ಸುಳ್ಯ: ನಿಜವಾದ ಮಳೆಗಾಲ ಇಂದಿನಿಂದ ಶುರುವಾಗುತ್ತದೆ..!. ಹೀಗೆ ಹೇಳಿದಾಗಲೇ ಅನೇಕರು ಈ ಬಾರಿ ಸಂಶಯ ಪಡುತ್ತಾರೆ. ಈ ವರ್ಷ ಮಳೆಗಾಲದ, ಹವಾಮಾನದ ಎಲ್ಲಾ ನಿರೀಕ್ಷೆಗಳೂ ಶೇ.100 ಸರಿಯಾಗಿಲ್ಲ. ಕಾರಣ ಹವಾಮಾನದಲ್ಲಿನ ದಿಢೀರ್ ಏರುಪೇರು.
ಹವಾಮಾನದ ಬದಲಾವಣೆಯ ವೀಕ್ಷಣೆ, ಮಳೆ ಲೆಕ್ಕ, ವಾತಾವರಣ ಬದಲಾವಣೆಯ ವೀಕ್ಷಣೆ ಬಹಳ ಕುತೂಹಲವಾಗಿರುತ್ತದೆ. ಮಳೆಗಾಲವು ನಿರೀಕ್ಷೆಯಂತೆ ಜೂ.7 ರಂದು ಕೇರಳ ತಲಪಿ ಕರಾವಳಿ ಮೂಲಕ ಜೂ.10 ಕ್ಕೆ ರಾಜ್ಯಕ್ಕೆ ಪ್ರವೇಶ ಮಾಡಬೇಕಾಗಿತ್ತು. ಆದರೆ ತೀರಾ ವಿಳಂಬವಾಗಿಯೂ ಸರಿಯಾಗಿ ಮಳೆಗಾಲ ಆರಂಭವಾಗಿಲ್ಲ. ಕಾರಣ ನೈರುತ್ಯ ಮುಂಗಾರು ಆರಂಭವಾದ ಹೊತ್ತಿನಲ್ಲೇ ವಾಯು ಚಂಡಮಾರುತ ಆರಂಭವಾಯಿತು. ಮುಂಗಾರು ಬಲಕಳೆದುಕೊಂಡಿತು.
ಇದೀಗ ಮಳೆಗಾಲ ತನ್ನ ಮೂಲಸ್ವರೂಪ ಪಡೆದುಕೊಂಡಿದೆ. ಒಂದೆರಡು ಮಳೆ ಜೋರಾಗುತ್ತದೆ. ಮಂಗಳೂರು ಕಾಸರಗೋಡು ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ.
ನಾಳೆಯಿಂದ 24 ರವರೆಗೆ ಮಡಿಕೇರಿ ಹಾಗೂ ಆಗುಂಬೆ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಇಡೀ ದ. ಕ. ಹಾಗೂ ಉಡುಪಿ ಭಾಗಗಳಲ್ಲೂ ಹೆಚ್ಚಿನ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಚಿತ್ರ ಸೂಚಿಸುತ್ತದೆ.
Advertisementಈ ಬಾರಿ ಮಳೆಯ ಮುನ್ಸೂಚನೆ ಆಗಾಗ ತಪ್ಪಾಗಿದೆ. ಇದುವರೆಗೆ ಹೀಗೆ ಆಗುತ್ತಿರಲಿಲ್ಲ. ಹವಾಮಾನ ಇಲಾಖೆಯ ಉಪಗ್ರಹ ಆಧಾರಿತ ಚಿತ್ರ ಬಹುತೇಕ ಸರಿಯಾಗಿರುತ್ತಿತ್ತು ಎಂದು ಹೇಳುತ್ತಾರೆ ಸಾಯಿಶೇಖರ್ ಕರಿಕಳ. ಇದೀಗ ಮಳೆಗಾಲ ಇಂದಿನಿಂದ ಶುರುವಾಗುತ್ತದೆ ಎಂದು ಉಪಗ್ರಹ ಚಿತ್ರ ಹೇಳುತ್ತದೆ ಎಂದು ಅವರು ಹೇಳುತ್ತಾರೆ.
ಇನ್ನೊಂದು ಶಾಕಿಂಗ್ ಅಂಶವೆಂದರೆ 1972 ರ ನಂತರ ಅತ್ಯಂತ ವಿಳಂಬವಾಗಿ ಮಳೆ ಬಂದ ವರ್ಷ 2019..!. ಈ ದಾಖಲೆಯನ್ನು ಬಾಳಿಲದ ಪಿಜಿಎಸ್ ಎನ್ ಪ್ರಸಾದ್ ಹೇಳುತ್ತಾರೆ. ಅವರೇ ಹೇಳುವ ಹಾಗೆ,
Advertisement
ನನ್ನ ತಂದೆಯವರ ಡೈರಿಯಲ್ಲಿ ಕಂಡುಬಂದಂತೆ 1972 ರ ಬಳಿಕ (1972 ಜೂನ್ 20) ನಮ್ಮಲ್ಲಿ ಅತ್ಯಂತ ತಡವಾಗಿ (19/06/2019) ಮುಂಗಾರು ಮಳೆ ಆರಂಭವಾದ ವರ್ಷವಿದು. ಅಂದು ಜೂನ್ 20… ಈ ಬಾರಿ 19 ಜೂನ್…!. ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು ಎಂದು ಪ್ರಸಾದ್ ಹೇಳುತ್ತಾರೆ.
Advertisement
ಪ್ರಸಾದ್ ಅವರ ಮಳೆ ಲೆಕ್ಕದ ಪ್ರಕಾರ
ವಾಡಿಕೆಗಿಂತ ( ಜೂನ್ 6 ) ತಡವಾಗಿ ಮಳೆಗಾಲ ಆರಂಭವಾದ ವರ್ಷಗಳು… ಹಾಗೂ ಆಯಾ ವರ್ಷ ವಾರ್ಷಿಕವಾಗಿ ಸುರಿದ ಒಟ್ಟು ಮಳೆ ಹೀಗಿದೆ
15/06/1979…. …3579 ಮಿ.ಮೀ
16/06/1983……..5119 ಮಿ.ಮೀ
11/06/1995……..4037 ಮಿ.ಮೀ
10/06/1996……..4562 ಮಿ.ಮೀ
12/06/1997……..4769 ಮಿ.ಮೀ
08/06/1998……..5443 ಮಿ.ಮೀ
10/06/2003……..4046 ಮಿ.ಮೀ
08/06/2005……..4253 ಮಿ.ಮೀ
12/06/2007……..4868 ಮಿ.ಮೀ
08/06/2012……..4314 ಮಿ.ಮೀ
09/06/2014……. 4450 ಮಿ.ಮೀ.
19/06/2019……..????
ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು. ಹವಾಮಾನ ಇಲಾಖೆಯನ್ನೇ ಗೊಂದಲಕ್ಕೀಡು ಮಾಡಿದ ನೈರುತ್ಯ ಮುಂಗಾರು ಮಾರುತ ಈಗ ಸ್ವಲ್ಪ ಮಟ್ಟಿನ ವೇಗ ಪಡಕೊಂಡಂತಿದೆ. ಮುಂದಿನ ಬೆಳವಣಿಗೆ ಏನು ಗೊತ್ತಿಲ್ಲ…!
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…