ದೇವದಲ್ಲಿ 29ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ

August 27, 2019
10:09 PM

ಗುತ್ತಿಗಾರು:  ಗೆಳೆಯರಬಳಗ  ದೇವ , ಜ್ಯೋತಿಲಕ್ಷ್ಮಿಮಹಿಳಾಮಂಡಲ  ದೇವ , ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ , ಅಂಗನವಾಡಿ ಬೆಂಬಲ ಸಮಿತಿ ದೇವ -ದೇವಚಳ್ಳ , ಇವುಗಳ ಜಂಟಿ ಆಶ್ರಯದಲ್ಲಿ 29ನೆ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ದೇವ  ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ನಡೆಯಿತು.

ಪುರುಷರ ಮೊಸರುಕುಡಿಕೆ ಮಹಿಳೆಯರ ಜಾರುಕಂಬ , 5 ವರ್ಷದ ಒಳಗಿನ ಸಾರ್ವಜನಿಕ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ , ಪುರುಷರಿಗೆ , ಮಹಿಳೆಯರಿಗೆ , ಸಾರ್ವಜನಿಕಶಾಲಾ ಮಕ್ಕಳಿಗೆ , ಶಾಲಾಮಕ್ಕಳಿಗೆ , ಅಂಗನವಾಡಿಮಕ್ಕಳಿಗೆ , ಪ್ರತ್ಯೇಕ ಆಟೋಟ ಸ್ಪರ್ಧೆ ಗಳು ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಆನಂದ ದೇವ ನಿರ್ವಹಿದರು. ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಯೋಗಿಶ್ ದೇವ ಅದ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ದಿವಾಕರ ಮುಂಡೋಡಿ ಅಧ್ಯಕ್ಷರು ಗ್ರಾಮಪಂಚಾಯತ್ ದೇವಚಳ್ಳ ,ಸೀತಾರಾಮ ಬೆಳ್ಳಾರೆ ವಲಯ ಮೇಲ್ವಿಚಾರಕರು ಸುಬ್ರಹ್ಮಣ್ಯ ವಲಯ, ಬಾಲಕೃಷ್ಣ ಸೋನಮನೆ ಹಿರಿಯ ಗುಮಾಸ್ತ ರಬ್ಬರ್ ಖರೀದಿ ಕೇಂದ್ರ ಗುತ್ತಿಗಾರು, ವಸಂತಕುಮಾರ ಮುಂಡೋಡಿ ನಿವೃತ ಹಿರಿಯ ಗುಮಾಸ್ತ  ಪಾ . ಕೃ . ಪ . ಸ . ಸಂಘ . ನಿ ಗುತ್ತಿಗಾರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೆಳೆಯರ ಬಳಗ ಮತ್ತು ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲ ಜಂಟಿಯಾಗಿ ಆಯೋಜಿಸಿದ ಅದೃಷ್ಟ ಚೀಟಿಯ ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಗೆಳೆಯರ ಬಳಗದೇವ ಇದರ ರಂಗಮಂದಿರದ ವಿದ್ಯುತ್ ಸಂಪರ್ಕಕ್ಕೆ ಮುಂಗಡವಾಗಿ ರೂ.5000 ಸಾವಿರಗಳನ್ನು ನೀಡಿರುವ ವಸಂತ ಕುಮಾರ್ ಮುಂಡೋಡಿಯವರನ್ನು ಗೌರವಿಸಲಾಯಿತು .

ತೀರ್ಥೆಶ್ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿ‌ನಯಕುಮಾರ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು. ಪುನೀತ್ ರವಿ ಹಿರಿಯಡ್ಕ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುಟ್ಕಾ ಪ್ರಕರಣಗಳಲ್ಲಿ ಎಂಸಿಒಸಿಎ ಜಾರಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್ – ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೋರಿದ ಕೋರ್ಟ್
July 9, 2026
9:28 PM
by: ದ ರೂರಲ್ ಮಿರರ್.ಕಾಂ
ಗುಟ್ಕಾ ಜಾಲಕ್ಕೆ ಮಹಾರಾಷ್ಟ್ರದ ಭಾರೀ ಹೊಡೆತ..! 700ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲು – ಕಳಪೆ ಅಡಿಕೆ ಸಾಗಾಟವೂ ಈ ವ್ಯಾಪ್ತಿಯಲ್ಲಿ..!
July 9, 2026
9:12 PM
by: ಮಿರರ್‌ ಡೆಸ್ಕ್‌
ಮಂಗಳೂರಿನಲ್ಲಿ ಉದ್ಯೋಗ ಮೇಳ – ಜುಲೈ 14ರಂದು ನೇರ ಸಂದರ್ಶನ – ಬ್ಯಾಂಕ್‌ನಿಂದ ಟೆಕ್ನಿಕಲ್‌ ಹುದ್ದೆಗಳವರೆಗೆ ಅವಕಾಶ
July 9, 2026
8:51 PM
by: ದ ರೂರಲ್ ಮಿರರ್.ಕಾಂ
ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!
July 9, 2026
2:37 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror