ಆಂಧ್ರಪ್ರದೇಶ : ದೇಶದ ಪ್ರಸಿದ್ಧ ದೇವಸ್ಥಾನ ತಿರುಪತಿ ದೇವಾಲಯದ 15 ಅರ್ಚಕರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ರಮಣ ದೀಕ್ಷಿತುಲು ಟ್ವೀಟ್ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದೆ. ಇದೀಗ ತಿರುಪತಿ ದೇವಾಲಯದ 50 ಮಂದಿ ಅರ್ಚಕರ ಪೈಕಿ 15 ಅರ್ಚಕರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ರಮಣ ದೀಕ್ಷಿತುಲು ಟ್ವೀಟ್ ಮಾಡಿ, 50 ಅರ್ಚಕರ ಪೈಕಿ 15 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕ್ವಾರಂಟೈನ್ ಆಗಿದ್ದಾರೆ. ಟಿಟಿಡಿಯ ಅಧಿಕಾರಿಗಳು ದರ್ಶನವನ್ನು ನಿಲ್ಲಿಸಲು ನಿರಾಕರಿಸಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
50 ಮಂದಿ ಅರ್ಚಕರ ಪೈಕಿ 15 ಅರ್ಚಕರಿಗೆ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲಾ ಅರ್ಚಕರೂ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ. 25 ಅರ್ಚಕರ ವರದಿಗಾಗಿ ಕಾಯಲಾಗುತ್ತಿದೆ. ಇದುವರೆಗೆ ದೇವಸ್ಥಾನದ 91 ಸಿಬ್ಬಂದಿಗಳಿಗೆ ಕೊರೋನಾ ವೈರಸ್ ತಗುಲಿದೆ. ಇದೀಗ ದೇವಸ್ಥಾನ ಬಂದ್ ಮಾಡುವ ಚಿಂತನೆ ನಡೆಯುತ್ತಿದೆ. ಲಾಕ್ಡೌನ್ ನಂತರ ಜೂನ್ 11ರಿಂದ ತಿರುಪತಿ ದೇವರ ದರ್ಶನ ಆರಂಭವಾಗಿತ್ತು. ಈಗ ಪ್ರತಿದಿನ 12 ಸಾವಿರ ಜನರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಭಕ್ತರು ಬರುತ್ತಲೇ ಇದ್ದಾರೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel