ಗುತ್ತಿಗಾರು: ಗುತ್ತಿಗಾರು ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಘೆ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಪ್ರಾ.ಆ.ಕೇಂದ್ರದಲ್ಲಿ 24/7ರ ನಿರಂತರ ಸೇವೆ ನೀಡುವಂತೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲು ಗುತ್ತಿಗಾರು ಗ್ರಾಮ ಪಂಚಾಯತ್ ನ ಗ್ರಾಮ ಸಭೆಯಲ್ಲಿ ನಿರ್ಧರಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ರಾತ್ರಿವೇಳೆ ಹತ್ತಿರದಲ್ಲಿ ಆಸ್ಪತ್ರೆಗಳು ಇಲ್ಲದಿರುವುದರಿಂದ ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲು ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರು ಅಧ್ಯಕ್ಷತೆಯಲ್ಲಿ ನಡೆದ 2019-20ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲೆಹೊರೆ ಸಾಮಗ್ರಿಗಳನ್ನು ಹೊತ್ತು ಬರುವ ವ್ಯಾಪಾರಿಗಳು ಕಡ್ಡಾಯವಾಗಿ ಪಂಚಾಯತ್ ಅನುಮತಿ ಪಡೆದುಕೊಳ್ಳುವಂತೆ ಗುತ್ತಿಗಾರು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಂಜದಲ್ಲಿ ಕಾರ್ಯಾಚರಿಸುತ್ತಿರುವ ನಾಡೆಕಚೇರಿಯನ್ನು ಗುತ್ತಿಗಾರಿಗೆ ವರ್ಗಾಯಿಸಲು ಕಂದಾಯ ಇಲಾಖೆಗೆ ಸೂಚಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕಲ್ಮಕಾರು, ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ ಸೇರಿದಂತೆ ಪಂಜ ಹೋಬಳಿಯ ಗ್ರಾಮಗಳಿಗೆ ಗುತ್ತಿಗಾರು ಅತ್ಯಂತ ಹತ್ತಿರದ ವ್ಯಾವಹಾರಿಕ ಕೇಂದ್ರವಾಗಿರುವುದರಿಂದ ಪಂಜ ನಾಡಕಚೇರಿಯನ್ನು ಗುತ್ತಿಗಾರಿಗೆ ವರ್ಗಾಯಿಸಬೇಕು. ಪಂಜ ಕಡಬ ತಾಲೂಕು ವ್ಯಾಪ್ತಿಗೆ ಬರುವುದರಿಂದ ಈ ನಿರ್ಧಾರ ಅವಶ್ಯಕ ಎಂದು ಸಭೆಯಲ್ಲಿ ಅಧ್ಯಕ್ಷ ಅಚ್ಯುತ ಗುತ್ತಿಗಾರು ಹೇಳಿದರು.
ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ ಸಭೆಯ ಉಸ್ತುವಾರಿ ವಹಿಸಿದ್ದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಸದಸ್ಯರಾದ ವೆಂಕಟ್ ವಳಲಂಬೆ, ರಾಕೇಶ್ ಮೆಟ್ಟಿನಡ್ಕ, ವಿಜಯಕುಮಾರ್ ಚಾರ್ಮತ, ಮಿತ್ರಕುಮಾರಿ, ಶ್ರೀದೇವಿ, ಅಮ್ಮಣಿ, ರತ್ನಾವತಿ, ರಘುವೀರ, ಜಯಪ್ರಕಾಶ್, ಯಮಿತಾ, ಶಶಿಕಲಾ, ಜಿ.ಪಂ ಇಂಜಿನಿಯರ್ ಮಣಿಕಂಠನ್, ವೈದ್ಯಾಧಿಕಾರಿ ಚೈತ್ರಾಭಾನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವಿಜಯ, ಉದ್ಯೋಗ ಖಾತರಿ ಇಂಜಿನಿಯರ್ ಪ್ರಜ್ವಲ್, ಕಂದಾಯ ಇಲಾಖೆಯ ಭಾರತಿ, ಸಿದ್ದಪ್ಪ, ಅರಣ್ಯ ಇಲಾಖೆಯ ಮನೋಜ್ ಸೇರಿದಂತೆ ವಿವಿಧ ಇಲಾಖಾ ಪ್ರತಿನಿಧಿಗಳು, ಗ್ರಾಮಸ್ಥರು ಹಾಜರಿದ್ದರು.
ಪಂ.ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಎಂ.ಆರ್ ಸ್ವಾಗತಿಸಿ ವಂದಿಸಿದರು.
ಸೆ.28ರಿಂದ 30ರವರೆಗೆ ನಡೆಯಬೇಕಿದ್ದ ರಾಷ್ಟ್ರವ್ಯಾಪಿ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ಕೊನೆ ಕ್ಷಣದಲ್ಲಿ…
‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…
ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…
ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…
ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…