ಸುಳ್ಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ವಿಷ್ಣುಶರಣ ಬನಾರಿ ಅವರ ವತಿಯಿಂದ ವಿಶೇಷ ಯಕ್ಷಗಾನ ತಾಳಮದ್ದಳೆ ಕಲಾಸೇವೆಯು ಶ್ರೀ ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ನೆರವೇರಿತು.
ಕೀರಿಕ್ಕಾಡು ವನಮಾಲ ಕೇಶವ ಭಟ್ಟರ ಹಿರಿತನದಲ್ಲಿ ಜರಗಿದ “ದಾನಶೂರ ಕರ್ಣ” ಯಕ್ಷಗಾನ ತಾಳಮದ್ದಳೆಯ ಕಾರ್ಯಕ್ರಮದಲ್ಲಿ ಸರೋಜಿನಿ ಬನಾರಿ ಅವರು ಸ್ವಾಗತಿಸಿದರು. ಭಾಗವತರಾಗಿ ವಿಶ್ವವಿನೋದ ಬನಾರಿ, ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ ಕಾಣಿಸಿಕೊಂಡರು. ಚೆಂಡೆಮದ್ದಳೆ ವಾದನದಲ್ಲಿ ಕಲ್ಲಡ್ಕ ಶಿವರಾಮ ಕಲ್ಲೂರಾಯ, ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ನಾರಾಯಣ ಪಾಟಾಳಿ ಮಯ್ಯಾಳ, ಸದಾನಂದ ಮಯ್ಯಾಳ, ವಿಷ್ಣುಶರಣ ಬನಾರಿ ಭಾಗವಹಿಸಿದರು. ರಾಮನಾಯ್ಕ ದೇಲಂಪಾಡಿ ಅವರು ಚಕ್ರತಾಳ ನುಡಿಸಿದರು.
ಅರ್ಥಧಾರಿಗಳಾಗಿ ಕೀರಿಕ್ಕಾಡು ಗಣೇಶ ಶರ್ಮ ಸಿದ್ಧಕಟ್ಟೆ (ಕರ್ಣ), ನಾರಾಯಣ ದೇಲಂಪಾಡಿ (ಅರ್ಜುನ 1ನೇ ಭಾಗ), ಎ.ಜಿ ಮುದಿಯಾರು (ಅರ್ಜುನ 2ನೇ ಭಾಗ), ಕಲ್ಲಡ್ಕ ಗುತ್ತು ರಾಮಯ್ಯ ರೈ (ಶ್ರೀಕೃಷ್ಣ 1ನೇ ಭಾಗ), ರಾಮಣ್ಣ ಮಾಸ್ತರ್ ದೇಲಂಪಾಡಿ (ಶ್ರೀಕೃಷ್ಣ 2ನೇ ಭಾಗ), ಯಂ ರಮಾನಂದ ರೈ ದೇಲಂಪಾಡಿ (ಶಲ್ಯ), ವಿಕೇಶ್ ರೈ ಶೇಣಿ (ಅಶ್ವಸೇನ), ಬಿ.ಯಚ್.ವೆಂಕಪ್ಪ ಗೌಡ (ವೃದ್ಧ ಬ್ರಾಹ್ಮಣ) ಪಾತ್ರಧಾರಿಗಳಾಗಿ ಜನಮನವನ್ನು ರಂಜಿಸಿದರು.
ದಿವ್ಯಾನಂದ ಪೆಂರ್ದಲಪದವು ಅವರು ವಂದನಾರ್ಪಣೆ ಸಲ್ಲಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…