ಸೆಪ್ಟೆಂಬರ್ 28ರಿಂದ 30 ರವರೆಗೆ ದೇಶಾದ್ಯಂತ ನಡೆಯಬೇಕಿದ್ದ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ. ಹೀಗಾಗಿ ಇಂದು ಸೆಪ್ಟೆಂಬರ್ 28ರಂದು ದೇಶಾದ್ಯಂತ ಬ್ಯಾಂಕ್ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಸಾಮಾನ್ಯ ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ.
ವಾರದ ಎಲ್ಲಾ ಶನಿವಾರಗಳನ್ನು ಬ್ಯಾಂಕ್‌ಗಳಿಗೆ ರಜೆಯನ್ನಾಗಿ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ವತಿಯಿಂದ ಸೆ.28ರಿಂದ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಆದರೆ ಭಾನುವಾರ ತಡರಾತ್ರಿ ಭಾರತೀಯ ಬ್ಯಾಂಕುಗಳ ಸಂಘ ಮತ್ತು ಬ್ಯಾಂಕ್ ಒಕ್ಕೂಟಗಳ ನಡುವೆ ನಡೆದ ಸಭೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಾರದ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದೂಡಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ.
ಈ ಸಮಿತಿಯು ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಪರ್ಯಾಯಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಚರ್ಚೆ ನಡೆಸಲಿದೆ. ಗ್ರಾಹಕರಿಗೂ ಸ್ವೀಕಾರಾರ್ಹವಾದ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಇದರೊಂದಿಗೆ ಸ್ಕೇಲ್-4 ಹಾಗೂ ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಸಂಬಂಧಿಸಿದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಯೋಜನೆ ಬದಲಾವಣೆ ಸೇರಿದಂತೆ ಇತರ ವಿಚಾರಗಳ ಕುರಿತೂ ಮಾತುಕತೆ ಮುಂದುವರಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ.
ಗ್ರಾಹಕರಿಗೆ ದೊಡ್ಡ ರಿಲೀಫ್ : ಮುಷ್ಕರ ಮುಂದೂಡಿಕೆಯಿಂದ ಇಂದು ಬ್ಯಾಂಕ್ ಶಾಖೆಗಳಲ್ಲಿ ಚೆಕ್ ಕ್ಲಿಯರೆನ್ಸ್, ನಗದು ವಹಿವಾಟು, ಠೇವಣಿ ಸೇರಿದಂತೆ ಸಾಮಾನ್ಯ ಭೌತಿಕ ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ. ಮುಷ್ಕರದಿಂದಾಗಿ ಬ್ಯಾಂಕ್ ಸೇವೆ ಸ್ಥಗಿತವಾಗಲಿದೆ ಎಂಬ ಆತಂಕದಲ್ಲಿದ್ದ ಗ್ರಾಹಕರಿಗೆ ಈ ಬೆಳವಣಿಗೆ ನಿರಾಳತೆ ತಂದಿದೆ.
ಹಿನ್ನೆಲೆ ಏನಿತ್ತು? : ಸೆ.28ರಿಂದ 30ರವರೆಗೆ ಮುಷ್ಕರ ನಡೆದಿದ್ದರೆ, ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸತತ ಹಲವು ದಿನಗಳ ವ್ಯತ್ಯಯ ಉಂಟಾಗುವ ಸಾಧ್ಯತೆ ಇತ್ತು. ಈ ಕಾರಣದಿಂದಲೇ ಸೆ.27ರ ಭಾನುವಾರವೂ ಸಾರ್ವಜನಿಕ ಮತ್ತು ಗ್ರಾಮೀಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಈಗ ಮುಷ್ಕರ ಮುಂದೂಡಿಕೆಯಾಗಿರುವುದರಿಂದ ಗ್ರಾಹಕರು ಇಂದು ಸಾಮಾನ್ಯವಾಗಿ ಬ್ಯಾಂಕ್ ಶಾಖೆಗಳಿಗೆ ತೆರಳಿ ತಮ್ಮ ಅಗತ್ಯ ಬ್ಯಾಂಕಿಂಗ್ ಕೆಲಸಗಳನ್ನು ಮಾಡಿಕೊಳ್ಳಬಹುದು.
ಮುಷ್ಕರದ ಕಾರಣಗಳು ಏನಿತ್ತು..? : ಭಾರತದಲ್ಲಿ ಬ್ಯಾಂಕ್ ನೌಕರರ ಒಕ್ಕೂಟಗಳು (ಮುಖ್ಯವಾಗಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ – UFBU) ಮುಷ್ಕರಕ್ಕೆ ಹೇಳಿದ ಪ್ರಮುಖ ಕಾರಣಗಳು ಮತ್ತು ಬೇಡಿಕೆಗಳು ಹೀಗಿತ್ತು…
ಸೆಪ್ಟೆಂಬರ್ 27 ರ ರಾತ್ರಿ ನಡೆದ ಮಾತುಕತೆಯಲ್ಲಿ 5 ದಿನಗಳ ಬ್ಯಾಂಕಿಂಗ್ ಸೇರಿದಂತೆ ಬಾಕಿ ಬೇಡಿಕೆಗಳ ಕುರಿತು ಉನ್ನತ ಮಟ್ಟದ ಸಮಿತಿ ಮೂಲಕ ಚರ್ಚೆ ಮುಂದುವರಿಸಲು ಒಪ್ಪಂದ ರೂಪುಗೊಂಡ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದೂಡಲಾಗಿದೆ
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
The three-day nationwide bank strike scheduled from September 28 to 30 has been deferred at the last minute following talks between the Indian Banks’ Association and bank unions. The decision came after agreement to form a high-level committee to examine the long-standing demand for a five-day banking week, allowing bank branches to function normally on September 28.
‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…
ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…
ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…
ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…
ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…