Advertisement
ವೆದರ್ ಮಿರರ್

ಹವಾಮಾನ ವರದಿ | 28-11-2026 | ಡಿಸೆಂಬರ್ ಮೊದಲ ವಾರ ಮೋಡದ ವಾತಾವರಣ ಹೆಚ್ಚಳದ ಸಾಧ್ಯತೆ

Share

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದ ಮಳೆಯ ವಾತಾವರಣ ಇದೀಗ ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ನವೆಂಬರ್ 29ರ ಬೆಳಿಗ್ಗೆ 8 ಗಂಟೆಯವರೆಗಿನ ಮುನ್ಸೂಚನೆಯ ಪ್ರಕಾರ, ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಮಳೆಯ ಸಾಧ್ಯತೆ ಕಡಿಮೆ ಇದೆ.

ಆದರೆ ಡಿಸೆಂಬರ್ ಮೊದಲ ವಾರದಲ್ಲಿ ಗಾಳಿಯ ದಿಕ್ಕಿನಲ್ಲಿ ಬದಲಾವಣೆಯಾಗುವ ಲಕ್ಷಣಗಳಿರುವುದರಿಂದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡದ ಪ್ರಮಾಣ ಹೆಚ್ಚಾಗಬಹುದು.

ಕರಾವಳಿ: ಮಳೆ ಕಡಿಮೆ; ಬಿಸಿಲು ಮುಂದುವರಿಕೆ : ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣ ಇರಲಿದೆ. ಕಾಸರಗೋಡು ಮತ್ತು ದಕ್ಷಿಣ ಕನ್ನಡದ ಗಡಿ ಭಾಗಗಳ ಒಂದೆರಡು ಕಡೆ ರಾತ್ರಿ ಅಥವಾ ತಡರಾತ್ರಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.

ಪ್ರಸ್ತುತ ಮುನ್ಸೂಚನೆಯಂತೆ ನವೆಂಬರ್ 29ರಿಂದ ಕರಾವಳಿಯಲ್ಲಿ ಮಳೆ ಕಡಿಮೆಯಾಗಲಿದ್ದು, ಬಿಸಿಲು ಹಾಗೂ ಅಲ್ಲಲ್ಲಿ ಸಣ್ಣ ಮೋಡದ ವಾತಾವರಣ ಮುಂದುವರಿಯಬಹುದು. ಡಿಸೆಂಬರ್ 2 ಮತ್ತು 3ರಂದು ಮೋಡದ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆ.

ಮಲೆನಾಡು: ಬಹುತೇಕ ಕಡೆ ಬಿಸಿಲು : ಕೊಡಗು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಒಂದೆರಡು ಕಡೆ ಸಂಜೆ ಅಥವಾ ರಾತ್ರಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.

ನವೆಂಬರ್ 29ರಿಂದ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲು ಮುಂದುವರಿಯುವ ಲಕ್ಷಣಗಳಿವೆ. ಡಿಸೆಂಬರ್ 2 ಮತ್ತು 3ರಂದು ಮೋಡದ ಪ್ರಮಾಣ ಸ್ವಲ್ಪ ಹೆಚ್ಚಾಗಬಹುದು.

ಉತ್ತರ ಒಳನಾಡು: ಮುಂದಿನ 10 ದಿನ ಮಳೆಯ ಸಾಧ್ಯತೆ ಕಡಿಮೆ : ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಮುನ್ಸೂಚನೆ ಇದೆ. ಮುಂದಿನ 10 ದಿನಗಳವರೆಗೆ ಈ ಭಾಗದಲ್ಲಿ ಮಳೆಯ ಸಾಧ್ಯತೆಗಳು ಕಡಿಮೆಯಾಗಿವೆ.

ದಕ್ಷಿಣ ಒಳನಾಡು: ಡಿಸೆಂಬರ್ 1ರಿಂದ ಮೋಡ ಹೆಚ್ಚಳ : ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯಲಿದೆ. ಡಿಸೆಂಬರ್ 1ರಿಂದ ಮೋಡದ ಪ್ರಮಾಣ ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಸದ್ಯಕ್ಕೆ ಮಳೆಯ ಸ್ಪಷ್ಟ ಲಕ್ಷಣಗಳಿಲ್ಲ. ಮುಂದಿನ ಹವಾಮಾನ ಬೆಳವಣಿಗೆಗಳನ್ನು ಗಮನಿಸಬೇಕಾಗಿದೆ.

ಗಾಳಿಯ ದಿಕ್ಕಿನ ಬದಲಾವಣೆ; ಮೋಡದ ವಾತಾವರಣ ಸಾಧ್ಯತೆ : ಬಂಗಾಳಕೊಲ್ಲಿಯ ಕಡೆಯಿಂದ ಬೀಸುವ ಗಾಳಿಯು ನೇರವಾಗಿ ದಕ್ಷಿಣದತ್ತ ಚಲಿಸುತ್ತಿರುವುದರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈಗ ಉತ್ತರ ಭಾರತದ ಕಡೆಯಿಂದ ದಕ್ಷಿಣ ಭಾರತದತ್ತ ಗಾಳಿ ಬೀಸುತ್ತಿದೆ.

ಆದರೆ ಡಿಸೆಂಬರ್ 1ರಿಂದ ಗಾಳಿಯ ದಿಕ್ಕಿನಲ್ಲಿ ಮತ್ತೆ ಬದಲಾವಣೆಯಾಗುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯ ಕಡೆಯಿಂದ ಅರಬ್ಬಿ ಸಮುದ್ರದ ಕಡೆಗೆ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮೋಡದ ವಾತಾವರಣ ಹೆಚ್ಚಾಗಬಹುದು.  ಸದ್ಯಕ್ಕೆ ಮಳೆಯ ನಿರೀಕ್ಷೆಯಿಲ್ಲದಿದ್ದರೂ ಗಾಳಿಯ ದಿಕ್ಕಿನ ಬದಲಾವಣೆಯ ಪರಿಣಾಮವನ್ನು ಕಾದು ನೋಡಬೇಕಾಗಿದೆ.

ರೈತರು ಗಮನಿಸಬೇಕಾದ ಅಂಶ :  ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ರೈತರು ಕೃಷಿ ಕಾರ್ಯಗಳನ್ನು ಮುಂದುವರಿಸಬಹುದು. ಆದರೆ ಡಿಸೆಂಬರ್ ಮೊದಲ ವಾರದಲ್ಲಿ ಮೋಡದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳ ಸ್ಥಳೀಯ ಹವಾಮಾನ ಮುನ್ಸೂಚನೆಯನ್ನು ಗಮನಿಸುವುದು ಸೂಕ್ತ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ರಬ್ಬರ್ ಧಾರಣೆಯಲ್ಲಿ ಮತ್ತೆ ಚೇತರಿಕೆ – ₹260 ರಿಂದ ₹266ಕ್ಕೆ ಏರಿಕೆ

ನವೆಂಬರ್ ಮೊದಲ ವಾರದಲ್ಲಿ ₹300ರ ಗರಿಷ್ಠ ಮಟ್ಟ ತಲುಪಿದ್ದ ರಬ್ಬರ್ ಧಾರಣೆ ಮೂರು…

3 hours ago

ಮಕ್ಕಳ ಭವಿಷ್ಯಕ್ಕೆ ಮೊದಲ ಆದ್ಯತೆ – ಪರೀಕ್ಷೆ ವೇಳೆ ಶಿಕ್ಷಕರಿಗೆ ಹೆಚ್ಚುವರಿ ಕರ್ತವ್ಯದ ಹೊರೆ ಇಲ್ಲ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಅವಧಿಯಲ್ಲಿ ಹೈಸ್ಕೂಲ್ ಶಿಕ್ಷಕರನ್ನು ಜನಗಣತಿ ಸೇರಿದಂತೆ ಇತರ ಕರ್ತವ್ಯಗಳಿಗೆ ನಿಯೋಜಿಸುವುದಿಲ್ಲ…

3 hours ago

ಮಳೆನೀರು ವ್ಯರ್ಥವಾಗದಂತೆ ತಡೆಯಲು ₹200 ಕೋಟಿ – ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿಗೆ ಸಿದ್ಧತೆ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಿರಪುರ ಮಾದರಿಯಲ್ಲಿ 200 ಕೋಟಿ ರೂಪಾಯಿ ವೆಚ್ಚದ…

4 hours ago

ಹವಾಮಾನ ವರದಿ | 27-11-2026 | ನ.29ರಿಂದ ಉತ್ತರ ಒಳನಾಡಿನಲ್ಲಿ ಒಣ ಹವೆ ಸಾಧ್ಯತೆ ? ಮುಂದಿನ ಹವಾಮಾನ ಬೆಳವಣಿಗೆ ಏನು?

ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ನವೆಂಬರ್ 28ರಂದು…

1 day ago

ಅಡಿಕೆ ಕಳ್ಳಸಾಗಣೆ – ಈಶಾನ್ಯ ಭಾರತದ ರಾಷ್ಟ್ರೀಯ ಭದ್ರತೆಗೂ ಸವಾಲು – ದೇಶದ ಅಡಿಕೆ ಬೆಳೆಗಾರರ ಹಿತಾಸಕ್ತಿಗೂ ಆತಂಕ

ಈಶಾನ್ಯ ಭಾರತದಲ್ಲಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮಾರ್ಗವಾಗಿ ಅಡಿಕೆ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ…

1 day ago

ಹವಾಮಾನ ವರದಿ | 26-11-2026 | ಡಿಸೆಂಬರ್ ಮೊದಲ ವಾರದಲ್ಲಿ ಮತ್ತೆ ಮಳೆಯ ಸಾಧ್ಯತೆ?

ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 27ರಂದು…

2 days ago