ಕಾಂಗ್ರೆಸ್ ಪಕ್ಷ ಸಂಘಟನಾತ್ಮಕವಾಗಿ ಬೆಳೆಯಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಿಂದಲೇ ಸಿದ್ಧತೆ ನಡೆಯುತ್ತಿದೆ. ಸುಳ್ಯದಲ್ಲೂ ಈ ಸಂಘಟನೆ ಆರಂಭವಾಗಿದೆ. ಇದೀಗ ಡಿ ಕೆ ಶಿವಕುಮಾರ್ ಅವರ ನೇತೃತ್ವದ ಸಂಘಟನೆ ಸುಳ್ಯಕ್ಕೂ ತಲುಪಿದ್ದು, ಇಲ್ಲಿಯೂ ಸಿದ್ಧತೆ ನಡೆಯುತ್ತಿದೆ…. ಈ ಬಗ್ಗೆ ವಿಶೇಷ ವರದಿ…
Advertisement Advertisement Advertisement Advertisement
ಸುಳ್ಯ: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಜಲೈ ಎರಡರಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಲಿದ್ದಾರೆ. ಅದಕ್ಕಾಗಿನ ಸಿದ್ಧತೆ ಅತ್ತ ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಮೂಲೆ ಮೂಲೆಯಲ್ಲಿಯೂ ನಡೆಯುತಿದೆ.
ಡಿಕೆಶಿ ಅವರು ಅಧ್ಯಕ್ಷರಾಗಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ ಜೊತೆಗೆ ಸುಳ್ಯದಲ್ಲಿಯೂ ನಾಯಕರಲ್ಲಿ, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಸಂಘಟನಾತ್ಮಕ ಹಿನ್ನಡೆ, ಸತತ ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಸುಳ್ಯ ಕಾಂಗ್ರೆಸ್ ಗೆ ಡಿಕೆಶಿ ಅಧ್ಯಕ್ಷತೆ ಮತ್ತು ವ್ಯಕ್ತಿ ಪ್ರಭಾವ ಪಕ್ಷದ ಸಂಘಟನೆಗೆ ಸಹಾಯಕವಾಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಮುಖಂಡರೇ ಈ ರೀತಿಯ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಡಿಕೆಶಿಯ ನಾಯಕತ್ವ ಪ್ರಭಾವ, ಸಾಮುದಾಯಿಕ ಹಿನ್ನಲೆ ಸಂಘಟನಾತ್ಮಕವಾಗಿ ಪಾತಾಳಕ್ಕೆ ಕುಸಿದಿರುವ ಪಕ್ಷದ ಚೇತರಿಕೆಗೆ ಟಾನಿಕ್ ಆಗಬಹುದು ಎಂಬ ನಿರೀಕ್ಷೆ ಮುಖಂಡರದ್ದು. ಮುಂದಿನ ಚುನಾವಣೆಯಲ್ಲಿ ಒಂದಷ್ಟು ಸಮುದಾಯದ ಮತಗಳು, ಸ್ವಲ್ಪ ಪ್ರಮಾಣದ ಯುವ ಮತದಾರರನ್ನು ಸೆಳೆಯಲು ಪೂರಕ ಆಗಬಹುದು. ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಲು ಇದು ಸಹಾಯಕವಾಗಬಹುದು ಎಂಬ ಲೆಕ್ಕಾಚಾರ ನೇತೃತ್ವಕ್ಕಿದೆ. ಆದುದರಿಂದಲೇ ಸುಳ್ಯದ ಕಾಂಗ್ರೆಸ್ ಇದೀಗ ಮೈ ಕೊಡವಿ ಎದ್ದಿದೆ. ನಾಯಕರು, ಕಾರ್ಯಕರ್ತರು ತಿಂಗಳಿಂದ ಚಳಿ ಬಿಟ್ಟು ಓಡಾಟ ಶುರು ಮಾಡಿದ್ದಾರೆ. ಕೊರೋನಾ ಭಯದ ವಾತಾವರಣದ ಮಧ್ಯೆಯೂ ಡಿಕೆಶಿ ಪದಗ್ರಹಣದ ಯಶಸ್ವಿಗೆ ನಿರಂತರ ಕಾರ್ಯಪ್ರವೃತ್ತವಾಗಿದ್ದಾರೆ. ವರುಷಗಳಿಂದ ತಟಸ್ಥವಾಗಿದ್ದ ಸಂಘಟನಾ ಚಟುವಟಿಕೆಗೆ ಒಂದೂವರೆ ತಿಂಗಳಿನಿಂದ ವೇಗ ಸಿಕ್ಕಿದೆ. ನಾಯಕರು, ಕಾರ್ಯಕರ್ತರು ಕಾಲಿಗೆ ಚಕ್ರ ಕಟ್ಟಿದಂತೆ ಓಡಾಡುತ್ತಿದ್ದಾರೆ. ಮುಂದೆ ಬರುವ ಗ್ರಾಮ ಪಂಚಾಯತಿ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಪದಗ್ರಹಣ ಸಮಾರಂಭ ಒಂದು ತಾಲೀಮು ಎಂದೇ ಪರಿಗಣಿಸಲಾಗಿದೆ.
ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ…
ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ತನಕ ಎತ್ತಿನಹೊಳೆ ಕಾಮಗಾರಿ ಮುಂದುವರೆಸಲು ಕಷ್ಟಕರವಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ, ದೇಶದ ಎಲ್ಲ ಜಿಲ್ಲೆಗಳಲ್ಲಿ ವಿವಾಹಪೂರ್ವ ಆಪ್ತ ಸಮಾಲೋಚನೆ…
ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಷ್ಟೇ ಸಿಬಿಲ್ ಮಾಹಿತಿ ಕೇಳಲಾಗ್ತಿದೆ.ಆದರೆ ಶೀಘ್ರವಾಗಿ ಸಹಕಾರಿ ಕ್ಷೇತ್ರದಲ್ಲೂ ಸಿಬಿಲ್…
ಚಿನ್ನಾಭರಣಗಳ ಮೂಲಕ ಬೆಳ್ತಂಗಡಿಗೆ ಮೆರಗು ತಂದ ಸಂಸ್ಥೆ ಮುಳಿಯ. ವ್ಯವಹಾರದಲ್ಲಿ ಆತಿಥ್ಯವನ್ನು ಸದಾ…
ನಾವೂ ದೋಣಿಯಿಂದ ಕುಂಭಸ್ನಾನದ ಪುಣ್ಯ ಸ್ಥಳಕ್ಕೆ ಇಳಿದು, ಜಯಜಯ ಗಂಗೇ..............ಜಯಜಯ ಗಂಗೇ .........ಜೈ…