ಡೆಂಘೆ…! ಹೆಸರು ಕೇಳಿದಾಗಲೇ ದಂಗಾಗುವ ಮಂದಿ ಹಲವಾರು.
ಹಾಗಿದ್ದರೆ ಏನಿದು ಡೆಂಘೆ ಜ್ವರ ?. ಸರಳವಾಗಿ ಹೇಳುವುದಾದರೆ ಇಂದೊಂದು ಸೋಂಕು ರೋಗ . ಈಡೀಸ್ ಎಂಬ ಸೋಂಕು ಪೀಡಿತ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಇದು ಹರಡುತ್ತದೆ . ಈ ಸೊಳ್ಳೆಯ ಜೀವಾವಧಿ 2 ವಾರ ಮಾತ್ರ . ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ನೀರಿನಲ್ಲಿ ಕೊಳಚೆ ಅಥವಾ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ .
ಹೇಗೆ ಹರಡುವುದು?: ಇದು ಈ ರೋಗ ಸೋಂಕಿತ ವ್ಯಕ್ತಿಯ ರಕ್ತವನ್ನು ಆಹಾರಕ್ಕಾಗಿ ಕಚ್ಚಿದಾಗ ತನಗೆ ಹರಡುತ್ತದೆ ಇದು ಯಾರಿಗೆಲ್ಲ ಕಚ್ಚುತ್ತದೋ ಅವರಿಗೆಲ್ಲ ಈ ರೋಗ ಹರಡುತ್ತದೆ.
ಇದನ್ನ ತಡೆಯೋದು ಹೇಗೆ ಎಂಬ ಪ್ರಶ್ನೆಗೆ, ಸೊಳ್ಳೆ ಕಚ್ಚದಂತೆ ತಡೆಯುವುದೇ ತಡೆಯುವ ಮೊದಲ ಸೂತ್ರ. ಇದಕ್ಕಾಗಿ ಪೂರ್ತಿ ತೋಳಿರುವ ಉಡುಪು ಧರಿಸುವುದು
ಸೊಳ್ಳೆ ಪರದೆ, ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು , ಸೊಳ್ಳೆ ಬತ್ತಿಯ ಬಳಕೆ ಇತ್ಯಾದಿಗಳೇ ಮೊದಲ ರಕ್ಷಣೆ.
ಡೆಂಘೆ ಲಕ್ಷಣಗಳು ಏನು ?
2-7 ದಿನಗಳು ಜ್ವರ , ತಲೆನೋವು , ಕಣ್ಣು ಗುಡ್ಡೆ ನೋವು, ಮೈಕೈ ನೋವು, ಕೆಂಪಾದ ಚರ್ಮ , ಸುಸ್ತಾಗುವುದು ಮೊದಲ ಲಕ್ಷಣ.
ಡೆಂಘೆ ಕಂಡುಬಂದಲ್ಲಿ ಏನು ಮಾಡಬೇಕು?:
ಮೊದಲ ಸೂತ್ರ ವಿಶ್ರಾಂತಿ. ವೈದ್ಯರ ಸಲಹೆ ಅಥವಾ ಭೇಟಿಯಾಗುವುದು.
ಚಿಕಿತ್ಸೆ ಬಳಿಕ ನಾವು ಏನೆಲ್ಲಾ ಮಾಡಬಹುದು ?:
1.ಪಪ್ಪಾಯಿ ಎಲೆ ಮದ್ದು : ಪಪ್ಪಾಯಿ ಎಲೆ ತೊಳೆದು ಅದರ ಸ್ವಲ್ಪ ರಸವನ್ನು ಹಿಂಡಿ ಅರ್ಧ ಗ್ಲಾಸ್ ನೀರಿನೊಡನೆ ಸೇರಿಸಿ ಕುಡಿಯಿರಿ ಇದು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಪ್ಲೇಟ್ಲೆಟ್ ಅಂಶವನ್ನು ಹೆಚ್ಚು ಮಾಡುತ್ತದೆ ( ಮಿತಿಗಿಂತ ಜಾಸ್ತಿ ಪಪ್ಪಾಯಿ ಎಲೆಯ ರಸ ಕುಡಿಯಬಾರದು)
2 ಅರಸಿನ, ಕಾಳುಮೆಣಸು ಗಳನ್ನು ಬಿಸಿ ಹಾಲಿಗೆ ಇದನ್ನು ಮಿಶ್ರಮಾಡಿ ಕುಡಿಯುವುದು . ಅರಸಿನ- ಬೆಲ್ಲ ತಿಂದರೂ ಉತ್ತಮ
3.ತುಳಸಿ-ಕಾಳುಮೆಣಸು (ತುಳಸಿ-ಕಾಳುಮೆಣಸು ನೀರಲ್ಲಿ ಬೆರೆಸಿ ಕುಡಿಯುವುದು)
4.ದಾಳಿಂಬೆ-ಪಪ್ಪಾಯಿ ತಿನ್ನುವುದು
5.ಬೀಟ್ರೋಟ್- ನಿಂಬೆ ರಸ
ಈ ಸೂತ್ರಗಳು ಮೈ ಕೈ ನೋವನ್ನು ದೂರಗೊಳಿಸುತ್ತದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…