ಸುಳ್ಯ: ದೇಶದ ಆರ್ಥಿಕ ಕುಸಿತ, ಕಾಶ್ಮೀರ ವಿಚಾರ ಸೇರಿದಂತೆ ಕೇಂದ್ರ ಸರಕಾರದ ಹತ್ತು ಹಲವು ವೈಫಲ್ಯವನ್ನು ಮುಚ್ಚಿ ಹಾಕಲು ಮತ್ತು ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾರಿ ನಿರ್ದೇಶನಾಲಯ, ಸಿಬಿಐ ಮತ್ತಿತರ ಏಜೆನ್ಸಿಗಳನ್ನು ಬಳಸಿ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕರನ್ನು ಬಂಧಿಸುತಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.
ಕಾಂಗ್ರೆಸ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಮುಖಾಂತರ ಬಂಧಿಸಿರುವುದನ್ನು ವಿರೋಧಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸುಳ್ಯದ ಖಾಸಗಿ ಬಸ್ ನಿಲ್ದಾಣದ ವಠಾರದಲ್ಲಿ ನಡೆದ ಈ ಸಭೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಮಾಜಿ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಮಾಜಿ ನ.ಪಂ. ಸದಸ್ಯ ಕೆ.ಎಂ.ಮುಸ್ತಫಾ ಮಾತನಾಡಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಿ.ಕೆ. ಹಮೀದ್, ಕಾಂಗ್ರೆಸ್ ಮುಖಂಡರಾದ ಬೆಟ್ಟ ರಾಜಾರಾಮ ಭಟ್ ,ಸುದೀರ್ ರೈ ಮೇನಾಲ, ಚಂದ್ರಶೇಖರ ಕಾಮತ್, ಬಾಲಕೃಷ್ಣ ಭಟ್, ಸರಸ್ವತಿ ಕಾಮತ್, ರಾಜೀವಿ ಆರ್ ರೈ, ಡೇವಿಡ್ ಧೀರಾ ಕ್ರಾಸ್ತಾ, ಮಹಮ್ಮದ್ ಪವಾಝ್, ಕಳಂಜ ವಿಶ್ವನಾಥ ರೈ, ಪಿ.ಸಿ.ಜಯರಾಂ, ತೇಜಕುಮಾರ್ ಬಡ್ಡಡ್ಕ, ಬೀರಾಮೊಯಿದ್ದೀನ್, ಅಬ್ದುಲ್ ಗಫೂರ್, ಪಿ.ಎಸ್. ಗಂಗಾಧರ್, ಅಶೋಕ್ ನೆಕ್ರಾಜೆ, ಬೆಟ್ಟ ಜಯರಾಮ ಭಟ್, ಪಿ.ಎ.ಮಹಮ್ಮದ್, ಪರಶುರಾಮ ಚಿಲ್ತಡ್ಕ, ಎಂ.ಮಾಧವ ಗೌಡ, ನಂದರಾಜ್ ಸಂಕೇಶ, ಸತೀಶ್ ಕೂಜುಗೋಡು, ದಿನೇಶ್ ಸರಸ್ವತಿಮಹಲ್, ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ರಾಧಾಕೃಷ್ಣ ಪರಿವಾರಕಾನ, ಜಯಪ್ರಕಾಶ್ ನೆಕ್ರೆಪ್ಪಾಡಿ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಲೀಲಾಮನಮೋಹನ್, ತಿರುಮಲೇಶ್ವರಿ ಅಡ್ಕಾರ್, ರಫೀಕ್ ಪಡು, ಅನಿಲ್ ರೈ ಬೆಳ್ಳಾರೆ, ಶಶಿಕಲಾ ದೇರಪ್ಪಜ್ಜನಮನೆ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ. ಎಸ್.ಎನ್.ಬಾಪೂ ಸಾಹೇಬ್, ಓವಿನ್ ಪಿಂಟೊ, ಕೆ.ಕೆ. ಹರಿಪ್ರಸಾದ್, ಧರ್ಮಪಾಲ ಕೊಯಿಂಗಾಜೆ, ಚಂದ್ರಕಲಾ ಉಬರಡ್ಕ, ಶುಭಕರ ಉಬರಡ್ಕ, ಪರಮೇಶ್ವರ ಕೆಂಬಾರೆ, ಎಸ್.ಕೆ.ಹನೀಫ್, ಸುರೇಶ್ ಎಂ.ಎಚ್., ಶ್ರೀಲತಾ ಪ್ರಸನ್ನ ಮೊದಲಾದವರು ಭಾಗವಹಿಸಿದ್ದರು.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…