ಗುತ್ತಿಗಾರು: ಗೆಳೆಯರಬಳಗ ದೇವ , ಜ್ಯೋತಿಲಕ್ಷ್ಮಿಮಹಿಳಾಮಂಡಲ ದೇವ , ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ , ಅಂಗನವಾಡಿ ಬೆಂಬಲ ಸಮಿತಿ ದೇವ -ದೇವಚಳ್ಳ , ಇವುಗಳ ಜಂಟಿ ಆಶ್ರಯದಲ್ಲಿ 29ನೆ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ದೇವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ನಡೆಯಿತು.
ಪುರುಷರ ಮೊಸರುಕುಡಿಕೆ ಮಹಿಳೆಯರ ಜಾರುಕಂಬ , 5 ವರ್ಷದ ಒಳಗಿನ ಸಾರ್ವಜನಿಕ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ , ಪುರುಷರಿಗೆ , ಮಹಿಳೆಯರಿಗೆ , ಸಾರ್ವಜನಿಕಶಾಲಾ ಮಕ್ಕಳಿಗೆ , ಶಾಲಾಮಕ್ಕಳಿಗೆ , ಅಂಗನವಾಡಿಮಕ್ಕಳಿಗೆ , ಪ್ರತ್ಯೇಕ ಆಟೋಟ ಸ್ಪರ್ಧೆ ಗಳು ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಆನಂದ ದೇವ ನಿರ್ವಹಿದರು. ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಯೋಗಿಶ್ ದೇವ ಅದ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ದಿವಾಕರ ಮುಂಡೋಡಿ ಅಧ್ಯಕ್ಷರು ಗ್ರಾಮಪಂಚಾಯತ್ ದೇವಚಳ್ಳ ,ಸೀತಾರಾಮ ಬೆಳ್ಳಾರೆ ವಲಯ ಮೇಲ್ವಿಚಾರಕರು ಸುಬ್ರಹ್ಮಣ್ಯ ವಲಯ, ಬಾಲಕೃಷ್ಣ ಸೋನಮನೆ ಹಿರಿಯ ಗುಮಾಸ್ತ ರಬ್ಬರ್ ಖರೀದಿ ಕೇಂದ್ರ ಗುತ್ತಿಗಾರು, ವಸಂತಕುಮಾರ ಮುಂಡೋಡಿ ನಿವೃತ ಹಿರಿಯ ಗುಮಾಸ್ತ ಪಾ . ಕೃ . ಪ . ಸ . ಸಂಘ . ನಿ ಗುತ್ತಿಗಾರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಮತ್ತು ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲ ಜಂಟಿಯಾಗಿ ಆಯೋಜಿಸಿದ ಅದೃಷ್ಟ ಚೀಟಿಯ ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಗೆಳೆಯರ ಬಳಗದೇವ ಇದರ ರಂಗಮಂದಿರದ ವಿದ್ಯುತ್ ಸಂಪರ್ಕಕ್ಕೆ ಮುಂಗಡವಾಗಿ ರೂ.5000 ಸಾವಿರಗಳನ್ನು ನೀಡಿರುವ ವಸಂತ ಕುಮಾರ್ ಮುಂಡೋಡಿಯವರನ್ನು ಗೌರವಿಸಲಾಯಿತು .
ತೀರ್ಥೆಶ್ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿನಯಕುಮಾರ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು. ಪುನೀತ್ ರವಿ ಹಿರಿಯಡ್ಕ ವಂದಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…
ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…
ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…
ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…
ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…