ಮಳೆಗಾಲ ಆರಂಭವಾಗಿದೆ. ಈಗ ಕೊರೊನಾ ವೈರಸ್ ನಡುವೆಯೇ ಡೆಂಗ್ಯೂ ಭೀತಿ ಹಲವು ಕಡೆ ಇದೆ. ಹೀಗಾಗಿ ಈಗ ಕೊರೊನಾ ಜೊತೆಗೆ ಡೆಂಗ್ಯೂ ತಡೆಯುವ ಅಬಿಯಾನವೂ ಜೊತೆ ಜೊತೆಗೇ ನಡೆಯಬೇಕಿದೆ. ಗ್ರಾಮದಿಂದ ತೊಡಗಿ ನಗರದವರೆಗೆ ಈಗ ಡೆಂಗ್ಯೂ ಜ್ವರದ ಬಗ್ಗೆ ಕಟ್ಟೆಚ್ಚರ ಬೇಕಿದೆ.
Advertisement Advertisement Advertisement
ಮಳೆಗಾಲದ ಆರಂಭದಲ್ಲಿ ಪ್ರತೀ ವರ್ಷವೂ ಡೆಂಗ್ಯೂ ಜ್ವರ ವಿಪರೀತವಾಗಿ ಬಾಧಿಸುತ್ತದೆ. ಕಳೆದ ಎರಡು ವರ್ಷಗಳಿಂದ ದ ಕ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿದೆ. ಕಳೆದ ವರ್ಷವಂತೂ ಇಡೀ ಜಿಲ್ಲೆಯೇ ಡೆಂಗ್ಯೂ ಜ್ವರದಿಂದ ತತ್ತರಿಸಿತ್ತು. ಹೀಗಾಗಿ ಈ ಬಾರಿ ಕಟ್ಟೆಚ್ಚರ ಬೇಕಿದೆ. ಜ್ವರದ ಲಕ್ಷಣಗಳು ಇದ್ದರೆ ತಕ್ಷಣವೇ ಸೂಕ್ತ ತಪಾಸಣೆ, ಚಿಕಿತ್ಸೆ ಅಗತ್ಯವಾಗಿದೆ. ಈಗಾಗಲೇ ಅಲ್ಲಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಕೂಡಾ ನಡೆಯುತ್ತಿದೆ.
ಆರೋಗ್ಯ ಇಲಾಖೆಗೆ ಈ ಬಾರಿ ಸವಾಲಿನ ಕೆಲಸ ಇದೆ. ಒಂದು ಕಡೆ ಕೊರೊನಾ ವೈರಸ್ , ಇನ್ನೊಂದು ಕಡೆ ಡೆಂಗ್ಯೂ ಹರಡುವ ಭೀತಿ. ಹೀಗಾಗಿ ಇಲಾಖೆಯ ಜೊತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಡೆಂಗ್ಯೂ ಹರಡದಂತೆ, ಬಾರದಂತೆ ಎಚ್ಚರಿಕೆ ವಹಿಸಬೇಕಿದೆ.
ಶಾಂತಿಗೋಡು ಪರಿಸರದ ವ್ಯಾಪ್ತಿಯಲ್ಲಿ ಕಲ್ಲುಕೋಟೆ ಮತ್ತು ಪಣಂಬು ಎಂಬಲ್ಲಿ ಸಂಶಯಾಸ್ಪದ ಡೆಂಗ್ಯೂ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇವರೊಂದಿಗೆ ತಾಲೂಕು ನೋಡಲ್ ಅಧಿಕಾರಿ ಡಾ. ಬದ್ರುದಿನ್ ಎಂ. ಎನ್, ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ ನಾಯಕ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆ ತಾಲೂಕು ಆಶಾ ಮೇಲ್ವಿಚಾರಕಿ ಸುಜಾತ ಇವರನ್ನೊಳಗೊಂಡ ತಂಡ ಭೇಟಿ ನೀಡಿ, ಡೆಂಗ್ಯೂ ಖಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಲಾರ್ವಾ ಪ್ರಾತ್ಯಕ್ಷಿಕೆಯನ್ನು ಡೆಂಗ್ಯೂ ಭಾದಿತ ಮನೆಗಳ ಸದಸ್ಯರಿಗೆ ತೋರಿಸಿ ಅರಿವು ಮೂಡಿಸಲಾಯಿತು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.