67 ರನ್(45ಎ, 4ಬೌ,4ಸಿ), ಎವಿನ್ ಲೆವಿಸ್ 40 ರನ್(35ಎ, 3ಬೌ,3ಸಿ), ಶಿಮ್ರ್‌ನ್ ಹೆಟ್ಮಯೆರ್ 23 ರನ್ ಮತ್ತು ನಿಕೊಲಾಸ್ ಪೂರನ್ ಔಟಾಗದೆ 38 ರನ್(18ಎ, 4ಬೌ, 2ಸಿ) ತಂಡದ ಗೆಲುವಿಗೆ ನೆರವಾದರು.
ಭಾರತದ ಬೌಲರ್‌ಗಳ ದುರ್ಬಲ ದಾಳಿ ಮತ್ತು ಕಳಪೆ ಫೀಲ್ಡಿಂಗ್ ನ ಪ್ರಯೋಜನೆ ಪಡೆದ ವಿಂಡೀಸ್‌ನ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಗೆಲುವಿನ ದಡ ಸೇರಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿತ್ತು. ಭಾರತದ ಪರ ಶಿವಂ ದುಬೆ 30 ಎಸೆತದಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಹೀತ 54 ರನ್ ಗಳಿಸಿದರು. ಋಷಬ್ ಪಂತ್ 22 ಎಸೆತಗಳಲ್ಲಿ 33ರನ್ ಕಲೆ ಹಾಕಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…